ಶಿರಸಿ: ತಾಲೂಕಿನ ನೇರ್ಲದ್ದದ ಸುಮಾ ಹೆಗಡೆ ಅವರು ಮಂಡಿಸಿದ ಮಹಾಪ್ರಬಂಧಕ್ಕೆ ಕರ್ನಾಟಕ ರಾಜ್ಯ ಕುವೆಂಪು ವಿಶ್ವ ವಿದ್ಯಾಲಯ ಪಿ ಎಚ್ ಡಿ ಪ್ರದಾನ ಮಾಡಿದೆ.
‘ಕಂಪಾರೇಟಿವ್ ಸ್ಟಡಿ ಅಪ್ ಕಂಟೆಂಪ್ರರಿ ಫೆಮಿನಿಸ್ಟ್ , ಪೋಸ್ಟ್ ಕೊಲೋನಿಯಲ್ ಇಶ್ಯೂಸ್ ಆಪ್ ಜಂಪಾಲಹರಿ, ನೇಮಿಚಂದ್ರಾಸ್ ಸಿಲೆಕ್ಟೆಡ್ ವರ್ಕ್ಸ್’ ಎಂಬ ವಿಷಯದ ಮೇಲೆ ಅವರು ಪ್ರಬಂಧ ಮಂಡಿಸಿದ್ದರು. ಸುಮಾ ಹೆಗಡೆ ಅವರಿಗೆ ವಿಶ್ವ ವಿದ್ಯಾಲಯದ ಇಂಗ್ಲೀಷ್ ವಿಭಾಗದ ಡಾ. ದತ್ತಾತ್ರೇಯ ಎಂ ಮಾರ್ಗದರ್ಶನ ನೀಡಿದ್ದರು.
ಸುಮಾ ಹೆಗಡೆ ನೇರ್ಲದ್ದದ ಡಿ. ಜಿ. ಹೆಗಡೆ ಹಾಗೂ ವಿನೋದಾ ಹೆಗಡೆ ಅವರ ಪುತ್ರಿಯಾಗಿದ್ದಾರೆ. ಕುಮಟಾದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸುಮಾ, ನರೇಂದ್ರ ಬಿ. ಆರ್. ಅವರ ಪತ್ನಿಯಾಗಿದ್ದಾರೆ.