ವಚನ ೨

ಸಾಲವನು ಕೊಂಬಾಗ ಎಚ್ಚರದಿ ಇರುತಿರೆ
ಸೋಲನು ಉಣ್ಣುವ ಸ್ಥಿತಿಯು
ಬರದಯ್ಯ

ಸಹನೆಯು ಇರುತಿರೆ ನಯ ವಿನಯ ಜೊತೆಯಾಗೆ ಸಾಲಗಾರನ ಮನಸು ಗಟ್ಟಿ ಶಿಲೆಯಾಗೆ ಸಾಲ ಕೊಟ್ಟವರ
ಕಾಟವನು ಸಹಿಸಿ ತಿರುಗಿಸಲು ಅನುವಯ್ಯ
ಸಾಲದ ಶೂಲದಲಿ ತಲೆಯಹೊರೆಯದು ಭಾರ ಜಾಣತನದಲಿ ಪರಿಹರಿಸಯ್ಯ
ಸಾಲ ತೀರಿಸಿ ಋಣವ ತೊಳೆಯಯ್ಯ
ಎಂದುಲಿವಳು
ವಚನೆ ಹರಿಕಾರಿಣಿ ಕಲ್ಪವಲ್ಲಿ

 

ವಚನ ೩

ಬವಣೆಯನು ಅನುಭವಿಸೆ ಮನ ಕ್ಲೇಶ ಕಷ್ಟಕರ ಬದುಕಿನ ದಿನವು ಕಣಯ್ಯ
ತಾಳ್ಮೆಯಿಂ ಅನುಭವಿಸೆ ಅನುಕೂಲ ಕಾರ್ಯವಂ ಪೂರೈಸೆ ದಿನ ದಿನಕೂ ಕ್ಷೀಣಿಪುದು ಬವಣೆಯುರಿ ಕಾಣಯ್ಯ
ಬವಣೆ ಬಂದಾಗ ಕಂಗೆಡದಿರು ಮನುಜ ಭ್ರಮೆಯಾದೀನನಾಗದೆ ವಾಸ್ತವತೆಯ ಪ್ರತಿಪಾದಿಸಿ ಮುಂದೆಜ್ಜೆಯನಿಡು ಅಯ್ಯ
ಎಂದುಲಿವಳು
ವಚನೆ ಹರಿಕಾರಿಣಿ ಕಲ್ಪವಲ್ಲಿ

RELATED ARTICLES  ಸಾಧನೆ ಮಾಡುತ್ತಾ ಇರುವಾಗ ಸ್ಫುರಿಸಿದ ಕಾವ್ಯವೆಂದರೆ ಗುರುಕೃಪೆಯೆಂದೇ ತಿಳಿಯಬೇಕು! ಶ್ರೀಧರರ ವಾಣಿಯಿದು.

 

ವಚನ ೪

ಜನರಲ್ಲಿ ಅಡಂಬರ ಡಂಭಾಚಾರಗಳ ಕುಣಿತವಯ್ಯ
ಪ್ರಾಮಾಣಿಕತೆ ಸರಳತೆಯು ಮಾಯವಾಗುತಿದೆಯ್ಯ
ದಿನದಿನವೂ ನೈತಿಕತೆ ಕಳೆಯುತಿದೆಯ್ಯ
ಜಗವು ಮಳೆ ಬೆಳೆಗಾಗಿ ಉತ್ತಮಿಕೆಯ ನಡೆಯ ಉಳಿಸಬೇಕಯ್ಯ
ನೈತಿಕ ಹೊಣೆಗೆ ಕಾಳಜಿ ಇರಲಯ್ಯ
ಶಾಂತ ಸುಭೀಕ್ಷೆಯ ಕಾಲ ಭಾರತಕೆ ಇರಲೆಂದು ಬೇಡಿ ಶ್ರಮಿಸುತಿರಬೇಕಯ್ಯ
ಎಂದುಲಿವಳು
ವಚನೆ ಹರಿಕಾರಿಣಿ ಕಲ್ಪವಲ್ಲಿ

RELATED ARTICLES  ಭಟ್ಕಳದಲ್ಲಿ ಬಾಂಬ್ ಬೆದರಿಕೆ : ಆರೋಪಿ ಅರೆಸ್ಟ್..!

ವಚನ ೫

ನಾರಿಯರ ವೇಷ ಭೂಷಣದಲ್ಲಿ
ಬದಲಾವಣೆಯ ಕ್ರಾಂತಿಯಯ್ಯ
ಗಂಡುಡುಗೆ ಬಣ್ಣ ಬಣ್ಣದ ಪೋಷಾಕುಗಳ ಬಿರುಗಾಳಿಯಯ್ಯ
ಸೀರೆ ರವಿಕೆಯು ಅಗಾಗ ಹಬ್ಬದಂತೆ ಸಂಪ್ರದಾಯದ ಉಡುಗೆಯಾಗುತಿದೆಯಯ್ಯ
ಹೊರಗೆಲಸ ಮನೆಗೆಲಸದಲಿ ಸ್ತ್ರೀ ನೈಪುಣ್ಯತೆಯು ತುಂಬಿದೆಯಯ್ಯ
ನಾರಿ ಪರರಿಗುಪಕಾರಿಯಾಗಿ
ತನ್ನ ಹಿತದಲಿ ಅನಂದಿತಳಾಗಿ
ಜಗದ ಸೂತ್ರಧಾರಿಣಿ ಪಟ್ಟದಲಿ
ಮುಂದುವರಿಯಲಯ್ಯ
ಎಂದುಲಿವಳು
ವಚನೆ ಹರಿಕಾರಿಣಿ ಕಲ್ಪವಲ್ಲಿ

ಕಲ್ಪನಾಅರುಣ
ಶಿಕ್ಷಕಿ ಬರೆಹಗಾರ್ತಿ