ಹೊನ್ನಾವರ : ಹೆಸರಾಂತ ಲೇಖಕಿ, ಆಕಾಶವಾಣಿ ನಿಲಯ ನಿವೃತ್ತ ನಿರ್ದೇಶಕಿ, ಇತಿಹಾಸಜ್ಞೆ, ಹೊನ್ನಾವರದ ಸೊಸೆ ಶ್ರೀಮತಿ ಜ್ಯೋತ್ಸ್ನಾಕೃಷ್ಣಾನಂದ ಕಾಮತ್ ತಮ್ಮ 85ನೇ ವಯಸ್ಸಿನಲ್ಲಿ ಬೆಂಗಳೂರು ಸ್ವಗೃಹದಲ್ಲಿ ಇಹಲೋಕ ತ್ಯಜಿಸಿದ್ದಾರೆ. ಮಗ ವಿಕಾಸ್ ಕಾಮತ್ ಸಹಿತ ಅಪಾರ ಸಾಹಿತ್ಯಾಭಿಮಾನಿಗಳನ್ನು, ಕಾಮತ್ ಕುಟುಂಬಸ್ಥರನ್ನು ಅಗಲಿದ್ದಾರೆ. ಇವರ ಆತ್ಮಕ್ಕೆ ಭಗವಂತ ಚಿರುಶಾಂತಿ ನೀಡಲೆಂದು ಇವರ ಅಭಿಮಾನಿಗಳು ಹಾಗೂ ಹಿತೈಷಿಗಳು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ.

RELATED ARTICLES  `ಮಿಸ್ ಕರ್ನಾಟಕ’ ಪಟ್ಟ ಅಲಂಕರಿಸಿದ ಉತ್ತರ ಕನ್ನಡದ ಬೆಡಗಿ ಭಾವನಾ ಭಾಗವತ್

ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಚಾಪು ಮೂಡಿಸುವ ಮೂಲಕ ಆಕಾಶವಾಣಿ ನಿಲಯ ಸಹಾಯಕಿಯಾಗಿ ಇವರು ಕಾರ್ಯನಿರ್ವಹಿಸಿದ್ದರು. ಸ್ನೇಹಪರ ವ್ಯಕ್ತಿತ್ವ ಹಾಗೂ ಅಪಾರಜ್ಞಾನದಿಂದಾಗಿ ಸಮಾಜದಲ್ಲಿ ಗುರುತಿಸಿಕೊಂಡಿದ್ದ ಇವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಹೇಳಲಾಗಿದೆ.

RELATED ARTICLES  ಮುಗ್ವಾದಲ್ಲಿ ಯಶಸ್ವಿಗೊಂಡ ಉತ್ತರಕನ್ನಡ ಜಿಲ್ಲಾ ಸಂಸ್ಕೃತ ಸಮ್ಮೇಳನ