ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವಿಚಿತ್ರವಾದ ಸುದ್ದಿಗಳು ವರದಿಯಾಗುತ್ತಲೇ ಇರುತ್ತದೆ. ಇದೀಗ ಅತಿ ಉದ್ದದ ಮೂಗನ್ನು ಹೊಂದಿರುವ ವ್ಯಕ್ತಿಯ ಫೋಟೋ ವೈರಲ್ ಆಗುತ್ತಿದ್ದು, ಜನ ಫೋಟೋ ನೋಡಿ ಶಾಕ್ ಆಗಿದ್ದಾರೆ. ಹಿಸ್ಟಾರಿಕ್ ವಿಡ್ಸ್ ಎಂಬ ಟ್ವಿಟರ್ ಪೇಜ್‍ನಲ್ಲಿ, ಬಿಲೀವ್ ಇಟ್ ಆರ್ ನಾಟ್ ಮ್ಯೂಸಿಯಂನಲ್ಲಿ ಇರಿಸಲಾಗಿರುವ ವ್ಯಕ್ತಿಯ ತಲೆಯ ಫೋಟೋವನ್ನು ಪೋಸ್ಟ್ ಮಾಡಲಾಗಿದೆ. ಇದರಲ್ಲಿ ಥಾಮಸ್ ವಾಡ್‍ಹೌಸ್ ಅವರ ಮೂಗು 7.5 ಇಂಚು ಉದ್ದವಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ವೆಬ್‍ಸೈಟ್‍ನ ಪೇಜ್‍ನಲ್ಲಿ ಈ ವ್ಯಕ್ತಿಯ ಹೆಸರಿದೆ. ಅಲ್ಲದೇ ಈತನೊಬ್ಬ “ಟ್ರಾವೆಲಿಂಗ್ ಫ್ರೀಕ್ ಸರ್ಕಸ್‍ನ ಸದಸ್ಯ ಎಂದು ತಿಳಿಸಲಾಗಿದೆ.
18 ನೇ ಶತಮಾನದಲ್ಲಿದ್ದ ಥಾಮಸ್ ವಾಡ್‍ಹೌಸ್ ಒಬ್ಬರು ಇಂಗ್ಲಿಷ್ ಸರ್ಕಸ್ ಕಲಾವಿದರಾಗಿದ್ದರು. 7.5 ಇಂಚುಗಳಷ್ಟು (19 ಸೆಂ) ಉದ್ದದ ಮೂಗನ್ನು ಹೊಂದುವ ಮೂಲಕ ವಿಶ್ವದಲ್ಲಿ ಅತೀ ಹೆಚ್ಚು ಜನಪ್ರಿಯರಾಗಿದ್ದರು. ಸದ್ಯ ಈ ಫೋಟೋಗೆ ಸುಮಾರು 1.20 ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದು, 7,200ಕ್ಕೂ ಹೆಚ್ಚು ರೀಟ್ವೀಟ್ ಬಂದಿದೆ.
1770ರ ದಶಕದಲ್ಲಿ ಥಾಮಸ್ ವಾಡ್‍ಹೌಸ್ ಅವರು, ಇಂಗ್ಲೆಂಡ್‍ನಲ್ಲಿ ವಾಸಿಸುತ್ತಿದ್ದರು ಮತ್ತು ಟ್ರಾವೆಲಿಂಗ್ ಫ್ರೀಕ್ ಸರ್ಕಸ್‍ನ ಸದಸ್ಯರಾಗಿದ್ದರು. ಥಾಮಸ್ ವಾಡ್‍ಹೌಸ್ 19 ಸೆಂ (7.5 ಇಂಚುಗಳಷ್ಟು) ಮೂಗು ಹೊಂದುವ ಮೂಲಕ ಗೆನ್ನಿಸ್ ರೆಕಾರ್ಡ್ ಮಾಡಿದ್ದರು.