Home Uttara Kannada ಮುಗ್ವಾದಲ್ಲಿ ಯಶಸ್ವಿಗೊಂಡ ಉತ್ತರಕನ್ನಡ ಜಿಲ್ಲಾ ಸಂಸ್ಕೃತ ಸಮ್ಮೇಳನ

ಮುಗ್ವಾದಲ್ಲಿ ಯಶಸ್ವಿಗೊಂಡ ಉತ್ತರಕನ್ನಡ ಜಿಲ್ಲಾ ಸಂಸ್ಕೃತ ಸಮ್ಮೇಳನ

ಸಂಸ್ಕೃತಭಾರತಿಯ ನೇತ್ರತ್ವ ಹಾಗೂ ರಾಘವೇಂದ್ರ ಭಾರತೀ ಸವೇದ ಸಂಸ್ಕೃತ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ವಿವಿಧ ಸಂಘಟನೆಗಳ ಸಹಕಾರದಲ್ಲಿ ಉತ್ತರಕನ್ನಡ ಜಿಲ್ಲಾ ಸಂಸ್ಕೃತ ಜನಪದ ಸಮ್ಮೇಳನ “ಸಂಸ್ಕೃತ ಶರಧಿಃ” ಎಂಬ ಕಾರ್ಯಕ್ರಮವು ಮುಗ್ವಾದ ಮಯೂರಮಂಟಪಲ್ಲಿ ಸಮಾರಂಭಗೊಂಡಿತು. ಸಭೆಯನ್ನು ಉಧ್ಘಾಟಿಸಿದ SRL ಸಮೂಹ ಸಂಸ್ಥೆಯ ಮಾಲಿಕರಾದ ಶ್ರೀ ವೆಂಕಟರಮಣ ಹೆಗಡೆಯವರು ಜನರಲ್ಲಿ ಸುಸಂಸ್ಕೃತಿಯನ್ನು ಬೆಳೆಸುವ ಇಂತಹ ಕಾರ್ಯಕ್ಕೆ ನಮ್ಮ ಬೆಂಬಲ ಸದಾ ಇರಲಿದೆ,ಸಂಸ್ಕೃತ ಭಾಷೆಯು ಇನ್ನಷ್ಟು ಬೆಳೆಯಲಿ ಎಂದರು.

ಮುಖ್ಯ ಅತಿಥಿಗಳಾದ ಸಂಸ್ಕೃತ ಭಾರತಿಯ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಶ್ರೀ ಲಕ್ಷ್ಮೀನಾರಾಯಣರವರು ಸಾಕಷ್ಟು ಆಕ್ರಮಣಗಳನ್ನು ಎದುರಿಸಿಯೂ ಭಾರತವಿಂದು ವಿಶ್ವಗುರು ಸ್ಥಾನದ ಪ್ರಾಪ್ತಿಗೆ ದಾಪುಗಾಲಿಟ್ಟಿರುವ ಈ ಸಂದರ್ಭದಲ್ಲಿ ದೇಶದ ಪ್ರತಿಯೋರ್ವ ಪ್ರಜೆಯಲ್ಲಿ ಸಂಸ್ಕಾರ, ಸಂಸ್ಕೃತಿಯ ಪ್ರಜ್ಞೆಯನ್ನು ಮೂಡಿಸುವುದರ ಜೊತೆಗೆ ಸನಾತನಭಾಷೆಯನ್ನು ಉಳಿಸುವಲ್ಲಿ ಶ್ರಮವಹಿಸುತ್ತಿದೆ ಇದಕ್ಕೆ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯ ಎಂದರು. ಈಸಂದರ್ಭದಲ್ಲಿ RSS ಪ್ರಮುಖರಾದ ಶ್ರೀ ಕೃಷ್ಣ ಜೋಶಿ ಸಂಕೊಳ್ಳಿ , ಸ್ಥಳೀಯ ಗ್ರಾಮಪಂಚಾಯತ ಸದಸ್ಯರುಗಳಾದ ಶ್ರೀ ಗೋವಿಂದ ಭಟ್ , ಶ್ರೀಮತಿ ಆಶಾ ನಾರಾಯಣ ಹೆಗಡೆ , ಪ್ರಾಂಶುಪಾಲರಾದ ಡಾ. ನಾಗಪತಿ ಭಟ್ , ಸಮ್ಮೇಳನ ಸಮಿತಿ ಪ್ರಮುಖರಾದ ಶ್ರೀ ಈಶ್ವರ ಭಟ್ ,ವಿದ್ವಾನ್ ಗಣಪತಿ ಭಟ್ ಹಡಿನಬಾಳ ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳ ಸಂಸ್ಕೃತ ಶಿಕ್ಷಕರು ಉಪಸ್ಥಿತರಿದ್ದರು. ವಿದ್ವಾನ್ ವಿ.ಜಿ.ಹೆಗಡೆ ಗುಡ್ಗೆ ಸ್ವಾಗತಿಸಿದರು. ಶ್ರೀ ರಘುರಾಮ ಶಾಸ್ತ್ರಿ ವೇದಘೋಷ ನಡೆಸಿದರು. ಸಮಿತಿಯ ಸಂಚಾಲಕರಾದ ಬಾಳಿಗಾ ಕಾಲೇಜಿನ ಶ್ರೀ ಗಣೇಶ ಭಟ್ ಕುಮಟಾ ವಂದಿಸಿದರು. SDM ಹೊನ್ನಾವರ ಕಾಲೇಜಿನ ಶ್ರೀ ವಿನಾಯಕ ಭಟ್ ಗಾಣಗೇರಿ ನಿರ್ವಹಿಸಿದರು.