ಶ್ರೀಮಜ್ಜಗದುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಶ್ರೀಗಳ ದಿವ್ಯ ಉಪಸ್ಥಿತಿಯಲ್ಲಿ ಕೆಕ್ಕಾರಿನ ರಘೂತ್ತಮ ಮಠದಲ್ಲಿ ನಡೆದ ಶರನ್ನವರಾತ್ರಿ ಮಹೋತ್ಸವ ಸಂಪನ್ನಗೊಂಡಿತು. ನಿರಂತರವಾಗಿ 9 ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ದೇವಿ ಉಪಾಸನಾ ಕಾರ್ಯಕ್ರಮಗಳು ಸಂಪನ್ನಗೊಂಡು ವಿಜಯ ದಶಮಿಯ ದಿನದಂದು ಮಂಗಲ ಸಭೆಯಲ್ಲಿ ಬ್ರಹ್ಮೀಭೂತ ಶ್ರೀಶ್ರೀರಾಘವೇಂದ್ರಭಾರತೀ ಶ್ರೀಗಳವರಿಗೆ ಮತ್ತು ಇಂದಿನ ಶ್ರೀಗಳಿಗೆ ಪ್ರೀತಿ ಪಾತ್ರರಾಗಿದ್ದ ಕೆಕ್ಕಾರು ಮಠದಲ್ಲಿ 42ವರ್ಷಗಳಿಂದ ಶ್ರೀಮಠದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದ ಗೋವಿಂದ ಹೆಗಡೆ ದಂಪತಿಗಳನ್ನು ಶ್ರೀಗಳು ಸನ್ಮಾನಿಸಿ ಅನುಗ್ರಹಿಸಿದರು.

RELATED ARTICLES  ಫೇ 28 ಕ್ಕೆ ಕುಮಟಾ ತಾಲೂಕಿನ ಒಂಬತ್ತನೇ ಕನ್ನಡ ಸಾಹಿತ್ಯ ಸಮ್ಮೇಳನ.

ಇದೇ ಸಂದರ್ಭದಲ್ಲಿ ವಿವಿಧ ವಿಭಾಗದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ವಿದ್ಯಾರ್ಥಿವಾಹಿನಿ ವಿಭಾಗದಿಂದ ಗುರುತಿಸಿ ಶ್ರೀಗಳಿಂದ ಪುರಸ್ಕಾರ ನೀಡಲಾಯಿತು. ಕಟುಕರ ಪಾಲಾಗುವ ಗೋವುಗಳ ರಕ್ಷಣೆಗೆ ರಾಮಚಂದ್ರಾಪುರ ಮಠ ಕೈಗೊಂಡಿರುವ ಗೋ ಸಂಜೀವಿನಿ ಯೋಜನೆಗೆ ಸಮರ್ಪಣೆ ಮಾಡಲಾಯಿತು ಬಿಜೆಪಿ ಮುಖಂಡರಾದ ಸೂರಜ ನಾಯ್ಕ ಸೋನಿ ದಂಪತಿಗಳು ಗೋ ದೀಪ ಪ್ರಜ್ವಲನೆ ಮಾಡಿದರು. ವೇದ ಸಂಸ್ಕøತ ಅಕಾಡಮಿ ಹೆಗಡೆ ಇದರ ನಿರ್ದೇಶಕರು ಮತ್ತು ಜ್ಯೋತಿಷ ಹಾಗೂ ಧರ್ಮಶಾಸ್ತ್ರ ವಿದ್ವಾನ್ ಶ್ರೀ ಗೋಪಾಲಕೃಷ್ಣ ಹೆಗಡೆ ಇವರು ಸಂಪಾದಿಸಿ ಪ್ರಕಟಿಸಿದ ‘ಶ್ರೀ ದುರ್ಗಾ ಸಪ್ತಶತಿ” ಪುಸ್ತಕ ಲೋಕಾರ್ಪಣೆ ನಡೆಯಿತು.

RELATED ARTICLES  ಶಿಷ್ಯವೇತನಕ್ಕೆ‌ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.

ಮಠದ ಸಮುಚ್ಛಯದಲ್ಲಿ ನಿರ್ಮಾಣವಾಗಲಿರುವ ಶ್ರೀ ರಾಜ ರಾಜೇಶ್ವರಿ ದೇವಿಯ ದೇವಸ್ಥಾನಕ್ಕೆ ಶ್ರೀಗಳು ಶಿಲಾನ್ಯಾಸ ನೆರವೇರಿಸಿದ್ದು ಈ ಸಂದಭ್ದಲ್ಲಿ ಹಲವರು ತಮ್ಮ ಕಾಣಿಕೆಯನ್ನು ಸಮರ್ಪಿಸಿದರು. ನವರಾತ್ರಿ ವಿಶೇಷವಾಗಿ 9 ದಿನಗಳಿಂದ ಶ್ರೀಗಳವರು ನಡೆಸಿಕೊಡುತ್ತಿದ್ದ ಶ್ರೀ ದುರ್ಗಾ ಸಪ್ತಶತೀ ಪ್ರವಚನ ಮಾಲಿಕೆ ಇಂದು ಸಂಪನ್ನಗೊಂಡಿತು. ಪ್ರಸಿದ್ಧ ಕಲಾವಿಧರು ನಡೆಸಿಕೊಟ್ಟ ಗಾನ-ಲಯ-ಲಾಸ್ಯ ಕಾರ್ಯಕ್ರಮ ಗಮನ ಸೆಳೆಯಿತು.