ಹೊನ್ನಾವರ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್‌, ಧರ್ಮಸ್ಥಳ, ಹೊನ್ನಾವರ ಘಟಕ ಹಾಗೂ ಜಿಲ್ಲಾ ಜನಾಜಾಗೃತಿ ವೇದಿಕೆ, ಉತ್ತರ ಕನ್ನಡ ಇವರ ಆಶ್ರಯದಲ್ಲಿ ಹೊನ್ನಾವರದ ಎಂ.ಪಿ.ಇ ಸೊಸೈಟಿಯ, ಎಸ್. ಡಿ .ಎಂ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ ನಡೆಯಿತು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೊನ್ನಾವರ ಪಟ್ಟಣ ಪಂಚಾಯತದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ಶಿವರಾಜ ಮೇಸ್ತ ರವರು ದುಶ್ಚಟಕ್ಕೆ ದಾಸರಾಗಬೇಡಿ, ಈಗಾಗಲೇ ದುಶ್ಚಟಕ್ಕೆ ಒಳಗಾದವರ ಮಾಹಿತಿ ಇದ್ದರೆ ನೀಡಿ ಅವರನ್ನು ಸರಿಪಡಿಸಲು ಪ್ರಯತ್ನಿಸೋಣ ಎಂದು ಕರೆ ನೀಡಿದರು.

RELATED ARTICLES  ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ 5ನೇ ಸ್ಥಾನಪಡೆದ ನ್ಯೂ ಇಂಗ್ಲೀಷ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು

ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಪ್ರಾಚಾರ್ಯರಾದ ಶ್ರೀ.ಎಂ.ಎಚ್. ಭಟ್ ರವರು ಮಕ್ಕಳಾದ ನೀವು ಸಮಾಜದ ಪ್ರಭಾರಿಗಳಾಗಿದ್ದೀರಿ. ಸಮಾಜದ ಸ್ವಾಸ್ಥ್ಯ ನಿರ್ಮಿಸಲು ಸದಾ ಜಾಗೃತರಾಗಬೇಕು ಎಂದರು. ಕಾರ್ಯಕ್ರಮದಲ್ಲಿ ಶ್ರೀ ನಾಗರಾಜ ಕೆ. ಮೇಲ್ವಿಚಾರಕರು ಹೊನ್ನಾವರ ಇವರು ಪ್ರಾಸ್ತಾವಿಕ ನುಡಿಯೊಂದಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಶ್ರೀಮತಿ ರೂಪಾ ಮೇಸ್ತ, ಒಕ್ಕೂಟದ ಅಧ್ಯಕ್ಷರು ಹಾಗೂ ಶ್ರೀಮತಿ ಚಂದ್ರಾವತಿ ಸೇವಾ ಪ್ರತಿನಿಧಿ ಇವರು ಉಪಸ್ಥಿತರಿದ್ದರು. ಉಪನ್ಯಾಸಕರರಾದ ಶ್ರೀ. ವಿನಾಯಕ ಭಟ್ಟ ರವರು ಕಾರ್ಯಕ್ರಮವನ್ನು ನಿರೂಪಿಸಿದರು.

RELATED ARTICLES  'ಉದಯ ಸ್ಪೋರ್ಟ್ಸ್ ವರ್ಲ್ಡ್' ಉದ್ಘಾಟನೆ.