Home Business SBI’ ಗ್ರಾಹಕರಿಗೆ ಬಿಗ್ ಶಾಕ್ ; ಖಾತೆಯಿಂದ ‘ಹಣ’ ಕಟ್

SBI’ ಗ್ರಾಹಕರಿಗೆ ಬಿಗ್ ಶಾಕ್ ; ಖಾತೆಯಿಂದ ‘ಹಣ’ ಕಟ್


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಮತ್ತೊಂದು ಶಾಕ್ ನೀಡಿದ್ದು, ಯಾವುದೇ ಕಾರಣ ನೀಡದೇ ಖಾತೆಯಿಂದ ಹಣ ಕಡಿತಗೊಳಿಸಲಾಗುತ್ತಿದೆ ಎಂದು ಬಳಕೆದಾರರು ದೂರುತ್ತಿದ್ದಾರೆ. ಹಲವು ಗ್ರಾಹಕರಿಗೆ ತಮ್ಮ ಖಾತೆಯಿಂದ 147.50 ರೂಪಾಯಿ ಕಡಿತವಾಗಿದೆ ಎಂಬ ಸಂದೇಶ ಬರುತ್ತಿದೆ. ಈ ಹಣವನ್ನ ಗ್ರಾಹಕರ ಖಾತೆಯಿಂದ ನಿರ್ವಹಣೆ ಶುಲ್ಕವಾಗಿ ಕಡಿತಗೊಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದು, ಈ ಕುರಿತು ಟ್ವೀಟ್ ಮಾಡುವ ಮೂಲಕ ಬ್ಯಾಂಕ್ ಮಾಹಿತಿ ನೀಡಿದೆ. 18ರಷ್ಟು ಜಿಎಸ್ಟಿ ಶುಲ್ಕವಾಗಿ ಈ ಹಣವನ್ನ ಬ್ಯಾಂಕ್ನಿಂದ ತೆಗೆದುಕೊಳ್ಳಲಾಗಿದೆ ಎಂದು ತೋರುತ್ತದೆ. ವಿತರಿಸಿದ ಡೆಬಿಟ್ ಕಾರ್ಡ್ಗಾಗಿ ಬ್ಯಾಂಕ್ ಗ್ರಾಹಕರಿಂದ ವರ್ಷಕ್ಕೆ ರೂ.125 ವಸೂಲಿ ಮಾಡುತ್ತಿದೆ. ಇದಕ್ಕೆ ಶೇ.18ರಷ್ಟು ಜಿಎಸ್ ಟಿ ಸೇರಿಸಿದರೆ ಈ ಮೊತ್ತ 147.50 ರೂ. ಈ ಒಟ್ಟು ಮೊತ್ತವನ್ನ ಗ್ರಾಹಕರ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಇದಲ್ಲದೇ, ಯಾವುದೇ ಖಾತೆದಾರರು ಡೆಬಿಟ್ ಕಾರ್ಡ್ ಬದಲಾಯಿಸಲು ಬಯಸಿದರೆ, ಅವರು ಬ್ಯಾಂಕ್ಗೆ 300 ರೂಪಾಯಿ ಮತ್ತು ಜಿಎಸ್ಟಿ ಶುಲ್ಕವನ್ನ ಪಾವತಿಸಬೇಕಾಗುತ್ತದೆ.

ಇತ್ತೀಚೆಗೆ ಸಾಲದ ಮೇಲಿನ ಬಡ್ಡಿ ದರವನ್ನ ಹೆಚ್ಚಿಸಿರುವುದು ಗೊತ್ತೇ ಇದೆ. ಬ್ಯಾಂಕ್ ತನ್ನ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ದರಗಳನ್ನ (MCLR) ಒಂದು ವರ್ಷಕ್ಕೆ ಹೆಚ್ಚಿಸಲು ನಿರ್ಧರಿಸಿದೆ. ಈ ಹೆಚ್ಚಳದ ನಂತ್ರ ಗೃಹ ಸಾಲ, ಕಾರು ಸಾಲ, ಶಿಕ್ಷಣ ಸಾಲ, ವೈಯಕ್ತಿಕ ಸಾಲದಂತಹ ಎಲ್ಲಾ ರೀತಿಯ ಸಾಲಗಳ ಮೇಲೆ ಹೆಚ್ಚಿನ ಬಡ್ಡಿ ದರವನ್ನ ವಿಧಿಸಲಾಗುತ್ತದೆ. ಈ ನಿರ್ಧಾರ ನೇರವಾಗಿ ಸಾಲಗಾರರ ಮೇಲೆ ಪರಿಣಾಮ ಬೀರುತ್ತದೆ.

ಬ್ಯಾಂಕ್ ಒಂದು ವರ್ಷದ ಅವಧಿಗೆ MCLR ಅನ್ನು 10 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಈ ಹಿಂದೆ ಬ್ಯಾಂಕ್ ಒಂದು ವರ್ಷದ ಸಾಲದ ಮೇಲೆ ಶೇಕಡಾ 8.30ರ ಬಡ್ಡಿದರವನ್ನ ನೀಡುತ್ತಿತ್ತು, ಈಗ ಅದು ಶೇಕಡಾ 8.40ಕ್ಕೆ ಏರಿದೆ. ಈ ಹೆಚ್ಚಳದಿಂದಾಗಿ, ಗೃಹ ಸಾಲ, ಕಾರು ಸಾಲ, ವೈಯಕ್ತಿಕ ಸಾಲ ಇತ್ಯಾದಿ ಎಲ್ಲಾ ರೀತಿಯ ಸಾಲಗಳ ಮೇಲೆ ಹೆಚ್ಚಿನ EMI ಪಾವತಿಸಬೇಕಾಗುತ್ತದೆ. ಈ ಹೆಚ್ಚಳ ಜನವರಿ 15 ರಿಂದ ಜಾರಿಗೆ ಬರಲಿದೆ.