ನವದೆಹಲಿ: ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಗ್ ಕಾಂಗ್ ಮತ್ತು ಥೈಲ್ಯಾಂಡ್ ನಿಂದ ಆಗಮಿಸುವ ಪ್ರಯಾಣಿಕರಿಗೆ ಏರ್ ಸುವಿಧಾ ಪೋರ್ಟಲ್ ಅನ್ನು ಜಾರಿಗೆ ತರಲಾಗುವುದು, ಅವರಿಗೆ ಆರ್ಟಿ-ಪಿಸಿಆರ್ ಕಡ್ಡಾಯಗೊಳಿಸಲಾಗುವುದು. ಭಾರತಕ್ಕೆ ಬಂದ ನಂತರ, ಅವರಿಗೆ ಪಾಸಿಟಿವ್ ಬಂದರೆ, ಅವರನ್ನು ಕ್ವಾರಂಟೈನ್ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಕಟ್ಟೆಚ್ಚರಕ್ಕೆ ಮುಂದಾದ ಕೇಂದ್ರ ಸರ್ಕಾರ, ಚೀನಾ, ಜಪಾನ್, ದಕ್ಷಿಣ ಕೊರಿಯಾ, ಹಾಂಕಾಂಗ್ ಮತ್ತು ಥೈಲ್ಯಾಂಡ್ನಿಂದ ಅಂತರರಾಷ್ಟ್ರೀಯ ಆಗಮನಕ್ಕೆ ಆರ್ಟಿ-ಪಿಸಿಆರ್ ಕಡ್ಡಾಯವಾಗಲಿದೆ ಎಂದು ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.
ಇನ್ನು ಈ ದೇಶಗಳಿಂದ ಬಂದ ಯಾವುದೇ ಪ್ರಯಾಣಿಕರಿಗೆ ರೋಗಲಕ್ಷಣಗಳು ಕಂಡುಬಂದರು ಅಥವಾ ಕೋವಿಡ್ ಪಾಸಿಟಿವ್ ಎಂದು ಕಂಡುಬಂದರೆ ಅವರನ್ನು ಕ್ವಾರಂಟೈನ್ಗೆ ಒಳಪಡಿಸಲಾಗುವುದು ಎಂದು ಸಚಿವರು ತಿಳಿಸಿದರು.