ಕಾರವಾರ: ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ನಿವಾಸಿ ಹಾಗೂ ದೈವಜ್ಞ ಬ್ರಾಹ್ಮಣ ಸಮಾಜದ ಶ್ರೇಷ್ಠ ಭಜನಾ ಗಾಯಕ ದಯಾನಂದ ಪುಂಡಲೀಕ ಪಾಲನಕರ (70) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ಆವರ್ಸಾದ ಕಾತ್ಯಾಯಿನಿ ಪ್ರೌಢಶಾಲೆಯ ಆಡಳಿತ ಮಂಡಳಿಯ ಮಾಜಿ ಸದಸ್ಯರಾಗಿ ಹಾಗೂ ವಿಠೋಬಾ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ಅನೇಕ ಸಂಘ ಸಂಸ್ಥೆಗಳ ಸದಸ್ಯರಾಗಿ ಹಾಗೂ ಗಜಾನನ ವಿಠಲ ಭಜನಾ ಮಂಡಳಿಯ ಭಜನಾ ಕಲಾವಿದರಾಗಿ ಹೆಸರುವಾಸಿಯಾಗಿದ್ದರು.

RELATED ARTICLES  ಕಳೆದ ಅನೇಕ ದಿನದಿಂದ ನಿಂತಿರುವ ಲಾರಿ : ಚಾಲಕ ಮಾಲಕರಿಂದ ಪ್ರತಿಭಟನೆ

ದಯಾನಂದ ಪಾಲನಕರ ನಿಧನಕ್ಕೆ ದೈವಜ್ಞ ಬ್ರಾಹ್ಮಣ ಸಮಾಜದ ಗುರುಗಳಾದ ಕರ್ಕಿಮಠದ ಸಚ್ಚಿದಾನಂದ ಸ್ವಾಮೀಜಿಗಳು, ಅವರ್ಸಾದ ದೈವಜ್ಞ ಬ್ರಾಹ್ಮಣ ಸಮಾಜ, ಗಜಾನನ ವಿಠಲ ಭಜನಾ ಮಂಡಳಿ, ಅಂಕೋಲಾದ ಶ್ರೀ ಗಣಪತಿ ಭಜನಾ ಮಂಡಳಿಯ ಸದಸ್ಯರು ಹಾಗೂ ಊರಿನ
ನಾಗರಿಕರು, ಬಂಧು ಮಿತ್ರರು ಸಂತಾಪ ಸೂಚಿದ್ದಾರೆ.

RELATED ARTICLES  ಕಾಲೇಜಿನಲ್ಲಿ ಕಳ್ಳತನ : 24 ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿದ ಪೊಲೀಸರು.