ಕಳೆದ ಒಂದು ವಾರದಲ್ಲಿ ಚೀನಾದಲ್ಲಿ ಕೊರೋನಾ ಸೋಂಕು ಹಠಾತ್ ಆಗಿ ಹರಡಿದ್ದು, ಈ ವಾರ ಒಂದೇ ದಿನದಲ್ಲಿ ಸುಮಾರು 3.7 ಕೋಟಿ ಜನ ಕರೋನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಸರ್ಕಾರದ ವರದಿ ತಿಳಿಸಿದೆ. ಈ ಮೂಲಕ ಚೀನಾ ಜಾಗತಿಕ ರೆಕಾರ್ಡ್ ಕೂಡ ಮಾಡಿದೆ. ದಿನಕ್ಕೆ 3.7 ಕೋಟಿ ಪ್ರಕರಣಗಳು ಎಂದರೆ ಇದು ವಿಶ್ವದಲ್ಲೇ ಪ್ರಥಮ ಬಾರಿಗೆ ಆಗಿದ್ದು ಈ ಹಿಂದೆ ಇಷ್ಟು ಪ್ರಮಾಣದಲ್ಲಿ ಜನರು ಸೋಂಕಿಗೆ ಒಳಗಾಗಿಲ್ಲ.
ಪ್ರಸ್ತುತ ಅಂದಾಜಿನ ಪ್ರಕಾರ, ಡಿಸೆಂಬರ್‌ನ ಮೊದಲ 20 ದಿನಗಳಲ್ಲಿ 2.5 ಕೋಟಿ ಜನರು ಅಥವಾ ಚೀನಾದ ಜನಸಂಖ್ಯೆಯ ಶೇಕಡ 18ರಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆ. ಬುಧವಾರ ನಡೆದ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗದ ಆಂತರಿಕ ಸಭೆಯಲ್ಲಿ ಈ ಮಾಹಿತಿ ಹೊರಬಿದ್ದಿದೆ.
ಚೀನಾದ ಆರೋಗ್ಯ ಅಧಿಕಾರಿಗಳು ಒಂದು ವಾರದೊಳಗೆ ಗರಿಷ್ಠ ತಲುಪುವ ನಿರೀಕ್ಷೆಯಿದೆ ಎಂದು ಗುರುವಾರ ಹೇಳಿದರು. ಒಂದು ಅಥವಾ ಎರಡು ತಿಂಗಳ ಕಾಲ ಸೋಂಕಿನ ಪ್ರಮಾಣ ಗರಿಷ್ಠವಾಗಿ ಹೆಚ್ಚಲಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಡಿಸೆಂಬರ್ 19 ರಂದು, ಸರ್ಕಾರವು ತನ್ನ ಶೂನ್ಯ-ಕೋವಿಡ್ ನೀತಿ ನಿಲ್ಲಿಸಿದ ನಂತರ ಚೀನಾ ಮೊದಲ ಬಾರಿಗೆ ಅಧಿಕೃತವಾಗಿ ಸಾವುನೋವುಗಳನ್ನು ವರದಿ ಮಾಡಿದೆ. ಈ ಸಂದರ್ಭದಲ್ಲೇ ಜನರನ್ನು ಅವರ ಅಪಾರ್ಟ್ಮೆಂಟ್ನಲ್ಲಿ ಕೂಡಿ ಹಾಕಿದ್ದ ಪ್ರಕರಣ ನಡೆದಿತ್ತು. ಈ ಸಂದರ್ಭದಲ್ಲೇ ಚೀನಾದ ಟಿಕ್ಟಾಕ್ನಲ್ಲಿ ಭಾರತದ ಜಿಮ್ಮಿ ಜಿಮ್ಮಿ ಹಾಡು ಫುಲ್ ವೈರಲ್ ಆಗಿದ್ದು.