ಹೊನ್ನಾವರ: ‘ಜೀಯು’ ಎಂದೇ ಖ್ಯಾತನಾಮರಾದ ನಮ್ಮ ಹೊನ್ನಾವರದ ಗಜಾನನ ಉಮಾಮಹೇಶ್ವರ ಭಟ್ಟ ಅವರಿಗೀಗ 75ರ ಅಮೃತಗಳಿಗೆ, ಅವರ ಅಕ್ಷರ ವ್ಯವಸಾಯಕ್ಕೀಗ ಸುವರ್ಣ ಸಂಭ್ರಮ, ‘ಉದಯವಾಣಿ’ಯ ವರದಿಗಾರರಾಗಿ, ಅಂಕಣಕಾರರಾಗಿ ಅರ್ಧಶತಮಾನಗಳ ಕಾಲ ಜಿಲ್ಲೆ ‘ಜನವಾಣಿ’ಯಾಗಿ ಅಕ್ಷರ ಸಮುದಾಯವನ್ನು ಅಭಿಪ್ರೇರೇಪಿಸುತ್ತಾ ಬಂದಿದ್ದು ಸಣ್ಣ ಸಂಗತಿಯೇನಲ್ಲ. ‘ಶ್ರೀಧರ ಮುದ್ರಣಾಲಯ’ದ ಮೂಲಕವೂ ಜನಮಾನಸದಲ್ಲಿ ಮುದ್ರೆಯೊತ್ತಿದ ಅವರದ್ದು ನೇರ, ನಿರಪೇಕ್ಷ, ನಡೆ – ನುಡಿ, ರಂಗಕರ್ಮಿಯಾಗಿ, ಕಿರುತೆರೆ, ಹಿರಿತೆರೆ ಹವ್ಯಾಸಿ ಕಲಾವಿದರಾಗಿ, ಸಂಘಟಕರಾಗಿ, ಹಲವಾರು ಸಂಘ
ಸಂಸ್ಥೆಗಳ ಸದಸ್ಯರಾಗಿ ಸಾರ್ವಜನಿಕ ಬದುಕಿನ ಸಾಕ್ಷಿಪ್ರಜ್ಞೆಯಂತೆ ಇರುವ ಅವರದ್ದು ಸರಳ, ಸಮಾಜಮುಖ ವ್ಯಕ್ತಿತ್ವ. ರಾಜ್ಯ ಪತ್ರಿಕಾ ಹಾಗೂ ನಾಟಕ ಅಕಾಡೆಮಿಗಳಿಂದ ಪುರಸ್ಕೃತರಾಗಿರುವ ಇವರು ಪ್ರತಿಷ್ಠಿತ ಮಣಿಪಾಲ ವಿಶ್ವವಿದ್ಯಾಲಯದ ‘ಡಾ| ಟಿಎಂಎ ಪೈ ಆರೋಗ್ಯ ಸೇವಕ ಪ್ರಶಸ್ತಿ 2017’ಕ್ಕೆ ಭಾಜನರಾಗಿರುವರಲ್ಲದೇ, ಅದೇ ವರ್ಷ ಹಳದೀಪುರದಲ್ಲಿ ನಡೆದ ಹೊನ್ನಾವರ ತಾಲೂಕಾ ಏಳನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವಕ್ಕೆ ಪಾತ್ರರಾದವರೂ ಹೌದು, ದಕ್ಷಿಣೋತ್ತರ ಕನ್ನಡವನ್ನು ಬೆಸೆದ ‘ಜೀವನದಿ’ಯಂತಿರುವ ಅವರ ಅರ್ಧಶತಮಾನದ ಬಹುಮುಖ ವ್ಯಕ್ತಿತ್ವವನ್ನು ಸ್ಮರಿಸುತ್ತಾ ಪ್ರೀತಿ ಹಾಗೂ ಗೌರವಪೂರ್ವಕವಾಗಿ ಅಭಿನಂದಿಸುವ ಕಾರ್ಯಕ್ರಮ ಸಿದ್ಧತೆ ಬರದಿಂದ ನಡೆದಿದೆ.

RELATED ARTICLES  ಕುಮಟಾದಲ್ಲಿ ಶುಭಾರಂಭಗೊಂಡಿದೆ ಆರಾಧನಾ ಫ್ಯಾಷನ್ ಹೌಸ್

ಜಿಲ್ಲೆಯ ಪತ್ರಿಕಾರಂಗದಲ್ಲಿ ಹಿರಿಯ ಪತ್ರಕರ್ತರಾಗಿ, ಜಿಲ್ಲೆಯ ಬಗ್ಗೆ ಆಗುಹೋಗುಗಳ ಬಗ್ಗೆ ನಿರರ್ಗಳವಾಗಿ ಬರೆಯುವ, ಪತ್ರಿಕಾರಂಗದಲ್ಲಿ ಜೀಯು ಎಂದೇ ಪರಿಚಿತರಾಗಿರುವ ಹಿರಿಯ ಪತ್ರಕರ್ತ ಹೊನ್ನಾವರದ ಜಿ.ಯು.ಭಟ್ ಅವರನ್ನು ಸಾರ್ವಜನಿಕವಾಗಿ ಅಭಿನಂದಿಸುವ ‘ಜೀಯು 75
ಅಮೃತಾಭಿನಂದನೆ’ ಕಾರ್ಯಕ್ರಮ ಪಟ್ಟಣದ ಪ್ರಭಾತನಗರದ ಮೂಡಗಣಪತಿ ಸಭಾಭವನದಲ್ಲಿ ಡಿ. 13 ರ ಬೆಳಿಗ್ಗೆ 10 : 00 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದ ಕುರಿತಾಗಿ ಜೀ.ಯು ಭಟ್ಟರ ಅಭಿನಂದನಾ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಶಿವಾನಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಅವರು ಪಟ್ಟಣದ ಎಸ್‌.ಡಿ. ಎಂ. ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ‘ಜಿ.ಯು.ಭಟ್ ಅವರಿಗೆ ಎಪ್ಪತ್ತೈದು ವರ್ಷವಾಗಿದ್ದು, ಪತ್ರಕರ್ತರಾಗಿ 50 ವರ್ಷ ತುಂಬಿದ ಜೀಯು ಜಿಲ್ಲೆಯ ಜನಾಭಿಪ್ರಾಯಕ್ಕೆ ದನಿಯಾಗಿದ್ದಾರೆ’ ಎಂದರು. ಹೀಗಾಗಿ ಅವರನ್ನು ಸಾರ್ವಜನಿಕ ಎಲ್ಲರ ಸಹಕಾರದೊಂದಿಗೆ ಅಭಿನಂದಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

RELATED ARTICLES  ವಿದ್ಯಾರ್ಥಿಗಳಲ್ಲಿನ ಕ್ರೀಡಾ ಬೌಧಿಕತೆ ಶ್ಲಾಘನೀಯ - ಶ್ರೀ ಕೆ. ವಿ. ಶೆಟ್ಟಿ.

ಬೆಳಿಗ್ಗೆ 10ಕ್ಕೆ ಸ್ಥಳೀಯ ಸಂಗೀತ ಕಲಾವಿದರಿಂದ
‘ನಾದಾಭಿನಂದನ’ ನಡೆಯುವುದು. 11.30 ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ವೀರೇಂದ್ರ ಹೆಗ್ಗಡೆಯವರು ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು ಮಣಿಪಾಲ ಮೀಡಿಯಾ ನೆಟವರ್ಕ್ ವರ್ಕ್ ಕಾರ್ಯನಿರ್ವಾಹಕ ಅಧ್ಯಕ್ಷ ಸತೀಶ ಪೈ, ತರಂಗ ವಾರಪತ್ರಿಕೆಯ ವ್ಯವಸ್ಥಾಪಕ
ಡಾ.ಸಂಧ್ಯಾ ಎಸ್.ಪೈ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಪಾದಕ ಕಾದಂಬರಿಕಾರ ಗಜಾನನ ಶರ್ಮಾ ಅಭಿನಂದನ ನುಡಿಗಳನ್ನಾಡುವರು. ಅಭಿನಂದನಾ ಗ್ರಂಥ, ‘ಜೀವನದಿ’ಹಾಗೂ ಜೀಯು ಅಂಕಣ ಬರಹಗಳ ‘ಜನವಾಣಿ’ ಬಿಡುಗಡೆ ಗೊಳ್ಳಲಿವೆ’ ಎಂದು ತಿಳಿಸಿದರು.

ಸಮಿತಿ ಗೌರವಾಧ್ಯಕ್ಷ ಆರ್.ಎಸ್.ರಾಯ್ಕರ ಉಪ್ಪೋಣಿ, ಅಧ್ಯಕ್ಷ ವೆಂಕಟ್ರಮಣ ಹೆಗಡೆ ಕವಲಕ್ಕಿ, ಉಪಾಧ್ಯಕ್ಷ ಚಂದ್ರಶೇಖರ ಗೌಡ ಮಂಕಿ, ಎಂ.ಆರ್‌.ಹೆಗಡೆ ಗುಣವಂತೆ, ನಾಗರಾಜ ಹೆಗಡೆ ಅಪಗಾಲ, ಪ್ರಶಾಂತ ಹೆಗಡೆ ಮೂಡಲಮನೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.