ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ದಿನನಿತ್ಯ ಬಳಕೆದಾರರ ಅನುಕೂಲಕ್ಕಾಗಿ ಒಂದಲ್ಲ ಒಂದು ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುವ ವಾಟ್ಸಾಪ್‌ ಇದೀಗ ಮತ್ತೊಂದು ಫೀಚರ್ಸ್‌ ಬಗ್ಗೆ ಮಾಹಿತಿ ನೀಡಿದೆ. ಈ ಫೀಚರ್ಸ್‌ ವಾಟ್ಸಾಪ್‌ನಲ್ಲಿ ಕಂಟ್ಯಾಕ್ಟ್‌ಗಳನ್ನು ಬ್ಲಾಕ್‌ ಮಾಡೋರಿಕೆ ಹೊಸ ಆಯ್ಕೆಗಳನ್ನು ನೀಡಲಿದೆ. ಈಗಾಗಲೇ ಹಲವು ಆಯ್ಕೆಯ ಫೀಚರ್ಸ್‌ಗಳನ್ನು ಪರಿಚಯಿಸಿರುವ ವಾಟ್ಸಾಪ್‌ ಈ ಹೊಸ ಆಯ್ಕೆಯ ಮೂಲಕ ಬಳಕೆದಾರರಿಗೆ ಗುಡ್‌ ನ್ಯೂಸ್‌ ನೀಡಿದೆ. ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಹೊಸ ಆಯ್ಕೆಗಳನ್ನು ಸೇರಿಸಲು ಮುಂದಾಗಿದೆ. ಇದರಿಂದ ಬಳಕೆದಾರರು ಯಾರನ್ನಾದರೂ ಬ್ಲಾಕ್‌ ಮಾಡಬೇಕಾದರೆ ಹೊಸ ಆಯ್ಕೆಗಳು ಲಭ್ಯವಾಗಲಿದೆ. ಪ್ರಸ್ತುತ ಲಭ್ಯವಿರುವ ಆಯ್ಕೆಗಿಂತ ಭಿನ್ನವಾದ ವಿಧಾನಗಳು ಇದರಲ್ಲಿ ದೊರೆಯುವುದರಿಂದ ಕಂಟ್ಯಾಕ್ಟ್‌ ಬ್ಲಾಕ್‌ ಮಾಡಬೇಕು ಅನ್ನೊರಿಗೆ ಇದು ಸೂಕ್ತವಾಗಲಿದೆ.

ಪ್ರಸ್ತುತ ನೀವು ವಾಟ್ಸಾಪ್‌ನಲ್ಲಿ ಯಾವುದೇ ಕಂಟ್ಯಾಕ್ಟ್‌ ಅನ್ನು ಬ್ಲಾಕ್‌ ಮಾಡಬೇಕಾದರೆ ಕಂಟ್ಯಾಕ್ಟ್‌ ಚಾಟ್‌ ತೆರೆಯಬೇಕಾಗುತ್ತದೆ. ಪರ್ಸನಲ್‌ ಚಾಟ್‌ನಲ್ಲಿ ಕಂಟ್ಯಾಕ್ಟ್‌ ನೇಮ್‌ ಅನ್ನು ಟ್ಯಾಪ್‌ ಮಾಡಿ, ನಂತರ ಕೆಳಗೆ ಸ್ಕ್ರಾಲ್‌ ಮಾಡಬೇಕಾಗುತ್ತದೆ. ಇದರಲ್ಲಿ ಬ್ಲಾಕ್‌ ಆಯ್ಕೆಯನ್ನು ಟ್ಯಾಪ್‌ ಮಾಡುವ ಮೂಲಕ ಕಂಟ್ಯಾಕ್ಟ್‌ ಅನ್ನು ಬ್ಲಾಕ್‌ ಮಾಡಬಹುದಾಗಿದೆ. ಆದರೆ ಇದೀಗ ವಾಟ್ಸಾಪ್‌ ನಿಮಗೆ ಚಾಟ್‌ ಅನ್ನು ತೆರೆಯದೆ ಡೈರೆಕ್ಟ್‌ ಆಗಿ ಕಂಟ್ಯಾಕ್ಟ್‌ ಅನ್ನು ಬ್ಲಾಕ್‌ ಮಾಡುವ ಆಯ್ಕೆ ನೀಡಲು ಮುಂದಾಗಿದೆ.

ಅದರಂತೆ ನೀವು ಚಾಟ್ ತೆರೆಯದೆಯೇ ಕಂಟ್ಯಾಕ್ಟ್‌ ಅನ್ನು ಬ್ಲಾಕ್‌ ಮಾಡಬಹುದು. ಇದಕ್ಕಾಗಿ ನೀವು ವಾಟ್ಸಾಪ್‌ ಆಯಪ್‌ ಎಂಟ್ರಿ ಪಾಯಿಂಟ್‌ ಚಾಟ್‌ ಲಿಸ್ಟ್‌ನಲ್ಲಿ ಲಭ್ಯವಾಗುವ ಕಂಟ್ಯಾಕ್ಟ್‌ ಅನ್ನು ನೇರವಾಗಿ ಬ್ಲಾಕ್‌ ಮಾಡಬಹುದಾಗಿದೆ. ಇದಲ್ಲದೆ ಅಪರಿಚಿತ ಸಂಪರ್ಕದಿಂದ ನಿಮಗೆ ಯಾವುದೇ ಸಂದೇಶ ಬಂದರೆ ಅದನ್ನು ಬ್ಲಾಕ್‌ ಮಾಡುವ ಆಯ್ಕೆಯನ್ನು ವಾಟ್ಸಾಪ್‌ ನೇರವಾಗಿ ನೀಡಲಿದೆ. ಇದರಿಂದ ನೀವು ವಾಟ್ಸಾಪ್‌ ತೆರೆಯದಿದ್ದರೂ ಸಂದೇಶದ ನೋಟಿಫಿಕೇಶನ್‌ನಲ್ಲಿಯೇ ಅದನ್ನು ಬ್ಲಾಕ್‌ ಮಾಡಬಹುದಾಗಿದೆ.

ಈ ಎರಡು ವಿಧಾನಗಳನ್ನು ನೀಡುವ ಹೊಸ ಫೀಚರ್ಸ್‌ ಇನ್ನು ಕೂಡ ಅಭಿವೃದ್ಧಿ ಹಂತದಲ್ಲಿದೆ ಎನ್ನಲಾಗಿದೆ. ಇದು ವಾಟ್ಸಾಪ್‌ ನ 2.23.2.10 ಅಪ್ಡೇಟ್‌ನಲ್ಲಿ ಬೀಟಾ ಬಳಕೆದಾರರಿಗೆ ಲಭ್ಯವಾಗಲಿದ್ದು, ನಂತರದ ದಿನಗಳಲ್ಲಿ ಎಲ್ಲರಿಗೂ ದೊರೆಯಲಿದೆ. ಇದು ಐಒಎಸ್‌ ಅಪ್ಲಿಕೇಶನ್‌ನಲ್ಲಿ ಲಭ್ಯವಾಗುವ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಅಂತಿಮವಾಗಿ ಬಿಡುಗಡೆಯಾದಗ ಈ ಫೀಚರ್ಸ್‌ ಐಒಎಸ್‌ ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಗಳು ಇಲ್ಲ ಎಂದು ಕೂಡ ವರದಿಯಾಗಿದೆ.

ಇನ್ನು ವಾಟ್ಸಾಪ್‌ ಇತ್ತೀಚಿನ ದಿನಗಳಲ್ಲಿ ಬಳಕೆದಾರರಿಗೆ ಹಲವು ಕಾರ್ಯಗಳನ್ನು ಸುಲಭವಾಗಿ ನಿಭಾಯಿಸಬಲ್ಲ ಫೀಚರ್ಸ್‌ಗಳನ್ನು ಪರಿಚಯಿಸುತ್ತಿದೆ. ಈ ಮೂಲಕ ಬಳಕೆದಾರರ ಅನುಭವವನ್ನು ಇನ್ನಷ್ಟು ಸುಧಾರಿಸುವ ಪ್ರಯತ್ನ ನಡೆಸುತ್ತಿದೆ. ಅಲ್ಲದೆ ಇಂದಿನ ಜಮಾನದಲ್ಲಿ ಪೈಪೋಟಿ ನೀಡುತ್ತಿರುವ ಇತರೆ ಮೆಸೇಜಿಂಗ್‌ ಅಪ್ಲಿಕೇಶನ್‌ಗಳಿಗೆ ತನ್ನ ಬಳಿಯೂ ಸುಳಿಯದಂತೆ ಮಾಡಲು ಅನೇಕ ಹೊಸ ಪ್ರಯೋಗಗಳನ್ನು ಕೂಡ ನಡೆಸುತ್ತಿದೆ. ಇದರ ಪರಿಣಾಮವೇ ವಾಟ್ಸಾಪ್‌ ಪ್ಲಾಟ್‌ಫಾರ್ಮ್ ಸೇರುತ್ತಿರುವ ಹೊಸ ಫೀಚರ್ಸ್‌ಗಳು ಎನ್ನಬಹುದಾಗಿದೆ.

Source : Gizbot