ಬೆಂಗಳೂರು : ಏಕಕಾಲದಲ್ಲಿ ಮಕ್ಕಳ ದಟ್ಟಣೆ ಆಗುವುದನ್ನು ತಡೆಗಟ್ಟುವ ಸಲುವಾಗಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಶಾಲಾ ಮಕ್ಕಳ ಮಧ್ಯಾಹ್ನದ ಬಿಸಿಯೂಟ ವೇಳಾಪಟ್ಟಿಯನ್ನು ಹೊರಡಿಸುವ ಮೂಲಕ ಸರಕಾರ ಮಹತ್ವದ ಮಾರ್ಪಾಡು ಮಾಡಿದೆ.

ಈ ವೇಳಾಪಟ್ಟಿ ಅನ್ವಯ 1ರಿಂದ 5ನೇ ತರಗತಿ ವಿದ್ಯಾರ್ಥಿಗಳು ಮಧ್ಯಾಹ್ನ 1 ಗಂಟೆಯಿಂದ 1.45 ರ ವರೆಗೆ ಬಿಸಿಯೂಟ ಸ್ವೀಕರಿಸಲಿದ್ದರೆ, 6 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಮಧ್ಯಾಹ್ನ 2 ರಿಂದ 2.40 ರ ವರೆಗೆ ಬಿಸಿಯೂಟ ಸ್ವೀಕರಿಸಲಿದ್ದಾರೆ. ಅಲ್ಲದೆ ಮಕ್ಕಳಿಗೆ ಆಹಾರ ನೀಡಲು ಸ್ಟೀಲ್ ತಟ್ಟೆ ಮತ್ತು ಲೋಟಗಳನ್ನೇ ಬಳಸಬೇಕು ಎಂದು ಸೂಚಿಸಲಾಗಿದೆ.

RELATED ARTICLES  ಟ್ವಿಟ್ಟರ್ ನಲ್ಲಿ ಮೋದಿಯನ್ನು ಹಿಂದಿಕ್ಕಿದ ರಾಹುಲ್ ಗಾಂಧಿ!

ಆಹಾರ ತಯಾರಿಕಾ ವೇಳೆ ಶುಚಿತ್ವ ಕಾಪಾಡಿಕೊಳ್ಳುವುದು ಕಡ್ಡಾಯವಾಗಿದ್ದು, ಸಿಬ್ಬಂದಿ ತಲೆಗವಸು ಹಾಗೂ ಹತ್ತಿ ಬಟ್ಟೆಯಿಂದ ತಯಾರಿಸಿದ ಎಪ್ರಾನ್ ಧರಿಸಬೇಕು ಎಂದು ತಿಳಿಸಲಾಗಿದೆ. ಅಲ್ಲದೆ ಸೊಪ್ಪು ಮತ್ತು ತರಕಾರಿಗಳನ್ನು ಶುದ್ಧ ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸಿ ಬಳಸಬೇಕು ಎಂದು ಸೂಚಿಸಲಾಗಿದೆ.

RELATED ARTICLES  ಫೇಸ್’ಬುಕ್ ಪ್ರೀತಿಗೆ ಗಂಡನಿಗೆ ಸುಪಾರಿ ನೀಡಿದ ಹೆಂಡತಿ!