ಶಿರಸಿ: ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೊಸಿಯೇಷನ್ ಆಯೋಜಿಸಿದ್ದ 37ನೇ ರಾಜ್ಯಮಟ್ಟದ ರೋಲರ್ ಸ್ಕೇಟಿಂಗ್ ಛಾಂಪಿಯನ್‌ಷಿಪ್‌ನಲ್ಲಿ ನಗರದ ಲಯನ್ಸ್ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಕುಮಾರಿ ಖುಷಿ ಸಾಲೇರ್ ರಾಜ್ಯಮಟ್ಟದ ಸ್ಕೇಟಿಂಗ್ ನಲ್ಲಿ ರೋಲರ್ ಹಾಕಿ ವಿಭಾಗದಲ್ಲಿ ಆಯ್ಕೆಯಾಗಿದ್ದಾಳೆ.

ಡಿ. 11 ರಿಂದ ಡಿ. 14 ರವರೆಗೆ ಬೆಂಗಳೂರಿನಲ್ಲಿ ಭಾರತೀಯ ರೋಲರ್ ಸ್ಕೇಟಿಂಗ್ ಫೆಡರೇಷನ್ ನಡೆಸಲಿರುವ, 60ನೇ ರಾಷ್ಟ್ರೀಯ ರೋಲರ್ ಸ್ಕೇಟಿಂಗ್ ಛಾಂಪಿಯನ್‌ಷಿಪ್‌ನಲ್ಲಿ ರಾಜ್ಯತಂಡವನ್ನು ಪ್ರತಿನಿಧಿಸಲಿದ್ದಾಳೆ.ಈ ಪುಟ್ಟ ಬಾಲಕಿಯ ಅಪೂರ್ವ ಸಾಧನೆಗೆ ಬಾಲಕಿ ಮತ್ತು ಆಕೆಯ ಪಾಲಕರಾದ ಶ್ರೀಮತಿ ನೀಲಂ ಹಾಗೂ ದಿನೇಶ ಸಾಲೇರ್ ದಂಪತಿಗಳನ್ನು ಶಿಕ್ಷಣ ಸಂಸ್ಥೆಯು ಹೆಮ್ಮೆಯಿಂದ ಅಭಿನಂದಿಸಿದೆ.

RELATED ARTICLES  ಅಹಿಂದಾ ಸರಕಾರದಲ್ಲಿ ಬಸ್ ಪಾಸಿಗೂ ಜಾತಿ ಬಂತು

ಇದನ್ನೂ ಓದಿ.

RELATED ARTICLES  “ ದೇವರ ಇರುವಿಕೆಗೆ ಶ್ರುತಿ-ಸ್ಮ್ರತಿ ಆಧಾರ”( ಶ್ರೀಧರಾಮೃತ ವಚನಮಾಲೆ’).

ಕುಮಾರಿ ಖುಷಿಯ ಕೀರ್ತಿ ರಾಷ್ಟ್ರಮಟ್ಟದಲ್ಲೂ ವ್ಯಾಪಿಸಲಿ ಎಂಬುದು ಸಂಸ್ಥೆಯ ಆಶಯವಾಗಿದೆ. ವಿಜೇತ ವಿದ್ಯಾರ್ಥಿಯನ್ನು ಅವರ ಪಾಲಕರು ಹಾಗೂ ತರಬೇತುದಾರರನ್ನು, ಶಿರಸಿ ಲಯನ್ಸ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸರ್ವಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯ ಶಶಾಂಕ ಹೆಗಡೆ, ಶಿಕ್ಷಕ-ಶಿಕ್ಷಕೇತರ ವೃಂದ, ಶಿರಸಿ ಲಯನ್ಸ್ ಕ್ಲಬ್ ಬಳಗ ಮತ್ತು ಲಯನ್ಸ ಶಾಲಾ ಪಾಲಕರ ವೃಂದ ಆಶೀರ್ವಾದಪೂರ್ವಕವಾಗಿ ಅಭಿನಂದಿಸಿದ್ದಾರೆ.