ಕಾರವಾರ: ಕಾಳಿ ಸೇರಿದಂತೆ ರಾಜ್ಯದ ಪ್ರಮುಖ ನದಿ ನೀರನ್ನು ನೇರ ಬಳಸದಂತೆ ಮಾಲಿನ್ಯ ನಿಯಂತ್ರಣ ಮಂಡಳಿ ಎಚ್ಚರಿಕೆ ನೀಡಿದೆ. ಈ ಸಂಬಂಧ ಮಾಲಿನ್ಯ ನಿಯಂತ್ರಣ ಮಂಡಳಿಯೂ ಅಧ್ಯಯನ ವರದಿ ಪ್ರಕಟಿಸಿದೆ. ರಾಜ್ಯದ ಜೀವನಾಡಿ ನದಿಗಳು ಎಂದೇ ಪರಿಗಣಿಸಿರುವ ಕೃಷ್ಣಾ, ಕಾವೇರಿ, ತುಂಗಾ, ಭದ್ರಾ, ಕಬಿನಿ, ಶಿಂಷಾ, ಮಲಪ್ರಭಾ, ಘಟಪ್ರಭಾ, ಭೀಮಾ, ಹೇಮಾವತಿ, ನೇತ್ರಾವತಿ, ಯಗಚಿ, ಕಾರಂಜಾ ಸೇರಿದಂತೆ ಯಾವುದೇ ನದಿಗಳ ನೀರನ್ನು ಸಂಸ್ಕರಿಸದೇ ಕುಡಿಯಲು ಸಾಧ್ಯವಿರದಷ್ಟು ಕುಲುಷಿತವಾಗಿವೆ. ಕೆಲವು ನದಿಗಳ ನೀರು ಸ್ನಾನಕ್ಕೆ ಬಳಸುವುದಕ್ಕೂ ಯೋಗ್ಯವಾಗಿಲ್ಲ ಎಂದು ಹೇಳಲಾಗಿದೆ.

RELATED ARTICLES  ನಾವು ಅಧಿಕಾರಕ್ಕೆ ಬಂದ್ರೆ ತಕ್ಷಣ ಕೆಪಿಎಂಇ ಕಾಯ್ದೆ ರದ್ದು; ಯಡಿಯೂರಪ್ಪ

ರಾಷ್ಟ್ರೀಯ ನೀರಿನ ಗುಣಮಟ್ಟ ಯೋಜನೆಯಡಿ ನದಿ ಮತ್ತು ಕೆರೆಗಳ ನೀರಿನ ಗುಣಮಟ್ಟದ 2022ರ ಏಪ್ರಿಲ್‌ನಿಂದ ನವೆಂಬರ್‌ವರೆಗಿನ ವರದಿಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಿದೆ. ರಾಜ್ಯದ 17 ನದಿಗಳ ಹರಿವಿನಲ್ಲಿ ವಿವಿಧ ಜಿಲ್ಲೆಗಳಲ್ಲಿ 103 ತಪಾಸಣೆ ಕೇಂದ್ರಗಳನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಾಪಿಸಿದ್ದು, ಈ ಮೂಲಕ ನೀರನ್ನು ಸಂಗ್ರಹಿಸಿ ನೀರಿನ ಗುಣಮಟ್ಟವನ್ನು ಪರಿಶೀಲಿಸಲಾಗುತ್ತದೆ. ಈ ರೀತಿ ಪರಿಶೀಲನೆ ನಡೆಸಿ ನೀಡಿದ ವರದಿಯಲ್ಲಿ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದೆ.

RELATED ARTICLES  ಶ್ರೀ ರಾಜೇಶ ಇಲೆವೆನ್ ಆಶ್ರಯದಲ್ಲಿ ನಡೆಯಿತು ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿ.