ಆಕ್ಸಿಡೆಂಟ್​​ ಕೇಸ್​ನಲ್ಲಿ ಜಪ್ತಿಯಾದ ವಾಹನಗಳು ಬೇಗನ ವಾಹನ ಮಾಲೀಕರ ಪಾಲಾಗುತ್ತಿರಲಿಲ್ಲ. ಮಾಲೀಕರು ಮತ್ತೆ ತಮ್ಮ ವಾಹನಗಳನ್ನು ಪಡೆದುಕೊಳ್ಳಲು ಸಾಕಷ್ಟು ಸಮಯ ತಗಲುತ್ತಿತ್ತು. ಆದರೆ ಇನ್ನು ಮುಂದೆ ಆಕ್ಸಿಡೆಂಟ್ ಕೇಸ್ ಇರುವ ವಾಹನ ಮಾಲೀಕರು ತಮ್ಮ ವಾಹನಗಳನ್ನು 24 ಗಂಟೆಗಳಲ್ಲಿ ಪಡೆದುಕೊಳ್ಳಬಹುದು. ಆಕ್ಸಿಡೆಂಟ್ ಕೇಸ್ ವಾಹನ ಮಾಲೀಕರಿಗೆ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಹೇಳಿಕೆ ಗುಡ್ ನ್ಯೂಸ್ ನೀಡಿದ್ದಾರೆ. ಈ ಹಿಂದೆ ಕೇಸ್​​ನ ತನಿಖೆಯಿಂದಾಗಿ ಜಪ್ತಿಯಾದ ವಾಹನಗಳು ತಿಂಗಳುಗಟ್ಟಲೆ ಸ್ಟೇಷನ್​ ವಠಾರದಲ್ಲೇ ಇರುತ್ತಿದ್ದವು. ಆದರೆ ಇನ್ನು ಮುಂದೆ ಆಯಕ್ಸಿಡೆಂಟ್ ಆದ 24ಗಂಟೇಲೆ ವಾಪಸ್ ನೀಡುವಂತೆ ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಆದೇಶ ನೀಡಿದ್ದಾರೆ.

RELATED ARTICLES  ದೇಶ ವಿದೇಶದಲ್ಲಿ ಸದ್ದು ಮಾಡುತ್ತಿದೆ ನಮ್ಮ ನಾಣಿ ಮದುವೆ ಪ್ರಸಂಗದ ಹಾಡು.

ಆಕ್ಸಿಡೆಂಟ್ ಆದ ವಾಹನಗಳನ್ನು ಪೊಲೀಸರು ಇಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಆರ್​ಟಿಓ ದಿಂದ ಪರಿಶೀಲನೆ ನಡೆದ ಬಳಿಕ, ಮೆಕಾನಿಕಲ್ ಆಗಿ ಏನಾದ್ರು ತೊಂದರೆ ಆಗಿದೆಯಾ ಎಂದು ರಿಪೋರ್ಟ್ ಮಾಡಲಾಗುತ್ತದೆ. ನಂತರ ಸಿಬ್ಬಂದಿ ಮಾಲೀಕರಿಗೆ ಸೂಚನೆ ನೀಡಿ, ಮುಚ್ಚಳಿಕೆ ಬರೆಸಿಕೊಂಡು ವಾಹನ ಕೊಡಲಾಗುತ್ತದೆ. ಆಯಕ್ಸಿಡೆಂಟ್ ಆಗಿದೆ ಅಂತಾ ವಾಹನಗಳನ್ನು ಸ್ಟೇಷನ್ ಮುಂದೆ ಇಟ್ಟುಕೊಂಡರೆ ಸಾಕಷ್ಟು ವಾಹನ ಬಂದು ಬೀಳುತ್ತವೆ. ಇದರಿಂದ ಸ್ಟೇಷನ್
ಕೂಡ ಲಕ್ಷಣವಾಗಿ ಕಾಣಿಸುವುದಿಲ್ಲ. ಹೀಗಾಗಿ ಆಯಕ್ಸಿಡೆಂಟ್ ವಾಹನಗಳು ಇಟ್ಟುಕೊಳ್ಳೋ ಅವಶ್ಯಕತೆ ಇಲ್ಲ. ಇನ್ನು ಮುಂದೆ 24 ಗಂಟೆಯಲ್ಲಿ ಪರಿಶೀಲನೆ ನಡೆಸಿ ವಾಪಸ್ ನೀಡಲಾಗುತ್ತದೆ ಎಂದು ಟ್ರಾಫಿಕ್ ಸ್ಪೆಷಲ್ ಕಮಿಷನರ್ ಡಾ.ಸಲೀಂ ಮಾಹಿತಿ ನೀಡಿದ್ದಾರೆ.

RELATED ARTICLES  ನೀರಿನಂತೆ ಮನಸ್ಸು ಹರಿಸಿದರೆ?