ಪ್ರಸ್ತುತ ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಸಿ.ಇ. ಟಿ ಪರೀಕ್ಷೆಯನ್ನು ಬರೆದು ಕೌನ್ಸೆಲಿಂಗ್ ಗಾಗಿ ಕಾಯುತ್ತಿದ್ದಾರೆ. ಆದರೆ ಇತ್ತೀಚೆಗೆ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಹೊಂದುವ ಅವಕಾಶದಿಂದ ಕೇವಲ ಆರ್ಥಿಕ ಕಾರಣಗಳಿಂದ ಹಿಂಜರಿಯುತ್ತಿದ್ದಾರೆ.

ಇದೀಗ ಉ.ಕ. ಜಿಲ್ಲೆಯ ಪ್ರಪ್ರಥಮ ಎಂಜಿನಿಯರಿಂಗ್ ಕಾಲೇಜು ಎಂತಲೇ ಪ್ರಸಿದ್ಧಿ ಪಡೆದು ವಿಶ್ವವಿದ್ಯಾಲಯ ಮಟ್ಟದಲ್ಲಿ ಹಲವಾರು ಚಿನ್ನದ ಪದಕಗಳನ್ನು, ರ‍್ಯಾಂಕ್ ಗಳನ್ನೂ ಪಡೆದು ಸಾಧನೆಗೈದ ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ಇಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶವನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ಪೂರ್ಣ ಪ್ರಮಾಣದ ಶಿಷ್ಯವೇತನದೊಂದಿಗೆ ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸವನ್ನು ಮುಗಿಸಬಹುದಾಗಿದೆ.

RELATED ARTICLES  ಬ್ಯಾಂಕ್ ಆಫ್ ಬರೋಡ: 427 ವಿವಿಧ ಹುದ್ದೆಗಳ ನೇಮಕಾತಿ

ಈ ಸುದ್ದಿ ಓದಿ – ೬೩ ಅಶ್ಲೀಲ ವೆಬ್ ತಾಣಗಳಿಗೆ ಬ್ರೇಕ್..! ಕೇಂದ್ರದ ಮಹತ್ವದ ಆದೇಶ.

ಕಾಲೇಜಿನಲ್ಲಿ ಪಡೆಯಬಹುದಾದ ವಿವಿಧ ಶಿಷ್ಯವೇತನಗಳ ಬಗ್ಗೆ ಮಾಹಿತಿಯನ್ನು ಹಾಗೂ ರಿಯಾಯಿತಿ ವಾರ್ಷಿಕ ಶುಲ್ಕವನ್ನು ಇಲ್ಲಿ ಪ್ರಕಟಿಸಲಾಗಿದೆ. ಪ್ರಸ್ತುತ ಶುಲ್ಕವು ಉಳಿದ ಕೋರ್ಸಗಳಾದ B.Sc., BCA, Diploma ಗಳಿಗೆ ಪೈಪೋಟಿ ಕೊಡುವಂತಿದ್ದು ಸರ್ಕಾರ ನಿಗದಿಪಡಿಸಿದ ಎಂಜಿನಿಯರಿಂಗ್ ಶುಲ್ಕಕ್ಕಿಂತಲೂ (ವರ್ಷಕ್ಕೆ ಅಂದಾಜು 1ಲಕ್ಷ ರೂಪಾಯಿ) ಅತೀ ಕಡಿಮೆ ಶುಲ್ಕದಲ್ಲಿ ಬಡ ವಿದ್ಯಾರ್ಥಿಗಳಿಗೂ ವೃತ್ತಿಪರ ತಾಂತ್ರಿಕ ಶಿಕ್ಷಣ ಹೊಂದಲು ಅನುಕೂಲವಾಗುವಂತೆ ನಿಗದಿಪಡಿಸಾಗಿದೆ.

RELATED ARTICLES  ಅತ್ಯುತ್ತಮ ಶಿಕ್ಷಣಕ್ಕಾಗಿ ಮೊದಲ ಆಯ್ಕೆ ವಿಧಾತ್ರಿ ಅಕಾಡೆಮಿ.

ಇದನ್ನೂ ಓದಿ – ಮಕ್ಕಳ ಕಳ್ಳರು ಬರ್ತಾರೆ ಎಚ್ಚರ ಎಚ್ಚರ..! ಪೊಲೀಸ್ ಮಾಹಿತಿ ಏನು?

ಇದಲ್ಲದೇ ಈ ಶುಲ್ಕವನ್ನು ಕಂತುಗಳಲ್ಲಿ ಪಾವತಿಸಲೂ ಅವಕಾಶವನ್ನು ಕಲ್ಪಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ನೋಂದಾಯಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ಮೊ.ಸಂಖ್ಯೆ 9481052256 ಗೆ ಸಂಪರ್ಕಿಸಿ ಶಿಷ್ಯವೇತನದ ಲಾಭ ಪಡೆಯಲು ಈ ಮೂಲಕ ಕೋರಲಾಗಿದೆ.