ಯಲ್ಲಾಪುರ : ಬ್ಯಾಂಕ್ ಸಿಬ್ಬಂದಿಯ ಲಾಗಿನ್ ಐಡಿಯನ್ನು ಅವರ ಗಮನಕ್ಕೆ ಬಾರದಂತೆ ಉಪಯೋಗಿಸಿಕೊಂಡು ಶಾಖೆಯ ಸಹಾಯಕ ವ್ಯವಸ್ಥಾಪಕನೇ ಬ್ಯಾಂಕಿನ ಖಾತೆಯಿಂದ ತನ್ನ ಹೆಂಡತಿಯ ಖಾತೆಗೆ 2.69 ಕೋಟಿ ರೂ ಹಣ ವರ್ಗಾವಣೆ ಮಾಡಿ ಬ್ಯಾಂಕ್ ಗೆ ಮೋಸಗೊಳಿಸಿದ ಘಟನೆ ನಡೆದಿತ್ತು, ಯಲ್ಲಾಪುರ ಪಟ್ಟಣದ ಬ್ಯಾಂಕ್ ಆಫ್ ಬರೋಡಾದಲ್ಲಿ ನಡೆದ ಈ ಘಟನೆಯನ್ನು ಬೇಧಿಸಿ ಆರೋಪಿಯನ್ನ ಎಡೆಮುರಿ ಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಾಖೆಯ ಸಹಾಯಕ ವ್ಯವಸ್ಥಾಪಕನೇ ಬ್ಯಾಂಕಿನ ಖಾತೆಯಿಂದ ತನ್ನ ಹೆಂಡತಿಯ ಖಾತೆಗೆ 2.69 ಕೋಟಿ ರೂ ಹಣ ವರ್ಗಾವಣೆ ಮಾಡಿ ಬ್ಯಾಂಕ್ ಗೆ ಮೋಸಗೊಳಿಸಿದ ಘಟನೆ ನಡೆದಿದ್ದು ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಸಹಾಯಕ ವ್ಯವಸ್ಥಾಪಕನಾಗಿರುವ ಆಂಧ್ರ ಪ್ರದೇಶ ಮೂಲದ ಕುಮಾರ ಕೃಷ್ಣಮೂರ್ತಿ ಬೋನಾಲ ಎಂಬಾತ ಕಳೆದ ಏಪ್ರಿಲ್ 7 ರಿಂದ ಸೆ.9 ರವರೆಗಿನ ಅವಧಿಯಲ್ಲಿ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ವರ್ಗಾವಣೆ ಮಾಡಿದ್ದ.
ದಿನಾಂಕ: 19-09-2022 ರಂದು ಖಚಿತ ಮಾಹಿತಿ ಮೇರೆಗೆ ಆರೋಪಿತನಾದ ಕುಮಾರ ಬೋನಾಲ ತಂದೆ ಕೃಷ್ಣಮೂರ್ತಿ ಬೋನಾಲ ಸಾ: ಅನಂತರಮರ ರೂರಲ್, ಅನಂತಪುರ, ಆಂಧ್ರಪ್ರದೇಶ ರಾಜ್ಯ ಹಾಲ; ಹಳೆ ಕೊರ್ಟ ರಸ್ತೆ, ಯಲ್ಲಾಪುರ ಇತನಿಗೆ ಹುಬ್ಬಳ್ಳಿಯಲ್ಲಿ ವಶಕ್ಕೆ ಪಡೆದು ಠಾಣೆಗೆ ತಂದು ಹೆಚ್ಚಿನ ವಿಚಾರಿಸಿದ್ದು ಸದ್ರಿಯವನು ತಾನು ವರ್ಗಾವಣೆ ಮಾಡಿಕೊಂಡ ಹಣವನ್ನು ಆನ್ಲೈನ್ ಗೇಮ್ ಆಡಿ ಕಳೆದಿರುವುದಾಗಿ ಒಪ್ಪಿಕೊಂಡಿರುತ್ತಾನೆ.
ಆರೋಪಿತನಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರ ಪಡಿಸಿದ್ದು ಇರುತ್ತದೆ. ಶ್ರೀಮತಿ ಡಾ॥ ಸುಮನ ಪೆನ್ನೇಕರ ಐ.ಪಿ.ಎಸ್, ಮಾನ್ಯ ಪೊಲೀಸ್ ಅಧೀಕ್ಷಕರು, ಉತ್ತರಕನ್ನಡ ಜಿಲ್ಲೆ, ಕಾರವಾರ, ಶ್ರೀ ಎಸ್. ಬದರಿನಾಥ ಮಾನ್ಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶ್ರೀ ರವಿ ನಾಯ್ಡ ಮಾನ್ಯ ಪೊಲೀಸ್ ಉಪಾಧೀಕ್ಷಕರು ಶಿರಸಿ ರವರ ಮಾರ್ಗದರ್ಶನದಲ್ಲ. ಶ್ರೀ ಸುರೇಶ ಯಳ್ಳೂರ, ಪಿ.ಐ ಯಲ್ಲಾಪುರ ಪೊಲೀಸ್ ಠಾಣೆ. ಇವರ ನೇತ್ರತ್ವದಲ್ಲಿ ಪಿ.ಎಸ್.ಐ ಅಮೀನಸಾಬ್ ಎಮ್,ಅತ್ತಾರ, ಪ್ರೋ. ಪಿ.ಎಸ್.ಐ ಉದಯ ಡಿ ಹಾಗೂ ಸಿಬ್ಬಂದಿಯವರಾದ, ಬಸವರಾಜ, ಮಹ್ಮದ ಶಫೀ, ಗಜಾನನ, ಶೋಭಾ, ನಾಯ್ಕ ಇವರು ಸಹ ಆರೋಪಿತನನ್ನು ದಸ್ತಗಿರಿ ಮಾಡುವಲ್ಲ ಪ್ರಮುಖ ಪಾತ್ರ ವಹಿಸಿದ್ದು ಇರುತ್ತದೆ. ಸದರಿ ಪ್ರಕರಣವನ್ನು ಪತ್ತೆ ಮಾಡಿದ ಎಲ್ಲಾ ಅಧಿಕಾರಿ/ಸಿಬ್ಬಂದಿಗಳಿಗೆ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ. – ಲಾಡ್ಜ್ ನಲ್ಲಿ ನಡೆದಿತ್ತು ವೈಶ್ಯಾವಾಟಿಕೆ ದಂಧೆ ಆರೋಪಿಗಳ ಹೆಡೆಮುರಿ ಕಟ್ಟಿದ ಪೊಲೀಸರು. ತಲೆಮರೆಸಿಕೊಂಡಿದ್ದಾನೆ ಓರ್ವ ಆರೋಪಿ
ಈತ ಬ್ಯಾಂಕ್ ಸಿಬ್ಬಂದಿಯ ಲಾಗಿನ್ ಐಡಿಯನ್ನು ಅವರ ಗಮನಕ್ಕೆ ಬಾರದಂತೆ ಉಪಯೋಗಿಸಿಕೊಂಡು ಆಂಧ್ರದ ಚಿರಲಾದ ಎಸ್.ಬಿ.ಐಯಲ್ಲಿ ಖಾತೆ ಹೊಂದಿರುವ ಪತ್ನಿ ರೇವತಿ ಪ್ರಿಯಾಂಕ ಗೊರ್ರೆಯ ಖಾತೆಗೆ 2.69 ಕೋಟಿ ರೂ ವರ್ಗಾವಣೆ ಮಾಡಿ ನಾಪತ್ತೆಯಾಗಿದ್ದ. ಈ ಕುರಿತು ಶಾಖಾ ವ್ಯವಸ್ಥಾಪಕ ವಿಶ್ವೇಶ್ವರ ಭಟ್ಟ ದೂರು ನೀಡಿದ್ದು ಪ್ರಕರಣ ದಾಖಲಿಸಿದ್ದರು.