ಬಹುಭಾಷಾ ನಟ ಶರತಕುಮಾರ ಅವರನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಶರತ್ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದಂತೆಯೇ ತಕ್ಷಣವೇ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶರತಕುಮಾರ ಡಯಾರಿಯಾ, ಡಿಹೈಡ್ರೇಷನ್‌ನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗಿದೆ. ಶರತಕುಮಾತ ಅವರ ಪತ್ನಿ ರಾಧಿಕಾ ಶರತಕುಮಾರ ಮತ್ತು ಪುತ್ರಿ ವರಲಕ್ಷ್ಮೀ ಅವರು ಆಸ್ಪತ್ರೆಯಲ್ಲಿದ್ದಾರೆ ಎಂದು ವರದಿ ತಿಳಿಸಿದೆ.
ಈವರೆಗೂ ಅವರ ಆರೋಗ್ಯ ಸ್ಥಿತಿಯ ಕುರಿತು ಅವರ ಕುಟುಂಬದವರು ಮಾಹಿತಿ ಹಂಚಿಕೊಂಡಿಲ್ಲ ಆಸ್ಪತ್ರೆ ಕಡೆಯಿಂದಲೂ ಮಾಹಿತಿ ಬಿಡುಗಡೆಯಾಗಿಲ್ಲ. 2020ರಲ್ಲಿ ಶರತ್‌ ಅವರಿಗೆ ಕೊರೊನಾ ವೈರಸ್ ತಗುಲಿತ್ತು.

RELATED ARTICLES  ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಎಂ.ಎಲ್.ಎ ಟಿಕೆಟ್ ಆಕಾಂಕ್ಷಿ ಶ್ರೀಧರ ನಾಯ್ಕ ಕೈಕಿಣಿ

68 ವರ್ಷ ವಯಸ್ಸಿನ ಶರತಕುಮಾರ್ ಅವರು 1986ರಲ್ಲಿ ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕ ಪ್ರವೇಶಿಸಿದ್ದರು. ನಟನೆ ಜೊತೆಗೆ ನಿರ್ಮಾಣ, ನಿರ್ದೇಶನದಲ್ಲೂ ಅವರು ತೊಡಗಿಸಿಕೊಂಡಿದ್ದಾರೆ. ತಮಿಳು ಸಿನಿಮಾದ ಜೊತೆಗೆ ಅವರು, ಕೆಲವು ತೆಲುಗು, ಕನ್ನಡ ಹಾಗೂ ಮಲಯಾಳಂ ಸಿನೆಮಾಗಳಲ್ಲೂ ನಟಿಸಿದ್ದಾರೆ. ಸಿನಿಮಾರಂಗದ ಜೊತೆಗೆ ರಾಜಕೀಯವಾಗಿಯೂ ಅವರು ಸಕ್ರಿಯವಾಗಿದ್ದಾರೆ. ಶಾಸಕರಾಗಿಯೂ ಕೆಲಸ ಮಾಡಿದ್ದಾರೆ.
ಈಚೆಗೆ ತೆರೆಕಂಡು ದೊಡ್ಡ ಯಶಸ್ಸು ಕಂಡ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾದಲ್ಲಿ ಪೆರಿಯಾ ಪುಳುವೆಟ್ಟಾರಾಯರ್‌ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು.
2012ರಲ್ಲಿ ತೆರೆಕಂಡ ‘ಸಾರಥಿ’ ಸಿನಿಮಾದ ಮೂಲಕ ಕನ್ನಡ ಸಿನೆಮಾಕ್ಕೆ ಶರತಕುಮಾರ್ ಕಾಲಿಟ್ಟರು. ಮೈನಾ, ಸಂತೆಯಲ್ಲಿ ನಿಂತ ಕಬೀರ’, ರಾಜಕುಮಾರ’, ಸೀತಾರಾಮ ಕಲ್ಯಾಣ’, ‘ಜೇಮ್ಸ್’, ‘ರೇಮೊ’ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲೆಗಳು (ಮರೆಯಾಗುತ್ತಿದೆಯಾ ಮಾನವೀಯತೆ)