ಯಲ್ಲಾಪುರ : ಇದೀಗ ಎಲ್ಲೆಡೆಯಲ್ಲೂ ಚಿರತೆಗಳ ಕಾಟ ಪ್ರಾರಂಭವಾಗಿದ್ದು, ಜನ ಜಾನುವಾರುಗಳು ಭಯಪಡುವಂತೆ ಆಗಿದೆ. ಯಲ್ಲಾಪುರ ತಾಲೂಕಿನ ವಜ್ರಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಮನಳ್ಳಿಯ ನಾರಾಯಣ ಭಟ್ಟ ಎಂಬ ಕೃಷಿಕರ ಕೊಟ್ಟಿಗೆಗೆ ಬಂದ ಚಿರತೆಯೊಂದು ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಕಳ ಕರುವನ್ನು ಕೊಂದು ಹೊತ್ತೊಯ್ದ ಘಟನೆ ನಡೆದಿದೆ.

RELATED ARTICLES  ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಅಂಗಾಂಗ ದಾನದ ಅರಿವು ಕಾರ್ಯಕ್ರಮ

ಚಿರತೆಯು ಕೊಟ್ಟಿಗೆಗೆ ಬಂದ ದೃಶ್ಯವು ಸಿ.ಸಿ.ಟಿವಿಯಲ್ಲಿ ಸೆರೆಯಾಗಿದೆ.ಈ ಘಟನೆಯಿಂದ ಗ್ರಾಮಸ್ಥರು ಆತಂಕ ಪಡುವಂತಾಗಿದೆ. ಚಿರತೆ ಕಾಣಿಸಿಕೊಂಡ ಕಾರಣ ಗ್ರಾಮಸ್ಥರು ಗ್ರಾಮದ ರಸ್ತೆಗಳಲ್ಲಿ ಓಡಾಡಲು ಭಯಪಡುವಂತಾಗಿದೆ. ಅಪರೂಪಕ್ಕೆ ಮೇಯಲು ಬಿಟ್ಟ ದನಕರುಗಳ ಮೇಲೆ ಚಿರತೆ ದಾಳಿ ಮಾಡಿದ ಘಟನೆ ನಡೆಯುತ್ತಿತ್ತು. ಆದರೆ ಈಗ ಚಿರತೆಯು ರಾಜಾರೋಷವಾಗಿ ಕೊಟ್ಟಿಗೆಗೆ ಬಂದು ಆಕಳ ಕರುವನ್ನು ಹೊತ್ತೊಯ್ದಿರುವುದು ಗ್ರಾಮಸ್ಥರ ಭಯಕ್ಕೆ ಕಾರಣವಾಗಿದೆ.

RELATED ARTICLES  ಬೈಕ್ ಅಪಘಾತ ಗಂಭೀರ ಸ್ಥಿತಿಯಲ್ಲಿ ಕಾರವಾರದ ಯುವಕ!