ಬೆಂಗಳೂರು: ಅತ್ತಿಗೆಗೆ ವರದಕ್ಷಿಣೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಸಿನೆಮಾ ನಟಿ ಹಾಗೂ ಕಿರುತೆರೆ ಕಲಾವಿದೆ ಅಭಿನಯಾ ಅವರಿಗೆ ಹೈಕೋರ್ಟ್‌ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಈ ಪ್ರಕರಣದಲ್ಲಿ ಅಭಿನಯ ಅವರ ತಾಯಿ ಜಯಮ್ಮ ಅವರಿಗೆ 5 ವರ್ಷ ಜೈಲು ಶಿಕ್ಷೆ ನೀಡಿದೆ. ವರದಕ್ಷಿಣ ಕಿರುಕುಳಕ್ಕೆ ಸಂಬಂಧಿಸಿದಂತೆ ಅಭಿನಯಾ ಅಣ್ಣ ಶ್ರೀನಿವಾಸ ಅವರ ಪತ್ನಿ ಲಕ್ಷ್ಮೀದೇವಿ ಎಂಬುವವರು ಈ ಹಿಂದೆ ಅಭಿನಯಾ ಮತ್ತು ಅವರ ತಾಯಿ ಜಯಮ್ಮ ವಿರುದ್ಧ ದೂರು ನೀಡಿದ್ದರು. ಬೆಂಗಳೂರಿನ ಚಂದ್ರಾ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾ.ಎಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರಿದ್ದ ಹೈಕೋರ್ಟ್‌ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

RELATED ARTICLES  ಮನುಷ್ಯ ಯಾರೊಬ್ಬರ ಸ್ವಂತ ಸ್ವತ್ತು ಆಗಬಾರದು

ಪ್ರಕರಣದ ಹಿನ್ನೆಲೆ: 1998ರಲ್ಲಿ ಶ್ರೀನಿವಾಸ ಅವರ ಜತೆಗೆ ಲಕ್ಷ್ಮೀದೇವಿ ಅವರ ವಿವಾಹವಾಗಿತ್ತು. ವರದಕ್ಷಿಣಿಯಾಗಿ 80 ಸಾವಿರ ನಗದು, ಚಿನ್ನಾಭರಣವನ್ನು ಪಡೆದಿದ್ದರು. ಬಳಿಕ ಮತ್ತೆ ಹಣ ತರುವಂತೆ ಕಿರುಕುಳ ನೀಡಿದ್ದರು. ಇದರಿಂದ ಬೇಸತ್ತ ಲಕ್ಷ್ಮೀದೇವಿ 2002ರಲ್ಲಿಯೇ ಇವರೆಲ್ಲರ ಮೇಲೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು.

RELATED ARTICLES  ಸೀತಾಬಾಯಿ ಗಜಾನನ ಹೆಗಡೆ ಬಳಗಂಡಿ ಇವರ ಆತ್ಮಕ್ಕೆ ಚಿರ ಶಾಂತಿ ಕೋರಿ "ಮಗಳ ನುಡಿನಮನ"

2012ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ, ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಐವರು ಆರೋಪಿಗಳಿಗೆ (ಜಯಮ್ಮ, ಅಭಿನಯಾ, ಶ್ರೀನಿವಾಸ, ರಾಮಕೃಷ್ಣ ಮತ್ತು ಚೆಲುವರಾಜು) ಎರಡು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಜಿಲ್ಲಾ ನ್ಯಾಯಾಲಯ ಐವರೂ ಆರೋಪಿಗಳನ್ನು ಖುಲಾಸೆಗೊಳಿಸಿ ಆದೇಶಿಸಿತ್ತು. ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಲಕ್ಷ್ಮೀದೇವಿ ಹಾಗೂ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಮೂವರು ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಿದೆ.