2022 ಕೊನೆಯಾಗುತ್ತಿದ್ದು ಇನ್ನು ಕೆಲವೇ ವಾರದಲ್ಲಿ ಹೊಸ ವರ್ಷ ಆರಂಭವಾಗಲಿದೆ. ನಾವು ವರ್ಷಾಂತ್ಯದಲ್ಲಿ ಏನು ಮಾಡುವುದು ಎಂದು ಪ್ಲ್ಯಾನ್ ಮಾಡಿಕೊಳ್ಳಲು ಇದು ಉತ್ತಮ ಸಮಯ. ಹಾಗೆಯೇ ಮುಂದಿನ ವರ್ಷದಲ್ಲಿ ಏನು ಮಾಡುವುದು ಎಂದು ಕೂಡಾ ಪ್ಲ್ಯಾನ್ ಈಗಲೇ ಮಾಡಿಕೊಳ್ಳಬಹುದು. ಈ ಹೊಸ ವರ್ಷ ಆರಂಭಕ್ಕೂ ಮುನ್ನ ಹೊಸ ವರ್ಷದಲ್ಲಿ ಯಾವೆಲ್ಲ ದಿನ ಬ್ಯಾಂಕ್‌ಗಳು ರಜೆ ಇರಲಿದೆ ಎಂದು ತಿಳಿದುಕೊಳ್ಳಿ.

ಸಾಮಾನ್ಯವಾಗಿ ಖಾಸಗಿ ಹಾಗೂ ಸರ್ಕಾರಿ ಬ್ಯಾಂಕ್‌ ರಾಷ್ಟ್ರೀಯ ರಜಾದಿನ, ಹಬ್ಬಕ್ಕಾಗಿ ರಜೆ ಇದ್ದಾಗ ಹಾಗೂ ಭಾನುವಾರ ಬಂದ್ ಆಗಿರುತ್ತದೆ. ಹಾಗೆಯೇ ದೇಶದಾದ್ಯಂತ ಪ್ರತಿ ತಿಂಗಳು ಎರಡನೇ ಹಾಗೂ ನಾಲ್ಕನೇ ಶನಿವಾರ ಬ್ಯಾಂಕ್ ರಜೆ ಇರಲಿದೆ. ಇನ್ನು ಈ ರಜಾದಿನಗಳ ಮಾತ್ರವಲ್ಲದೇ ಕೆಲವು ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ಆಚರಣೆ ಮಾಡುವ ಸ್ಥಳೀಯ ಹಬ್ಬದ ಸಂದರ್ಭದಲ್ಲೂ ಬ್ಯಾಂಕ್‌ಗಳು ಬಂದ್ ಆಗಲಿದೆ. ಈ ಸಂದರ್ಭದಲ್ಲಿ ಬ್ಯಾಂಕ್‌ಗಳ ಸ್ಥಳೀಯ ಬ್ರಾಂಚ್‌ಗಳು ಮಾತ್ರ ಬಂದ್ ಆಗಿರುತ್ತದೆ.

ಆರ್‌ಬಿಐ ನಿಯಮದ ಪ್ರಕಾರ ರಜಾದಿನಗಳನ್ನು ಮೂರು ವಿಭಾಗವಾಗಿ ವಗೀಕರಿಸಲಾಗಿದೆ. ನೆಗೋಶಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ, ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜಾದಿನ ಮತ್ತು ರಿಯಲ್-ಟೈಮ್ ಗ್ರಾಸ್ ಸೆಟಲ್ಮೆಂಟ್ ಹಾಲಿಡೇ, ಬ್ಯಾಂಕ್‌ಗಳು ಖಾತೆಗಳ ಕೊನೆಯ ಹಣಕಾಸು ಲೆಕ್ಕಚಾರ ಅವಧಿ ಮೂರು ರಜಾ ವರ್ಗೀಕರಣವಾಗಿದೆ. 2023ರಲ್ಲಿ ಯಾವೆಲ್ಲ ದಿನ ಬ್ಯಾಂಕ್ ಬಂದ್‌ ಆಗಿರಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ…

RELATED ARTICLES  ಜೈನ ಸಮುದಾಯದ ದಾರ್ಶನಿಕ ಮುನಿ, ಆಚಾರ್ಯ ಶ್ರೀ ವಿದ್ಯಾಸಾಗರ ಮಹಾರಾಜ ಇನ್ನಿಲ್ಲ.

ಜನವರಿಯಿಂದ ಮಾರ್ಚ್ ಬ್ಯಾಂಕ್ ರಜೆ.


ಜನವರಿ 1, 2023: ಭಾನುವಾರ: ಹೊಸ ವರ್ಷದ ಮೊದಲ ದಿನ
ಜನವರಿ 23, 2023: ಸೋಮವಾರ: ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ
ಜನವರಿ 26, 2023: ಗುರುವಾರ: ಗಣರಾಜ್ಯೋತ್ಸವ
ಫೆಬ್ರವರಿ 5, 2023: ಭಾನುವಾರ: ಗುರುರವಿದಾಸ್ ಜಯಂತಿ
ಫೆಬ್ರವರಿ 18, 2023: ಶನಿವಾರ, ಮಹಾ ಶಿವರಾತ್ರಿ
ಮಾರ್ಚ್ 8, 2023: ಬುಧವಾರ, ಹೋಲಿ
ಮಾರ್ಚ್ 22, 2023: ಬುಧವಾರ, ಯುಗಾದಿ
ಮಾರ್ಚ್ 30, 2023: ಗುರುವಾರ, ರಾಮ ನವಮಿ

ಏಪ್ರಿಲ್‌ನಿಂದ ಜುಲೈ ಬ್ಯಾಂಕ್ ರಜೆ

ಏಪ್ರಿಲ್ 4, 2023: ಮಂಗಳವಾರ, ಮಹಾವೀರ ಜಯಂತಿ
ಏಪ್ರಿಲ್ 7, 2023: ಶುಕ್ರವಾರ, ಶುಭ ಶುಕ್ರವಾರ
ಏಪ್ರಿಲ್ 14, 2023: ಶುಕ್ರವಾರ, ಡಾ ಅಂಬೇಡ್ಕರ್ ಜಯಂತಿ
ಏಪ್ರಿಲ್ 22, 2023: ಶನಿವಾರ, ಈದ್-ಉಲ್-ಫಿತ್ರ್
ಮೇ 1, 2023: ಸೋಮವಾರ, ಮೇ ದಿನ/ಕಾರ್ಮಿಕರ ದಿನ
ಮೇ 5, 2023: ಶುಕ್ರವಾರ, ಬುಧ ಪೂರ್ಣಿಮಾ
ಜೂನ್, 29, 2023: ಗುರುವಾರ, ಬಕ್ರಿದ್/ಈದ್ ಅಲ್ ಅದಾ
ಜುಲೈ 29, 2023: ಶನಿವಾರ, ಮೊಹರಂ

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಆಗಸ್ಟ್, ಸೆಪ್ಟೆಂಬರ್ ಬ್ಯಾಂಕ್ ರಜೆ

ಆಗಸ್ಟ್ 15, 2023: ಮಂಗಳವಾರ, ಸ್ವಾತಂತ್ರ್ಯೋತ್ಸವ
ಆಗಸ್ಟ್ 16, 2023: ಬುಧವಾರ, ಪಾರ್ಸಿ ಹೊಸ ವರ್ಷ
ಆಗಸ್ಟ್ 31, 2023: ಗುರುವಾರ, ರಕ್ಷಾ ಬಂಧನ
ಸೆಪ್ಟೆಂಬರ್ 7, 2023: ಗುರುವಾರ, ಜನ್ಮಾಷ್ಟಮಿ/ಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 19, 2023: ಮಂಗಳವಾರ, ಗಣೇಶ ಚತುರ್ಥಿ
ಸೆಪ್ಟೆಂಬರ್ 28, 2023: ಗುರುವಾರ, ಈದ್ ಇ ಮಿಲಾದ್

ಅಕ್ಟೋಬರ್‌ನಿಂದ ಡಿಸೆಂಬರ್ ಬ್ಯಾಂಕ್ ರಜೆ

ಅಕ್ಟೋಬರ್ 2, 2023: ಸೋಮವಾರ, ಗಾಂಧಿ ಜಯಂತಿ
ಅಕ್ಟೋಬರ್ 21, 2023: ಸೋಮವಾರ, ಮಹಾ ಸಪ್ತಮಿ
ಅಕ್ಟೋಬರ್ 22, 2023: ಭಾನುವಾರ, ಮಹಾ ಅಷ್ಟಮಿ
ಅಕ್ಟೋಬರ್ 23, 2023: ಸೋಮವಾರ, ಮಹಾ ನವಮಿ
ಅಕ್ಟೋಬರ್ 24, 2023: ಮಂಗಳವಾರ, ವಿಜಯ ದಶಮಿ
ನವೆಂಬರ್ 12, 2023: ಭಾನುವಾರ, ದೀಪಾವಳಿ
ನವೆಂಬರ್ 13, 2023: ಸೋಮವಾರ, ದೀಪಾವಳಿ ರಜೆ
ನವೆಂಬರ್ 15, 2023: ಬುಧವಾರ, ಬಾಯ್ ದೋಜ್
ನವೆಂಬರ್ 27, 2023: ಸೋಮವಾರ, ಗುರು ನಾನಕ್ ಜಯಂತಿ
ಡಿಸೆಂಬರ್ 25, 2023: ಸೋಮವಾರ, ಕ್ರಿಸ್‌ಮಸ್