ಭಟ್ಕಳ- ಡಾ. ನಸಿಮ್ ಖಾನ್ ಅವರು 2023ರ ಭಟ್ಕಳ -ಹೊನ್ನಾವರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಕ್ಷದ ಎಂ.ಎಲ್.ಎ ಟಿಕೆಟ್ ಆಕಾಂಕ್ಷಿಯಾಗಿದ್ದರೆ.ಇವರು ಎಂ.ಬಿ.ಬಿ.ಎಸ್, ಎಫ್.ಎ.ಜಿ.ಇ ಪಡವಿದರರಾಗಿದ್ದು. ವೃತ್ತಿಯಲ್ಲಿ ಕಳೆದ 24 ವರುಷಗಳಿಂದ ಸರ್ವ ಧರ್ಮದ ಜನಸ್ನೇಹ ಡಾಕ್ಟರ್ ಆಗಿ ಶಿರಾಲಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಎಲ್ಲ ರೋಗಿಗಳಿಗೆ ಯಾವುದೇ ಭೇದ-ಭಾವ ಮಾಡದೆ ಪ್ರೀತಿಯಿಂದ ಉತ್ತಮ ರೀತಿಯಲ್ಲಿ ಚಿಕಿಸ್ಥೆ ನೀಡಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ರೋಗಿಗಳ ಸೇವೆಯೇ ತಮ್ಮ ಜೀವನದ ಗುರಿ ಧರ್ಮ ಎಂದು ಭಾವಿಸಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಕೆಲಸದ ಸಮಯವನ್ನು ಹೊರತುಪಡಿಸಿ ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳ ಕಷ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರ ಮನೆಯ ತನಕ ಭೇಟಿ ನೀಡಿ ತಮ್ಮ ಸೇವೆಯ ಮೂಲಕ ಸರ್ವ ಧರ್ಮದ ಜನರ ಮನವನ್ನು ಗೆದ್ದಿದ್ದಾರೆ.ಇವರು ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ತಮ್ಮ ಜೀವದ ಹಂಗು ತೊರೆದು ದಿನದ 24 ಗಂಟೆ ತಮ್ಮ ಮನೆಯಲ್ಲಿರುವ ಕ್ಲಿನಿಕ್ ತೆರೆದು ಸಾವಿರಾರು ಜನರಿಗೆ ಆ ಸಂಕಷ್ಟ ಸಮಯದಲ್ಲಿ ಆರೋಗ್ಯ ಸೇವೆ ನೀಡಿ ಸರ್ವ ಧರ್ಮದ ಜನರ ಮನವನ್ನು ಗೆದ್ದು ಅಪಾರ ಜನ ಮನ್ನಣೆ ಗಳಿಸಿದ್ದಾರೆ. 2020-21 ರ ಕೋವಿಡ್ ಸಂಕಷ್ಟ ಪರಿಸ್ಥಿತಿಯಲ್ಲಿ ಇವರು ತಮ್ಮ ಸ್ವಂತ ಖರ್ಚಿನಲ್ಲಿ ಸಾವಿರಾರು ಬಡ ಕುಟುಂಬಗಳಿಗೆ ಆಹಾರದ ಕಿಟ್ ನೀಡುವ ಮೂಲಕ ಅಪಾರ ಜನ ಮನ್ನಣೆ ಗಳಿಸಿದ್ದಾರೆ. ಇಂತಹ ಅಪಾರ ಜನ ಮನ್ನಣೆ ಗಳಿಸಿರಿವ ಒಬ್ಬ ವೈದ್ಯರು ಇನ್ನಷ್ಟು ಜನ ಸೇವೆ ಮಾಡಬೇಕು ಎಂದು ಬಯಸಿ ಕಳೆದ ಹಲವು ತಿಂಗಳುಗಳಿಂದ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಕಾರ್ಯಕರ್ತರ ಪಡೆ ಕಟ್ಟಿಕೊಂಡು ಧಾನ , ಧರ್ಮಗಳನ್ನು ಮಾಡುತ್ತ , ಬಡವರಿಗೆ ಸಹಾಯ , ಸಹಕಾರ ನೀಡುತ್ತಾ ಸಭೆ ಸ್, ಸಮಾರಂಭಗಳಲ್ಲಿ ಭಾಗವಹಿಸುತ್ತ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ಇವರಿಂದ ಕೋವಿಡ್ ಸಮಯದಲ್ಲಿ ಆರೋಗ್ಯ ಸೇವೆಯನ್ನು ಪಡೆದ 25000 ಸಾವಿರಕ್ಕೂ ಹೆಚ್ಚು ಜನರು ಚುನಾವಣೆಗ ಸ್ಪರ್ಧೆ ಮಾಡಿದರೆ ಇವರನ್ನು ಬೆಂಬಲಿಸುವ ಭರವಸೆ ನೀಡಿದ್ದು , ಇದು ಡಾ. ನಸಿಮ್ ಅವರಿಗೆ ವರದಾನವಾಗಿ ಪರಿಣಮಿಸಿದೆ. ಸಮಾಜ ಸೇವಕರಾಗಿ ಡಾ. ನಸಿಮ್ ಅವರು ಹಲವಾರು ಸಂಘಟನೆಗಳ ಜೊತೆ ಸೇರಿ ಈಗಾಗಲೇ ಹಲವಾರು ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದರ ಮೂಲಕ ಬಡ ಜನರ ಸೇವೆ ಮಾಡಿ ಅಪಾರ ಜನ ಮನ್ನಣೆ ಗಳಿಸಿದ್ದಾರೆ. ಆಮ್ ಆದ್ಮಿ ಪಾರ್ಟಿ ತಮ್ಮ ಜನ ಸೇವೆ ಮತ್ತು ಪಕ್ಷ ನಿಷ್ಠೆ ನೋಡಿ ಈ ಭಾರಿ ತನಗೆ ಭಟ್ಕಳ-ಹೊನ್ನವಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಎಂ.ಎಲ್.ಎ ಟಿಕೆಟ್ ನೀಡಿದರೆ ಗೆಲ್ಲುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.