ಭಟ್ಕಳ : ಉತ್ತರ ಕನ್ನಡದ ವಿವಿಧ ತಾಲೂಕುಗಳಿಂದ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು ಇದೀಗ ಆತ್ಮಹತ್ಯೆಯ ಸರಣಿ ಮತ್ತೆ ಮುಂದುವರೆದಿದೆ. ಮಂಗಳವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದ ವ್ಯಕ್ತಿ ಮುಂಜಾನೆಯ ಒಳಗೆ ಮನೆಯ ಪಕ್ಕದಲ್ಲಿದ್ದ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಸ್ಥಳೀಯ ಪತ್ರಿಕೆ ವರದಿಮಾಡಿದೆ.
ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಪಕ್ಕದಲ್ಲಿದ್ದ ಗೇರು ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕೆ ಹೊನ್ನೆಮಡಿಯಲ್ಲಿ ನಡೆದಿದೆ ಎನ್ನಲಾಗಿದೆ. ಪದ್ಮಯ್ಯ ತಿಮ್ಮಪ್ಪ ನಾಯ್ಕ (55) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎನ್ನಲಾಗಿದೆ.
ಇದನ್ನೂ ಓದಿ – ಕರೆಂಟ್ ಬಿಲ್ ಪೆಂಡಿಂಗ್ ಎಂದು ಬಂತು ಎಸ್.ಎಂ.ಎಸ್ : ಫೋನ್ ಮಾಡಿದವನಿಗೆ ಪಂಗನಾಮ
ಈತ ಕೆಲವು ವರ್ಷಗಳಿಂದ ಅನಾರೋಗ್ಯ ಬಳಲುತ್ತಿದ್ದು, ಇದನ್ನೆ ಮನಸ್ಸಿಗೆ ಹಚ್ಚಿಕೊಂಡಿದ್ದ ಎನ್ನಲಾಗಿದೆ. ಮರದ ಮೇಲಿದ್ದ ಶವವನ್ನು ನೋಡಿ ಕುಟುಂಬದವರು ಕಂಗಾಲಾಗಿದ್ದು, ಮೃತನ ಮಗ ಉಮೇಶ ನಾಯ್ಕ ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ.