ಉಡುಪಿ: ಕಾರ್ಕಳ ತಾಲೂಕು ನೆಲ್ಲಿಕಾರು ಎಂಬಲ್ಲಿ ಇಂದು(ಶನಿವಾರ) ಬೆಳಗ್ಗೆ ಖಾಸಗಿ ಬಸ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಎರಡು ವರ್ಷದ ಮಗು ಸೇರಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಉಡುಪಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಜಗೋಳಿ ಸಮೀಪದ ನೆಲ್ಲಿಕಾರು ಗ್ರಾ.ಪಂ.ವ್ಯಾಪ್ತಿಯ ಮೈನೇರು ಪ್ರದೇಶದಲ್ಲಿ ಘಟನೆ ನಡೆದಿದ್ದು, ಶನಿವಾರ ಬೆಳಗ್ಗೆ 7 ರ ವೇಳೆಗೆ ಘಟನೆ ಸಂಭವಿಸಿದೆ ಎದಂದು ವರದಿಗಳು ತಿಳಿಸಿವೆ.

RELATED ARTICLES  ವಿವೇಕಾನಂದರ ಪ್ರತಿಮೆಯನ್ನು ಸಿದ್ಧಪಡಿಸಿ ಶಾಲೆಗೆ ಕೊಡುಗೆ ನೀಡಿದ ಪಾಲಕ.

ಗಂಡ, ಹೆಂಡತಿ ಹಾಗೂ ಮಗು ಸಹಿತ ಮೂವರು ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಮೂಲದ ಕುಟುಂಬ ಕಾರಿನಲ್ಲಿ ಧರ್ಮಸ್ಥಳ ಪ್ರವಾಸ ಮುಗಿಸಿ ಶೃಂಗೇರಿ ಕಡೆಗೆ ಹೋಗುತ್ತಿತ್ತು. ಮಾರ್ಗಮಧ್ಯೆ ಕಾರು ಮತ್ತು ಬಸ್​ ಮುಖಾಮುಖಿ ಡಿಕ್ಕಿಯಾಗಿದ್ದು, ಕಾರಿನಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಕಾರ್ಕಳ ಠಾಣೆ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದರು.

RELATED ARTICLES  "ಜಾಬಾಲಿಯವರ ನಾಸ್ತಿಕವಾದದ ಮಂಡನೆ"(‘ಶ್ರೀಧರಾಮೃತ ವಚನಮಾಲೆ’).