ಭಟ್ಕಳ: ರೈಲ್ವೆ ನಿಲ್ದಾಣ ಸಮೀಪದ ನಾಗಮಾಸ್ತಿ ಹೊಳೆಯಲ್ಲಿ ಪತ್ತೆಯಾದ ಭಿಕ್ಷುಕನ ಅನಾಥ ಶವವನ್ನು ಪೊಲೀಸ್ ಸಿಬ್ಬಂದಿ ಹಾಗೂ ಸಮಾಜ ಸೇವಕ ಮಂಜು ನಾಯ್ಕ ಮುಟ್ಟಳ್ಳಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ತಾಲೂಕಿನ ಸುತ್ತಮುತ್ತ ಭಿಕ್ಷೆ ಬೇಡಿಕೊಂಡು ಜೀವನ ಸಾಗಿಸುತ್ತಿದ್ದ ಹರಿಯಾಣ ಮೂಲದ ಬಾಲಚಂದ್ರಾನಂದ ಎನ್ನುವ ಭಿಕ್ಷುಕ ಕಳೆದ ಕೆಲ ದಿನಗಳ ಹಿಂದೆಷ್ಟೇ ನಾಗಮಾಸ್ತಿ ಹೊಳೆಯಲ್ಲಿ ಬಿದ್ದು ಸಾವನ್ನಪ್ಪಿದ್ದ. ಈತನ ಮೃತದೇಹವನ್ನು ನಾಲ್ಕು ದಿನಗಳ ಸರ್ಕಾರಿ ಆಸ್ಪತ್ರೆಯಲ್ಲಿಡಲಾಗಿತ್ತು.

RELATED ARTICLES  ಕುಮಟಾ : ಲೈಟ್ ಕಂಬಕ್ಕೆ ಡಿಕ್ಕಿಯಾದ ಪಿಕಪ್ ವಾಹನ : ಏಳು ಕುರಿಗಳು ಸಾವು

ಆದರೆ ಯಾರೂ ವಾರಸುದಾರರು ಬಾರದ ಕಾರಣ ಮೃತನಿಗೆ ಮಂಜು ಮುಟ್ಟಿಳ್ಳಿ ಹಾಗೂ ಪೊಲೀಸ್ ಸಿಬ್ಬಂದಿ ಮುಟ್ಟಳ್ಳಿಯ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಎಎಸ್‌ಐ ನವೀನ ಬೋರ್ಕರ್, ಪೊಲೀಸ್ ಸಿಬ್ಬಂದಿ ಸಿದ್ದು ಕಾಂಬ್ಳೆ, ಮೂಢಭಟ್ಕಳ ಬೈಪಾಸ್ ನಿವಾಸಿ ರಾಜೇಶ ದೇವಾಡಿಗ ಇದ್ದರು.

RELATED ARTICLES  ಇಂದಿನ ನಿಮ್ಮ ದಿನ ಭವಿಷ್ಯ ಹೇಗಿದೆ? ಅದೃಷ್ಟ ಸಂಖ್ಯೆ ಯಾವುದು?