ಲೇಖನ ಬರಹ : ಕಾಗಾಲ ಚಿದಾನಂದ ಭಂಡಾರಿ. ಬರಹಗಾರರು, ಸಾಹಿತಿಗಳು ಹಾಗೂ ಶಿಕ್ಷಕರು

ಅಪ್ರತಿಮ ಕಲಾವಿದರ ತಂಡವನ್ನು ಪರಿಚಯಿಸುತ್ತಾ…….

ನಿನ್ನೆಯಷ್ಟೇ ಜಿ ಡಿ ಭಟ್ಟ ಕೆಕ್ಕಾರ ಅವರು ರಚಿಸಿದ ಗಣಪತಿಯ ಉಡುಗೆಯ ಕುರಿತಾದ ಗೊಂದಲಗಳಿಗೆ ತೆರೆ ಎಳೆಯಬೇಕೆಂಬ ಕಾರಣಕ್ಕೆ ನನ್ನ ವಿಚಾರಗಳನ್ನು ಕಲಾವಿದರ ಕುರಿತಾದ ನನ್ನ ಅಭಿಮಾನಗಳನ್ನು ಅಕ್ಷರಗಳ ರೂಪದಲ್ಲಿ ಪ್ರಟಿಸಿದ್ದೆ .ಅದು ಫೇಸ್ಬುಕ್ ಮಾಧ್ಯಮದ ಮೂಲಕ ಓದುಗರನ್ನು ತಲುಪಿದಾಗ ಈ ವಿಷಯಕ್ಕೆ ನೇರವಾದ ಸಂಬಂಧ ಇರುವ ಕಲಾವಿದ ಗಣೇಶ ಶೆಟ್ಟಿಯವರು ಇದರ ಬಗ್ಗೆ ಇರುವ ವಾಸ್ತವಾಂಶ ಇನ್ನೂ ಸ್ಪಷ್ಟವಾಗಬೇಕೆಂಬ ಅಪೇಕ್ಷೆಯಿಂದ ತಮ್ಮ ದೂರವಾಣಿ ಸಂಖ್ಯೆಯನ್ನು ನಮೂದಿಸಿ ಕರೆಮಾಡಲು ಸಂದೇಶವನ್ನು ನೀಡಿದ್ದರು.ಜಿ ಡಿ ಭಟ್ಟರ ರಂಗಶಾಲೆಯ ಸರ್ವ ಕಲಾವಿದರ ಕುರಿತಾದ ಮಾಹಿತಿ ಪಡೆವ ತವಕದಿಂದ ಇಂದು ಗಣೇಶ ಶೆಟ್ಟಿ ಅವರಿಗೂ ಪೋನಾಯಿಸಿದೆ.ಅವರಿಂದ ಕೆಲವು ಮಾಹಿಯನ್ನು ಕೇಳಿಪಡೆದೆ.

ಕೆಕ್ಕಾರ ಜಿ ಡಿ ಭಟ್ಟರ ಗಣಪತಿ ವಿಗ್ರಹ ನಿರ್ಮಾಣ ತಂಡದ ರಚನಾತ್ಮ ಕಾರ್ಯ ಚಟುವಟಿಕೆ ಬಹಳ ಅನ್ಯೋನ್ಯತೆಯಿಂದ ಕೂಡಿದೆ. ತಿಂಗಳಾನು ಗಟ್ಟಲೆ ಜರುಗುವ ಈ ಸಾಮೂಹಿಕ ಪರಿಶ್ರಮದಲ್ಲಿ ಪ್ರತಿಯೊಬ್ಬರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ.ಗಣಪತಿ ಮೂರ್ತಿಗೆ ಬಳಸುವ ಮಣ್ಣು ಹೊರುವ ,ಜಪ್ಪಿ‌ ಹದ ಮಾಡುವ ಕಾಯಕದಿಂದ ಹಿಡಿದು ಅಂತಿಮ ಸ್ಪರ್ಶ ಕೊಡುವ ತನಕ ಹಲವಾರು ಕೈಗಳು ತಮ್ಮ ಕೈಚಳಕ ಮೆರೆಯುತ್ತವೆಎಂಬ ವಿಚಾರ ಗಣೇಶ ಶೆಟ್ಟಿ ಅವರಿಂದ ತಿಳಿದೆ. ಈ ರಂಗ ಶಾಲೆಯ ಪ್ರಾಚಾರ್ಯರು ಹೆಮ್ಮೆಯ ಜಿ ಡಿ ಭಟ್ಟರು. ಅವರ ಬಗ್ಗೆ ಮಾತಾಡುವಾಗ ಗಣೇಶ ಶೆಟ್ಟಿ ಅವರಿಗೆ ಅಭಿಮಾನ ಉಕ್ಕಿ ಬರುತ್ತದೆ.

RELATED ARTICLES  ಹಿಂದು ಸಂಸ್ಕೃತಿ, ಹಿಂದೂ ದೇಶದ ಬಗ್ಗೆ ಶ್ರೀಧರರ ನುಡಿಗಳಿವು.

ಅವರು ಹೇಳಿದಂತೆ ಹದಗೊಂಡ ಜೇಡಿ ಮಣ್ಣಿನಿಂದ ತಮ್ಮ ಕಲ್ಪನೆಯಂತೆ ಶ್ರೀಯುತ ಜಿ ಡಿ ಭಟ್ಟರು ಮೂರ್ತಿಯನ್ನು ಮೆತ್ತುತ್ತಾರೆ.ಅದನ್ನು ಅವರ ಅಣ್ಣನ ಮಗ ಎಂ ಡಿ ವಿನಾಯಕ ಕೆತ್ತಿ ನುಣುಪಾಗಿಸುತ್ತಾರೆ ಹಾಗೂ ಪ್ರತೀ ಗಣಪತಿ ಮೂರ್ತಿಗೂ ಬಣ್ಣ ಬಳಿದು ಸುಂದರ ಗೊಳಿಸುವ ಕಾರ್ಯವನ್ನು ಅದ್ಭುತ ಬಣ್ಣಗಾರರು ಚಿತ್ರಕಲಾವಿದ ಸಹೋದರರಾದ ಗಣೇಶ ಶೆಟ್ಟಿ ಹಾಗೂ ಅವರ ಅಣ್ಣ ರಾಮಚಂದ್ರ ಶೆಟ್ಟಿ ಅವರು ಮಾಡುತ್ತಾರೆ.ಈ ಕಾರ್ಯ ಕಳೆದ ಮೂವತ್ತು ವರುಷಗಳಿಗೂ ಮಿಗಿಲಾಗಿ ನಡೆಯುತ್ತಾಬಂದಿದ್ದು ಈ ಎಲ್ಲರ ಒಕ್ಕಟ್ಟಿನ ಪರಿಶ್ರಮವಾಗಿ ಕೆಕ್ಕಾರದಲ್ಲಿ ಅದ್ಭುತ ಕಲಾಪ್ರಪಂಚವೊಂದು ರೂಪುಗೊಂಡಿದೆ.

ಇವರೊಂದಿಗೆ ನಾರಾಯಣ, ಸತೀಶ್ ಭಟ್ಟ,ಗಣಪತಿ, ಮಂಜು,ಸತೀಶ,ರವಿ ಹರ್ನೀರು, ವಿಶು ಊರಕೇರಿ ಇವರೆಲ್ಲರೂ ಸಹಕರಿಸುತ್ತಾರಂತೆ
ಅಷ್ಟಕ್ಕೂ ಇಲ್ಲಿಯ ತನಕವೂ ರಚಿಸಿದ ಪ್ರತಿಮೆಗಳಿಗೆ ಮಣ್ಣಿನಲ್ಲಿಯೇ ಉಡುಗೆ ತೊಡುಗೆ ಮಾಡಿ ಅದಕ್ಕೆ ಬಣ್ಣ ಹಚ್ಚಿ ಅದು ಸಹಜವೇ ಎನ್ನುವಷ್ಟು ಅದ್ಭುತವಾಗಿ ಸಿದ್ಧಪಡಿಸುವ ಈ ಕಲಾತಂಡದ ಪ್ರಧಾನ ವ್ಯಕ್ತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಜಿ ಡಿ ಭಟ್ಟ ಅವರಿಗೆ ಈ ಬಾರಿ ಕೆಲದಿನಳ ಅನಾರೋಗ್ಯದ ಕಾರಣದಿಂದ ಸಮಯದೊಳಗೆ ಗಣಪತಿಯನ್ನು ಮೆತ್ತಿ ಪೂರೈಸಲು ಆಗಲಿಲ್ಲವಂತೆ ಚೌತಿ ಹಬ್ಬದ ದಿನವೂ ಗಣಪತಿಯ ವಿಗ್ರಹ ಮೆತ್ತಬೇಕಾದ ಅನಿವಾರ್ಯತೆಯಲ್ಲಿ ಈ ಚರ್ಚಿತ ಗಣಪನಿಗೆ ಅವರ ಕಲ್ಪನೆಯಂತೆ ತೊಡುಗೆ ಮಾಡಿ ಬಣ್ಣ ಹಚ್ಚಿಸಿದ್ಧಗೊಳಿಸಲು ಬಹಳ ಸಮಯ ಬೇಕಾದ ಕಾರಣ ಅನಿವಾರ್ಯವಾಗಿ ಇದೇ ಮೊದಲ ಬಾರಿಗೆ ಈ ಗಣಪತಿಗೆ ನಿಜವಾದ ರೇಷ್ಮೆ ವಸ್ತ್ರ ತೊಡಿಸಿದರಂತೆ ,ಅದಲ್ಲದೇ ವಿರಳವಾಗಿ ಕೆಲವೊಮ್ಮೆ ಉತ್ತರೀಯವನ್ನು ಬಟ್ಟೆಯಿಂದ ಮಾಡಿರುವುದು ಬಿಟ್ಟರೆ ಎಲ್ಲವೂ ಮಣ್ಣಿನ ಮಾಯೆಯೇ ಆಗಿದೆ.

RELATED ARTICLES  ದೂರಕ್ಕೆ ಸರಿ-ಪಕ್ಕಕ್ಕೆ ಸರಿ ಭಾಗ-3

ಅದೇನಿದ್ದರೂ ಈ ಕೆಕ್ಕಾರದ ಕಲಾ ತಂಡದ ಗಣಪತಿಯ ಮಹಿಮೆ ದೇಶ ವಿದೇಶವನ್ನೂ ಪಸರಿಸಿ ಉತ್ತರಕನ್ನಡ ಜಿಲ್ಲೆಯ ಖ್ಯಾತಿಯನ್ನು ಹೆಚ್ವಿಸಿರುವುದಂತೂ ನಿಜ !
ಜಿ ಡಿ ಭಟ್ಟರಿಗೆ ಅತೀ ಶೀಘ್ರ ಪದ್ಮಶ್ರೀ ದೊರೆಯುವಂತಾಗಬೇಕು ಹಾಗೂ ಬಣ್ಣಗಾರಿಕೆಯಲ್ಲಿ ವಿಸ್ಮಯ ಲೋಕವನ್ನು ನಿರ್ಮಿಸಬಲ್ಲ ಎಲೆ ಮರೆಯ ಕಾಯಿಗಳಿಂತಿರುವ ಗಣೇಶ ಶೆಟ್ಟಿ ಹಾಗೂ ರಾಮಚಂದ್ರ ಶೆಟ್ಟಿ ಅವರಿಗೂ ಪುರಸ್ಕಾರ ಸಲ್ಲಬೇಕು ಅಲ್ಲವೇ ?