ಚಿತ್ರದುರ್ಗ: ಬಾಲಕಿಯರಿಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇರೆಗೆ ಪೋಕ್ಸೋ ಕಾಯ್ದೆಯಡಿ ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದು, ಜೈಲಿನಲ್ಲಿ ಶ್ರೀಗಳಿಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಜಿಲ್ಲಾ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ವೈದ್ಯರು ಮುರುಘಾ ಶ್ರೀಗಳ ಇಸಿಜಿ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಸದ್ಯ ತಪಾಸಣೆಯ ನಂತರ ಮುರುಘಾ ಶರಣರಿಗೆ ವೈದ್ಯರು ಗ್ಲೂಕೋಸ್ ಬಾಟಲ್ ಹಾಕಿದ್ದಾರೆ. ಗ್ಲೂಕೋಸ್ ಮುಗಿಯಲು ಇನ್ನೂ ಅರ್ಧ ಗಂಟೆ ಸಮಯ ಬೇಕಿದೆ. ಗ್ಲೂಕೋಸ್ ಮುಗಿದ ಮೇಲೆ ಹೆಚ್ಚಿನ ಚಿಕಿತ್ಸೆ ಬೇಕೋ? ಬೇಡವೋ? ಎಂಬುದನ್ನು ವೈದ್ಯರು ನಿರ್ಧರಿಸಲಿದ್ದಾರೆ.

RELATED ARTICLES  ಕುಮಟಾದಲ್ಲಿ ಮೆರವಣಿಗೆ ನಡೆಸಿ ಹಳೆಯ ಬಸ್ ನಿಲ್ದಾಣದ ಆವಾರದಲ್ಲಿ ಯೋಗ ಪ್ರದರ್ಶನ

ಲೈಂಗಿಕ ದೌರ್ಜನ್ಯ ಮತ್ತು ದಲಿತರ ಮೇಲಿನ ದೌರ್ಜನ್ಯ ಆರೋಪದಡಿ ಬಂಧನ ಭೀತಿಯಲ್ಲಿದ್ದ ಸ್ವಾಮೀಜಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಗುರುವಾರ ವಿಚಾರಣೆಗೆ ಕೈಗೆತ್ತಿಕೊಂಡ ಸ್ಥಳೀಯ ನ್ಯಾಯಾಲಯ, ಶುಕ್ರವಾರ ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಅವಕಾಶ ನೀಡಿತ್ತು. ಗುರುವಾರ ರಾತ್ರಿ ಸ್ವಾಮೀಜಿಯನ್ನು ಬಂಧಿಸಲಾಗಿದೆ.

RELATED ARTICLES  ಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣ : ನಾಲ್ವರು ಅರೆಸ್ಟ್..!

ಡಿವೈಎಸ್ಪಿ ಅನಿಲ್‌ಕುಮಾರ್‌ ನೇತೃತ್ವದ ಗ್ರಾಮಾಂತರ ಠಾಣೆ ಪೊಲೀಸರ ತಂಡ ಮುರುಘಾಮಠಕ್ಕೆ ಆಗಮಿಸಿ ಬಂಧನದ ಅನಿವಾರ್ಯತೆ ಮನವರಿಕೆ ಮಾಡಿಕೊಟ್ಟು ಶ್ರೀಗಳನ್ನು ಬಂಧಿಸಿದ್ದಾರೆ. ನಂತರ ತಡರಾತ್ರಿ ಸುಮಾರು ೨ ಗಂಟೆಗೆ ಜಿಲ್ಲಾ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ನಂತರ ಅವರಿಗೆ ಹದಿನಾಲ್ಕು ದಿನಗಳ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.