ಬಾಂಗ್ಲಾದೇಶ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಇಶಾನ್ ಕಿಶಾನ್ ಹಾಗೂ ವಿರಾಟ್ ಕೊಹ್ಲಿ ಅವರ ಅಬ್ಬರದ ಜೊತೆಯಾಟದಿಂದ ಭಾರತ ತಂಡ ಬೃಹತ್ ಪ್ರಮಾಣದ ರನ್ ಗಳಿಸಿದೆ. ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 409 ರನ್ ಕಲೆ ಹಾಕಿದೆ.

ಇಲ್ಲಿನ ಚೌಧರಿ ಸ್ಟೇಡಿಯಂನಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಇಶಾನ್ ಕಿಶಾನ್ 131 ಎಸೆತಗಳಲ್ಲಿ 210 ರನ್ ಗಳಿಸಿದರೆ, ವಿರಾಟ್ ಕೊಹ್ಲಿ 91 ಎಸೆತಗಳಲ್ಲಿ 113 ರನ್ ಗಳಿಸಿದರು. ಶಿಖರ್ ಧವನ್ ಔಟ್ ಆದ ನಂತರ ಜೊತೆಯಾದ ಈ ಇಬ್ಬರು ಆಟಗಾರರು ಮೈದಾನದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ಎರಡನೇ ವಿಕೆಟ್ ನಲ್ಲಿ 290 ರನ್ ಗಳಿಸಿದರು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸ್ಪಟ್ಟ ಭಾರತ ತಂಡದಲ್ಲಿ ಇಂದು ರೋಹಿತ್ ಬದಲಿಗೆ ಇಶಾನ್ ಕಿಶನ್ ಸ್ಥಾನ ಪಡೆದಿದ್ದರು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡ ಇಶಾನ್ ಕಿಶನ್ ಭರ್ಜರಿಯಾಗಿ ಬ್ಯಾಟ್ ಬೀಸಿದರು.

ಆರಂಭದಲ್ಲಿ ನಿಧಾನವಾಗಿ ಬ್ಯಾಟಿಂಗ್ ಆರಂಭಿಸಿದ ಇಶಾನ್ 85 ಎಸೆತಗಳಲ್ಲಿ ತನ್ನ ಚೊಚ್ಚಲ ಶತಕ ಬಾರಿಸಿದರು. ಆದರೆ ನಂತರ ಮನಬಂದಂತೆ ಬ್ಯಾಟ್ ಬೀಸಿದ ಅವರು 126 ಎಸೆತದಲ್ಲಿ ದ್ವಿಶತಕದ ಗಡಿ ದಾಟಿದರು.

RELATED ARTICLES  ಕಾಲ ಮಿಂಚುವ ಮೊದಲು ಗೋ ತಳಿ ಉಳಿಸೋಣ

ಬಾಂಗ್ಲಾದೇಶ ವಿರುದ್ದ ಮೂರನೇ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಸಚಿನ್‌ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಅವರನ್ನೊಳಗೊಂಡ ದಿಗ್ಗಜರ ಪಟ್ಟಿಗೆ ಇಶಾನ್‌ ಕಿಶನ್‌ ಸೇರ್ಪಡೆಯಾಗಿದ್ದಾರೆ. ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಸಿಡಿಸಿದ ವಿಶ್ವದ ಏಳನೇ ಹಾಗೂ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡರು. ಈ ಹಿಂದೆ ಭಾರತ ತಂಡದ ಪರ ಸಚಿನ್‌ ತೆಂಡೂಲ್ಕರ್, ರೋಹಿತ್‌ ಶರ್ಮಾ ಹಾಗೂ ವೀರೇಂದ್ರ ಸೆಹ್ವಾಗ್ ದ್ವಿಶತಕ ಬಾರಿಸಿದ್ದರು.