ಸಿದ್ದಾಪುರ: ಸಮಾಜಮುಖಿ ಸೇವಾ ಸಂಸ್ಥೆ ಕರ್ನಾಟಕ ಹಾಗೂ ಗೋವಾ ಕನ್ನಡಿಗರ ಸಂಘದಿಂದ ಪ್ರತಿಷ್ಠಿತ ನ್ಯಾಶನಲ್ ಐಕಾನ್ ಅವಾರ್ಡ್ ಅನ್ನು ತಾಲೂಕಿನ ಮೆಣಸಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರೀಟಾ ಡಿಸೋಜಾ ಅವರಿಗೆ ಪ್ರದಾನ ಮಾಡಲಾಗಿದೆ. ರೀಟಾ ಡಿಸೋಜಾ ಅವರ ಶಿಕ್ಷಣ ಕ್ಷೇತ್ರದ ಸೇವೆಯನ್ನು ಪರಿಗಣಿಸಿ ಗೋವಾದಲ್ಲಿ ಏರ್ಪಡಿಸಿದ್ದ ಕರ್ನಾಟಕ ರಾಜ್ಯೋತ್ಸವ ಗತವೈಭವ ಕಾರ್ಯಕ್ರಮದಲ್ಲಿ ಅವರಿಗೆ ರಾಷ್ಟ್ರೀಯ ಶಿಕ್ಷಣ ರತ್ನ ಪ್ರಶಸ್ತಿಯನ್ನು ಡಾ.ದಿವ್ಯಾನಂದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ, ಹುಬ್ಬಳ್ಳಿಯ ರೇಣುಕಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷೆ ಡಾ.ಸುನೀತಾ ದೀವಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ, ಚಿತ್ರನಟಿ ರೇಣು ಶಿಕಾರಿಪುರ, ಗೋವಾ ಕನ್ನಡಿಗರ ಸಂಘದ ಗೌರವಾಧ್ಯಕ್ಷ ಮಂಜುನಾಥ ಶಿವಕ್ಕನವರ್, ಸೌತ್ ಇಂಡಿಯನ್ ಚಲನಚಿತ್ರೋತ್ಸವದ ಮುಖ್ಯಸ್ಥ ಅಲ್ತಾಫ್ ಜಹಾಂಗೀರ, ಡಾ.ರಮೇಶ ಬಿ. ಬೆಂಗಳೂರ ಮುಂತಾದ ಗಣ್ಯರ ಉಪಸ್ಥಿತಿಯಲ್ಲಿ ಪ್ರದಾನ ಮಾಡಲಾಗಿದೆ.
ಶಿಕ್ಷಣ ಕ್ಷೇತ್ರದ ಸಾಧಕಿ ರೀಟಾ ಅವರು ಈ ಹಿಂದೆ ಸಾವಿತ್ರಿಬಾಯಿ ಫುಲೆ ರಾಷ್ಟ್ರ ಪ್ರಶಸ್ತಿ ಹಾಗೂ ಡಾ.ಎಪಿಜೆ ಅಬ್ದುಲ್ ಕಲಾಂ ಪ್ರಶಸ್ತಿ ಪಡೆದಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ