ಆಡುವ ಮಾತು ಮನಸ್ಥಿತಿಯ ಅಭಿವ್ಯಕ್ತಿಯೆ ಹೊರತು ಸತ್ಯದ ಅನಾವರಣವಲ್ಲ

“ದೃಷ್ಟಿಯಂತೆ ಸೃಷ್ಟಿ” ಎಂಬ ಮಾತಿದೆ, ನೋಡುವ ಕಂಗಳು ನೋಡುವ ಮನಸ್ಸನ್ನು ಪ್ರತಿನಧಿಸುತ್ತವೆ. ಗುಲಾಬಿಗಿಡದಲ್ಲಿ ಬಿಟ್ಟಿರುವ ಗುಲಾಬಿ ಹೂ ಕೆಲವರಿಗೆ ಸುಂದರ ಪುಷ್ಪವಾದರೆ ಇನ್ನೂ ಕೆಲವರಿಗೆ ಹೂವಿನ ಜೊತೆಗಿರುವ ಮುಳ್ಳಿನ ಬಗ್ಗೆ ಚಿಂತೆ ಜೋರಾಗಿರುತ್ತದೆ ಅಲ್ಲವೇ? ಇಂತಹ ಸಂದರ್ಭಗಳು ಹಾಗೂ ಇಂತಹ ಪ್ರಶ್ನೆಗಳು ನಮಗೆ ಸಹಜವಾಗಿಯೇ ನೋಡುಗನ ಮನಸ್ಸನ್ನು ತೆರೆದಿಡುತ್ತವೆ. ಈ ರೀತಿಯ ಯೋಚನೆಗಳನ್ನು ನಾವು ಧನಾತ್ಮಕ ಹಾಗೂ ಋಣಾತ್ಮಕ ಚಿಂತನೆಗಳು ಎಂದು ಕರೆಯಬಹುದೇನೋ.

ಈ ವಿಷಯ ಇಲ್ಲಿ ಪ್ರಸ್ಥಾಪಿಸುತ್ತಿರುವುದು ಏಕೆ? ಎಂಬುದು ತಮಗೆ ಅರ್ಥವಾಗಿರಲೇ ಬೇಕು. ನೋಡುವ ದೃಷ್ಠಿ ಹೇಗೆ ಎಂಬುದು ಅವರವರ ಮನಸ್ಸಿನ ಯೋಚನೆಗೆ ಸಂಬಂಧಿಸಿದ್ದೇ ಹೊರತೂ ಅವರು ಹೇಳುವುದು ಸತ್ಯ ಎಂಬುದಲ್ಲ. ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ವಿಷಯದಲ್ಲಿಯೂ ಆಗುತ್ತಿರುವುದು ಇದೇ. ಘನ ನ್ಯಾಯಾಲಯವೇ ಶ್ರೀಗಳ ಮೇಲೆ ಬಂದಿರುವ ಆಪಾಧನೆ ಸುಳ್ಳು ಎಂಬುದಾಗಿ ಘಂಟಾಘೋಷವಾಗಿ ಹೇಳಿದ ಮೇಲೇಯೂ ತಮ್ಮ ಅಹಂಮ್ಮಿಕೆಯ ಉಳಿವಿಗಾಗೀಯೋ ಅಥವಾ ಇಷ್ಟು ದಿನ ಎನೇನೋ ಮಾತಾಡಿ ಸುಮ್ಮನಾದರು ಎಂದು ಹೇಳಿಸಿಕೊಳ್ಳಲು ಸಿದ್ದರಿಲ್ಲದೆಯೋ, ಬಾಯಿಗೆ ಬಂದಂತೆ ಮಾತನಾಡುವ/ಬರೆದುಕೊಳ್ಳುವ ಜನರಿಗೆ ಈ ಮಾತುಗಳು ನೇರವಾಗಿ ತಾಕುತ್ತವೆ. ನೀವು ಆಡುತ್ತಿರುವ ಮಾತು ನಿಮ್ಮ ಕೊಳೆತ ಮನಸ್ಸಿನ ದುರ್ನಾತವೇ ಹೊರತೂ ಸತ್ಯವಲ್ಲ.

RELATED ARTICLES  “ಜೀವನಕ್ಕೆ ಮಹದುದ್ದೇಶವಿದೆ”( ಶ್ರೀಧರಾಮೃತ ವಚನಮಾಲೆ’).

ಮತ್ತೊಂದು ವಿಷಯವನ್ನು ನಾವಿಲ್ಲಿ ಉಲ್ಲೇಖಿಸಲೇ ಬೇಕು. ನಾವು ಗುರುವಿನ ಪದತಲದಲ್ಲಿ ಶರಣಾದವರು. ಗುರು ಕಾರುಣ್ಯದ ಮಹಿಮೆ ಕಂಡವರು. ಗುರುವಿನ ಮೇಲೆ ಅನನ್ಯ ಭಕ್ತಿ ಹೊಂದಿದವರು ಹೀಗಿರುವ ಕೋಟ್ಯಂತರ ಭಕ್ತ ಸಮೂಹ ಶ್ರೀ ಗುರುವಿನ ಜೊತೆಗಿದ್ದಾರೆ. ಅಂದು ಕೆಕ್ಕಾರಿನ ಶ್ರೀಮಠದಲ್ಲಿ ನಾವಿದ್ದೇವೆ ಎಂಭ ಘೋಷಣೆ ಕೂಗಿದಾಗ ನಮ್ಮ ಸಂಸ್ಥಾನ ನನ್ನನ್ನ ನೋಡಿದ ಆ ದೃಷ್ಟಿ ಮಾತ್ರ ನನ್ನ ಜೀವನದ ಅತ್ಯಮೂಲ್ಯ ಕ್ಷಣ. ಗುರುವಿನ ಆ ಕಾರುಣ್ಯದ ದೃಷ್ಟಿಗೂ ಕೆಲವು ಬುದ್ದಿಗೇಡಿಗಳು ಗುರುವನ್ನು ನೋಡಿ ಆಡುವ ದೃಷ್ಟಿಗೂ ಹೂವು ಮುಳ್ಳಿನ ಸಂಬಂಧ. ಮುಳ್ಳಿನ ನಡುವೆಯೇ ಅರಳಿನಿಂತ ಗುರು ಕಾರುಣ್ಯ ಪುಷ್ಪ ನಮಗೆ ದೊರೆತಿದೆ. ನಾವು ನೋಡುವುದು ಗುರುವೆಂಬ ಗುಲಾಬಿಯನ್ನೇ. ಕೋಟಿ ಕೋಟಿ ಭಕ್ತರ ಹೃದಯ ಸಿಂಹಾಸನದಲ್ಲಿ ವಿರಾಜಮಾನ ನಾದ ರಾಮ ರಾಘವನೇ ನಿನಗಿದೋ ಕೋಟಿ ಪ್ರಣವಗಳು.

RELATED ARTICLES  ಶ್ರೀಗುರು ನಿಮ್ಮ ಹೃದಯದಲ್ಲಿ ಕೇವಲ ಆನಂದರೂಪದಲ್ಲಿ ಪ್ರಕಾಶಿಸುತ್ತಿದ್ದಾನೆ ಎಂಬುದನ್ನು ಯಾವಾಗಲೂ ಲಕ್ಷದಲ್ಲಿಟ್ಟುಕೊಂಡು, ಅವರ ದರ್ಶನ ಪಡೆಯುತ್ತಿರಬೇಕು.