ಅಂಕೋಲಾ : ಅಕ್ಟೋಬರ್ 23 ರಂದು ಸಂಜೆ 7 ಗಂಟೆಗೆ ಮನೆಯಿಂದ ಹೊರಗೆ ಹೋಗಿದ್ದ ವ್ಯಕ್ತಿ ಇಷ್ಟು ದಿನ ಎಷ್ಟು ಹುಡುಕಾಟ ನಡೆಸಿದರೂ ಇನ್ನೂ ಪತ್ತೆಯಾಗಿರಲಿಲ್ಲ. ಆದರೆ ಇದೀಗ ಆತ ತಾಲೂಕಿನ ಸುಂಕಸಾಳದ ಅಡಕುಳದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹಬ್ಬದ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತಕಾರಿ ಸುದ್ದಿ ಬಂದಿದೆ.

ಮೃತ ವ್ಯಕ್ತಿಯನ್ನು ಸುಂಕಸಾಳ ವಡಬೇಣ ನಿವಾಸಿ ಲಕ್ಷ್ಮಣ ನಾರಾಯಣ ಕುಣಬಿ ಎಂದು ಗುರುತಿಸಲಾಗಿದೆ. ಸರಾಯಿ ಕುಡಿತದ ದಾಸನಾಗಿದ್ದ ಈತ ಇತ್ತೀಚೆಗೆ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

RELATED ARTICLES  ಭಟ್ಕಳದಲ್ಲಿ ಮತ್ತೆ ಹಾರಾಡಿದ ಹನುಮ ಧ್ವಜ : ಸಂಸದ ಅನಂತಕುಮಾರ್ ಹೆಗಡೆ ನೇತೃತ್ವದಲ್ಲಿ ಸರಕಾರಕ್ಕೆ ಸೆಡ್ಡು

ಉತ್ತರ ಕನ್ನಡದ ಎಲ್ಲಾ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗಣಪತಿ ರಾಮಚಂದ್ರ ಶೇಟ್ ಎನ್ನುವವರಿಗೆ ಸೇರಿದ ಜಮೀನಿನಲ್ಲಿ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಲಕ್ಷ್ಮಣ ಅವರ ಶವ ಪತ್ತೆಯಾಗಿದೆ. ಆತ ತನಗೆ ಇರುವ ಕಾಯಿಲೆ ಗುಣ ಆಗದೇ ಇರುವುದನ್ನು ಅಥವಾ ಬೇರೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಂದಾಜಿಸಲಾಗಿದೆ.

RELATED ARTICLES  ಗೋ ಮಾಂಸ ರಪ್ತಿನಲ್ಲಿ ನಂ2 ಆಗಲಿದೆಯೇ ಭಾರತ! ಹೊರಬಿದ್ದ ಸ್ಪೋಟಕ ವರದಿಯಲ್ಲಿ ಇರೋದೇನು ಗೊತ್ತಾ?

ಪಿ.ಎಸ್.ಐ ಪ್ರವೀಣಕುಮಾರ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಂಕೋಲಾ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌. ಮುಂದಿನ ಪ್ರಕ್ರಿಯೆ ಕೈಗೊಳ್ಳಲಾಗಿದೆ.