ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಮರಿಮನೆಯ ಸುಬ್ರಹ್ಮಣ್ಯ ಹೆಗಡೆ ಬೈಕ್ ಅಪಘಾತದಲ್ಲಿ ಕಾಲು ಮತ್ತು ಕೈ ಭಾಗಕ್ಕೆ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದರು. ಬಡ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಹವ್ಯಕ ಸೇವಾ ಪ್ರತಿಷ್ಠಾನದ ವತಿಯಿಂದ ಒಂದು ಲಕ್ಷ ಧನಸಹಾಯ ನೀಡಿ ಮಾದರೀ ಕಾರ್ಯ ಮಾಡಲಾಗಿದೆ.

ಈ ಸಂದರ್ಭದಲ್ಲಿ ಹವ್ಯಕ ಪ್ರತಿಷ್ಠಾನದ ಅಧ್ಯಕ್ಷರಾದ ಎಂ.ಜಿ.ಭಟ್ ಮಾತನಾಡಿ ಅಪಘಾತದಲ್ಲಿ ಗಾಯಗೊಂಡ ಸಮಾಜದ ಬಡ ಕುಟುಂಬಕ್ಕೆ ಆರ್ಥಿಕವಾಗಿ ನೆರವಾಗಲು ಎಲ್ಲರೂ ಸೇರಿ ಒಂದು ಲಕ್ಷ ಧನ ಸಹಾಯ ನೀಡಲಾಗಿದೆ. ಕಷ್ಟದಲ್ಲಿದ್ದಾಗ ಸೇವೆ ರೂಪದಲ್ಲಿ ಮುಂದೆ ಬಂದು ನೊಂದವರ ಬಾಳಿಗೆ ಬೆಳಕಾಗುವುದು ಪ್ರತಿಷ್ಠಾನದ ಮೂಲ ಉದ್ದೇಶವಾಗಿದೆ. ಮುಂದಿನ ದಿನದಲ್ಲಿ ಸಮಾಜದ ಬಡತನದಲ್ಲಿರುವವರನ್ನು ಗುರುತಿಸಿ ಆರ್ಥಿಕವಾಗಿ ಸಹಾಯ ಮಾಡುವ ಯೋಜನೆ ರೂಪಿಸಲಾಗಿದೆ. ಈ ಎಲ್ಲಾ ಕಾರ್ಯಕ್ಕೆ ಸಹಕಾರ ಅಗತ್ಯವಿದೆ ಎಂದರು.

RELATED ARTICLES  ಶರಾವತಿ ಪತ್ತಿನ ಸಹಕಾರಿ ಬ್ಯಾಂಕ್ ಹೊನ್ನಾವರ ಇದರ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ಶುಭಾಶಯ ಕೋರಿದ ಶ್ರೀ ಕೇಶವ ಗೌಡ


ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಆರ್.ಎನ್.ಹೆಗಡೆ, ವಿ.ಡಿ ಹೆಗಡೆ, ಭುವನ್ ಭಾಗವತ್, ಜಗದೀಶ್ ಭಟ್, ವೆಂಕಟರಮಣ ಭಟ್, ವಿ.ಎ. ಪ್ರಸನ್ನ,ಎಂ.ಆರ್. ಹೆಗಡೆ, ಎನ್.ಎಸ್. ಹೆಗಡೆ, ಶಿವರಾಮ ಹೆಗಡೆ ,ಜಿಕೆ ಹೆಗಡೆ, ದಿನೇಶ್ ಹೆಗಡೆ, ಎಲ್ ಎ ಭಟ್ಟ ಮತ್ತಿತರರು ಉಪಸ್ಥಿತರಿದ್ದರು.

RELATED ARTICLES  ಇಂದಿನ(ದಿ-13/12/2018) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.