ವಾಟ್ಸಪ್ ಅಪ್ಲಿಕೇಶನ್ ವಿಶ್ವದಾದ್ಯಂತ 2 ಮಿಲಿಯನ್​ಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ. ಅದ್ರಲ್ಲೂ ಭಾರತದಲ್ಲೇ 550 ಮಿಲಿಯನ್ ಬಳಕೆದಾರರಿದ್ದಾರೆ. ಹಲವಾರು ಟೆಕ್ನಾಲಜಿ ಅಪ್ಲಿಕೇಶನ್​ಗಳಲ್ಲಿ ಈ ವರ್ಷ ಅಪ್ಡೇಟ್​ಗಳು ಬಂದಿವೆ. ಅದ್ರಲ್ಲೂ ಈ ಬಾರಿ ಅತೀ ಹೆಚ್ಚು ಅಪ್ಡೇಟ್ಸ್​ಗಳನ್ನು ಮಾಡಿದ ಅಪ್ಲಿಕೇಶನ್ ಎಂದರೆ ಅದು ವಾಟ್ಪಪ್​. ಈ ವರ್ಷ ಜನಪ್ರಿಯ ಮೆಸೇಜಿಂಗ್ ಆಪ್ ವಾಟ್ಸಪ್ ಬಳಕೆದಾರರಿಗೆ ನೀಡಿರುವ ಫೀಚರ್ಸ್​ಗಳು ಎಲ್ಲವೂ ಬಹಳಷ್ಟು ಉಪಯುಕ್ತವಾದವುಗಳು. 2022ರಲ್ಲಿ ಸಾಕಷ್ಟು ಅಪ್ಡೇಟ್ಸ್​ಗಳನ್ನು ಮಾಡಿದ ವಾಟ್ಸಪ್​ನಲ್ಲಿ ಮುಂದಿನ ವರ್ಷ ಇನ್ನೂ 10-15 ಅಪ್ಢೇಟ್ಸ್​ಗಳು ಬರಲಿವೆ ಎಂದು ಕಂಪನಿ ತಿಳಿಸಿದೆ.

RELATED ARTICLES  ಸಹಜವೇ ಸಮಂಜಸ

ಇದೀಗ ವರ್ಷಾಂತ್ಯದಲ್ಲಿ ವಾಟ್ಸಪ್​ ಹೊಸ ಅಪ್ಡೇಟ್​ ಅನ್ನು ತರುವ ಬಗ್ಗೆ ಯೋಚಿಸಿದ್ದು, ಇನ್ಮುಂದೆ ವಾಟ್ಸಪ್​ ಸ್ಟೇಟಸ್​ ಹಾಕುವಾಗ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದೆ. ಯಾಕೆಂದರೆ ಇನ್ನುಮುಂದೆ ಬಳಕೆದಾರರಿಗೆ ವಾಟ್ಸಪ್​ನಲ್ಲಿ ಸ್ಟೇಟಸ್ ಅನ್ನು​ ರಿಪೋರ್ಟ್​ ಮಾಡುವಂತಹ ಫೀಚರ್​ ಬರಲಿದೆ.

ವಾಟ್ಸಪ್​ನಲ್ಲಿ ಇದುವರೆಗೆ ಸ್ಟೇಟಸ್​ ಹಾಕುವುದು ಮತ್ತು ಬಳಕೆದಾರರಿಗೆ ಬೇಕಾದ ಹಾಗೆ ತೆಗೆಯಬಹುದಿತ್ತು. ಆದರೆ ಇನ್ಮುಂದೆ ವಾಟ್ಸಪ್​ನಲ್ಲಿ ಸ್ಟೇಟಸ್​ ಹಾಕುವಾಗ ಎಚ್ಚರದಿಂದ ಇರಬೇಕೆಂದು ಸೂಚಿಸಿದೆ. ವಾಟ್ಸಪ್ ತನ್ನ ಡೆಸ್ಕ್​ಟಾಪ್​ ಬಳಕೆದಾರರಿಗೆ ಸ್ಟೇಟಸ್​ ಅನ್ನು ರಿಪೋರ್ಟ್​ ಮಾಡುವಂತಹ ಆಯ್ಕೆಯನ್ನು ನೀಡಲು ಸಿದ್ಧತೆ ನಡೆಸಿದೆ.

RELATED ARTICLES  ಐಐಟಿ ಹೊರತಾಗಿಯೂ ಬೇರೆ ಜೀವನ ಇದೆ...

ಇದುವರೆಗೆ ಈ ಆಯ್ಕೆ​ ವಾಟ್ಸಪ್​ ಬಳಕೆದಾರರಿಗೆ ಮೆಸೇಜ್​ ಮಾಡುವಲ್ಲಿ ನೀಡಿತ್ತು. ಆದರೆ ಇನ್ನು ಮುಂದಿನ ದಿನಗಳಲ್ಲಿ ಸ್ಟೇಟಸ್​ನಲ್ಲೂ ಬರಲಿದೆ ಎಂದಿದ್ದಾರೆ.