ಕುಮಟಾ : ತಾಲೂಕಿನ ಕೋಡ್ಕಣಿ ಐಗಳಕುರ್ವೆ ಸೇತುವೆ ಪೂರ್ಣಗೊಂಡು ಸಂಪರ್ಕ ರಸ್ತೆ ಆಗದೇ ಜನರು ಪರದಾಡುವಂತಾಗಿತ್ತು. ಶಾಸಕ ದಿನಕರ ಶೆಟ್ಟಿಯವರ ಸತತ ಪ್ರಯತ್ನದ ಫಲವಾಗಿ ಸಂಪರ್ಕ ರಸ್ತೆ ಕಾಮಗಾರಿ ಪ್ರಾರಂಭಗೊಂಡು ಕಾಮಗಾರಿ ಚುರುಕಾಗಿ ನಡೆಯುತ್ತಿದ್ದು ಶಾಸಕ ದಿನಕರ ಶೆಟ್ಟಿ ಯವರು ಇಂದು ಕಾಮಗಾರಿ ಸ್ಥಳಕ್ಕೆ ತೆರಳಿ ವೀಕ್ಷಣೆ ಮಾಡಿದರು.

ಕೋಡ್ಕಣಿ ಸೇತುವೆ ಕಾಮಗಾರಿ ಮುಗಿದು ಸಂಪರ್ಕ ರಸ್ತೆ ಆಗದೆ ಜನರಿಗೆ ತುಂಬಾ ಸಮಸ್ಯೆ ಉಂಟಾಗಿತ್ತು. ಕಾರಣ ಖಾಸಗಿ ಜಮೀನಿನವರ ಒಪ್ಪಿಗೆ ಸಿಗದೆ ವಿಳಂಬವಾಗಿತ್ತು. ನಂತರ ಶಾಸಕ ದಿನಕರ ಶೆಟ್ಟಿಯವರು ಸಹಾಯಕ ಆಯುಕ್ತ ರಾಘವೇಂದ್ರ ಜಗಲಾಸರ, ತಹಶೀಲ್ದಾರ್ ವಿವೇಕ ಶೇಣ್ವಿ ಹಾಗೂ ಇತರ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಜೊತೆ ಸತತ ಎರಡು ಸಭೆ ನಡೆಸಿ ಅಲ್ಲಿಯ ಜಾಗದ ಸಮಸ್ಯೆ ಬಗೆಹರಿಸುವಲ್ಲಿ ಶ್ರಮ ವಹಿಸಿ ಬೇಕಾಗಿರುವ ಅನುದಾನವನ್ನು ಕೂಡ ಸರ್ಕಾರದಿಂದ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿ ಈಗಾಗಲೇ ಕಾಮಗಾರಿ ವೇಗದಿಂದ ನಡೆಯುತ್ತಿದ್ದು ಇಂದೂ ಕೂಡ ಗುತ್ತಿಗೆದಾರರಿಗೆ ಶಾಸಕ ದಿನಕರ ಶೆಟ್ಟಿ ಉತ್ತಮ ಗುಣಮಟ್ಟದ ಕಾಮಗಾರಿ ಆಗಬೇಕು ಆದಷ್ಟು ಬೇಗ ಕಾಮಗಾರಿ ಮುಗಿಸಿ ಜನರಿಗೆ ಓಡಾಡಲು ಅನುಕೂಲ ಮಾಡಬೇಕು ಎಂದು ಸೂಚಿಸಿದರು.

RELATED ARTICLES  ಕಾರು ಹಾಗೂ ಬೈಕ್ ನಡುವೆ ಅಪಘಾತ

ನಂತರ ಮಾತನಾಡಿದ ಅವರು ಹಿಂದಿನ ಕಾಂಗ್ರೆಸ್ ಸರ್ಕಾರ ಶಾರದಾ ಈ ಸೇತುವೆಯನ್ನು ಮಂಜೂರಿ ಮಾಡಿಸಿ ಗುದ್ದಲಿಪೂಜೆಯನ್ನಷ್ಟೇ ನೆರವೇರಿಸಿತ್ತು. ಆದರೆ ಆ ಸೇತುವೆಗೆ ಬೇಕಾದ ಸಂಪೂರ್ಣ ಹಣವನ್ನು ನಮ್ಮ ಬಿಜೆಪಿ ಸರ್ಕಾರದ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ನವರು ಹಾಗೂ ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಯವರು ಬಿಡುಗಡೆಗೊಳಿಸಿ ಸೇತುವೆ ನಿರ್ಮಾಣ ಮಾಡುವಲ್ಲಿ ನೆರವಾಗಿದ್ದಾರೆ ಹಾಗಾಗಿ ನಮ್ಮ ಬಿಜೆಪಿ ಸರ್ಕಾರ ಈ ಸೇತುವೆ ನಿರ್ಮಾಣಕ್ಕೆ ಸಂಪೂರ್ಣ ಹಣ ನೀಡಿದೆ. ಸೇತುವೆ ನಿರ್ಮಾಣ ದ ನಂತರ ಕರೋನಾ ಸಂದರ್ಭದಲ್ಲಿ ಎರಡು ವರ್ಷ ಸ್ವಲ್ಪ ವಿಳಂಬವಾಯಿತು. ಸಂಪರ್ಕ ರಸ್ತೆಗೆ ಅಗತ್ಯವಿರುವ ಭೂಮಿಯ ಸ್ವಾಧೀನ ಆಗಿರಲಿಲ್ಲ. ನಾನು ಅಧಿವೇಶನದಲ್ಲೂ ಇದರ ಪ್ರಸ್ತಾಪ ಮಾಡಿದ್ದೆ, ನಂತರ ಜಾಗವನ್ನು ಸ್ವಾಧೀನ ಮಾಡಿ ಕೂಡಲೇ ಕಾಮಗಾರಿ ಪ್ರಾರಂಭವಾಗುವಂತೆ ಮಾಡುವ ಉದ್ದೇಶದಿಂದ ಎರಡು ಬಾರಿ ಅಧಿಕಾರಿಗಳ ಸಭೆ ನಡೆಸಿ ಸ್ವಾಧೀನಕ್ಕೆ ಬೇಕಾಗಿರುವ ಅನುದಾನ ಕೂಡ ಸರ್ಕಾರದಿಂದ ಬಿಡುಗಡೆಗೊಳಿಸಿ ಈಗ ವೇಗವಾಗಿ ಕಾಮಗಾರಿ ಆರಂಭವಾಗಿದೆ ಜನವರಿ ಕೊನೆ ಅಥವಾ ಫೇಬ್ರುವರಿ ಮೊದಲ ವಾರದಲ್ಲಿ ಜನರ ಓಡಾಟಕ್ಕೆ ಅವಕಾಶ ಆಗಬಹುದು ಎಂಬ ನಿರೀಕ್ಷೆ ಇದೆ” ಎಂದರು.

RELATED ARTICLES  ಪುರಸಭೆಯ ಅಧ್ಯಕ್ಷರಾಗಿ ಮಧುಸೂಧನ ಶೇಟ್ ಅವಿರೋಧ ಆಯ್ಕೆ!

ಈ ಸಂದರ್ಭದಲ್ಲಿ ಕೋಡ್ಕಣಿ ಗ್ರಾಮಸ್ಥರು, ಬಿಜೆಪಿ ಕಾರ್ಯಕರ್ತರಾಗಿರುವ ಮಹಾದೇವ ಪಟಗಾರ, ದತ್ತಾತ್ರಯ ಅಂಬಿಗ, ಸುನೀಲ್ ನಾಯ್ಕ, ವಿಠ್ಠಲ ನಾಯ್ಕ ಮತ್ತಿತರರು ಇದ್ದರು.