ಕುಮಟಾ : ಆರೋಗ್ಯ ಕ್ಷೇತ್ರದ ಭಲವರ್ಧನೆಗಾಗಿ 15 ನೇ ಹಣಕಾಸು ಯೋಜನೆಯಡಿಯಲ್ಲಿ ನಮ್ಮ ಕ್ಲಿನಿಕ್( ನಗರ ಆರೋಗ್ಯ ಮತ್ತು ಕ್ಷೇಮ ಕೇಂದ್ರ) ಎಂಬ ನಗರ ಪ್ರದೇಶದ ಬಡಜನರಿಗೆ ಅನುಕೂಲವಾಗುವ ರೀತಿಯಲ್ಲಿ, ಆರೋಗ್ಯ ಸೇವೆಗಳಿಗಾಗಿ ಸಾರ್ವಜನಿಕರು ತಮ್ನ ಸ್ವಂತ ಹಣದ ಖರ್ಚನ್ನ ಕಡಿಮೆ ಮಾಡುವ ಮತ್ತು ದ್ವಿತಿಯ ಹಾಗೂ ತ್ರತಿಯ ಹಂತದ ಆರೋಗ್ಯ ಸಂಸ್ಥೆಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದ್ದು ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಆಸ್ಪತ್ರೆಗಳಿಂದ ಕನಿಷ್ಟ 5 ಕಿ ಮಿ ವ್ಯಾಪ್ತಿಯ ದೂರದಲ್ಲಿ ಪ್ರಾಥಮಿಕ ಆರೋಗ್ಯ ಸೇವೆಗಳನ್ನು ವಿಕೇಂದ್ರಿಕರಿಸುವ ಜೊತೆಗೆ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಸಲುವಾಗಿ ಇಂದು ಮಾನ್ಯ ಮುಖ್ಯಮಂತ್ರಿಗಳು ಹುಬ್ಬಳ್ಳಿಯಲ್ಲಿ ವರ್ಚುವಲ್ ಸಭೆಯ ಮೂಲಕ ರಾಜ್ಯದ 114 ನಮ್ಮ ಕೇಂದ್ರಗಳನ್ನು ಎಕಕಾಲದಲ್ಲಿ ಲೋಕಾರ್ಪಣೆಯನ್ನು ಮಾಡಿದರು.

RELATED ARTICLES  ಕುಮಟಾದಲ್ಲಿ ಭೀಕರ ಅಪಘಾತ : ಮಹಿಳೆ ಸಾವು

ಆ ನಿಮಿತ್ತ ಕುಮಾಟಾ ತಾಲೂಕಿನ ಹಳ್ಕಾರ ಕ್ರಾಸ ಚಿತ್ರಗಿ ಬಳಿಯಲ್ಲಿ ಇವತ್ತು ಮಾನ್ತ ಗೌರವಾನ್ವಿ ಅಧ್ಯಕ್ಷರು ,ಉಪಾಧ್ಯಕ್ಷರು ಪುರಸಭೆ ಕುಮಟಾ ನಮ್ನ ಕ್ಲಿನಿಕ್ ನ್ನ ಉದ್ಘಾಟಿಸುವದರ ಮೂಲಕ ಸಾರ್ವಜನಿಕರ ಸೇವೆಗೆ ಅನುವು ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಮಾನ್ಯ ತಾಲೂಕು ಆರೋಗ್ಯಾಧಿಕಾರಿಗಳು, ತಾಲೂಕು ಮಟ್ಟದ ಅಧಿಕಾರಿಗಳು,ಸಾರ್ವಜನಿಕರು, ಸಿಬ್ಬಂದಿಗಳು ಹಾಜರಿದ್ದರು.

RELATED ARTICLES  ಜನತೆಗೆ ಧನ್ಯವಾದ ತಿಳಿಸಿದ ನಿವೇದಿತ್ ಆಳ್ವಾ.