Home Information ಶಿಷ್ಯವೇತನಕ್ಕೆ‌ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.

ಶಿಷ್ಯವೇತನಕ್ಕೆ‌ಆನ್‌ಲೈನ್ ಮೂಲಕ ಅರ್ಜಿ ಆಹ್ವಾನ.

ಕಾರವಾರ: ಜಿ.ಎನ್.ಎಂ, ಬಿ.ಎಸ್ಸಿ ನರ್ಸಿಂಗ್ ಹಾಗೂ ಪ್ಯಾರಾ ಮೆಡಿಕಲ್ (ಎಸ್.ಎಸ್.ಎಲ್.ಸಿ / ಪಿ.ಯು.ಸಿ) ಕೋರ್ಸ್‍ಗಳಿಗೆ ತರಬೇತಿ ಶುಲ್ಕ, ಶಿಷ್ಯವೇತನ ಹಾಗೂ ಇತರೆ ಶುಲ್ಕಗಳನ್ನು ಇ-ಪಾಸ್ ಮೂಲಕ ಮಂಜೂರು ಮಾಡುತ್ತಿರುವುದರಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಈ ಹಿಂದೆ ತರಬೇತಿ ಶುಲ್ಕ ಮತ್ತು ಶಿಷ್ಯವೇತನಕ್ಕೆ ಆಯ್ಕೆಯಾಗಿರುವರು, 2018-19ನೇ ಸಾಲಿಗೆ ಮುಂದುವರೆಯುತ್ತಿರುವ ನವೀಕರಣ ವಿದ್ಯಾರ್ಥಿಗಳು ಹಾಗೂ 2018-19ನೇ ಸಾಲಿಗೆ ಪ್ರಥಮ ವರ್ಷಕ್ಕೆ ದಾಖಲಾಗಿರುವ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದು.

ಅರ್ಜಿಯನ್ನು ಆನ್‍ಲೈನ್ ಮೂಲಕ karepass.cgg.gov.in ಹಾಗೂ www.backwardclasses.kar.nic.in ನಲ್ಲಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅ.31 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08382-226589 ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.