ಕುಮಟಾ : ಯಕ್ಷಗಾನದ ಕಲೆಯ ಪ್ರಖ್ಯಾತಿಗಾಗಿ ತೆರೆಯ ಮರೆಯಲ್ಲಿ ಸೇವೆ ಸಲ್ಲಿಸಿದ ವಸ್ತ್ರಾಂಲಕಾರ ಪ್ರಾವೀಣ್ಯತೆ ಹೊಂದಿದ್ದ ಮಾದೇವ ಜಟ್ಟಪ್ಪ ನಾಯ್ಕ ಬಗ್ಗೋಣ ಕೊನೆಯುಸಿರೆಳೆದಿದ್ದಾರೆ. ಇವರು  ಚೌಕಿ ಮನೆಯಲ್ಲಿ ವಸ್ತ್ರಾಂಲಕಾರ ಸಹಾಯಕರಾಗಿ ತನ್ನ ಕಲಾಸೇವೆ ಪ್ರಾರಂಭಿಸಿ , ಇವರು ಕುಮಟಾ ಉತ್ತಮ ನಾಯ್ಕರ ಬಯಲಾಟ ಮೇಳ, ನಂತರ ಕುಮಟಾ ಗೋವಿಂದ ನಾಯ್ಕರ ಮೇಳ, ಶಿರಸಿ ಮೇಳ,  ಬಳಿಕ ಪೆರ್ಡೂರು ಮೇಳ ಹೀಗೆ 45 ವರ್ಷಗಳಿಂದ ಕಲಾವಿದರಿಗೆ ವೇಷ ಭೂಷಣ ಕಟ್ಟುವ ಕಲಸ ಮಾಡುತ್ತಾ  ಕಲಾವಿದರ ಜೊತೆಗೆ ಮುಂಬಯಿ, ಬೆಂಗಳೂರು, ಶಿವಮೊಗ್ಗ ಮುಂತಾದ ಕಡೆಗಳಿಗೆ ಮೇಳದ ಕಲಾವಿದರಿಗೆ ವೇಷಭೂಷಣ ಕಟ್ಟುವ ಕೆಲಸ ಮಾಡಿದ್ದರು. ಇವರು ಕಳೆದ ನಾಲ್ಕೂ ತಿಂಗಳಿನಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ನಿನ್ನೆ ದಿನಾಂಕ 28-01-2023 ಶನಿವಾರ ಮಧ್ಯಾಹ್ನ 1-30 ಕ್ಕೆ  ನಿಧನರಾಗಿದ್ದಾರೆ ಇವರು ಪತ್ನಿ ಸೇರಿದಂತೆ ಅಪಾರ ಭಂದುಗಳನ್ನು ಅಗಲಿದ್ದಾರೆ.

RELATED ARTICLES  ನಕಲಿ ದಾಖಲೆ ನೀಡಿ ನೌಕಾನೆಲೆಗೆ ನುಗ್ಗಲು ಯತ್ನಿಸಿದಾತನ ಬಂಧನ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಗ್ಗೋಣ ಬಡ ಕುಟುಂಬದಲ್ಲಿ ಶ್ರಿಮತಿ ಕನ್ನೆ ಮತ್ತು ಜಟ್ಟಪ್ಪ ದಂಪತಿಯ ಹಿರಿಯ  ಮಗನಾಗಿ 15 ಮೇ 1945 ರಂದು ಜನಿಸಿದ ಇವರು  2019 ರ ದಿವಂಗತ  ದುರ್ಗಾದಾಸ ಗಂಗೊಳ್ಳಿ ಪ್ರಶಸ್ತಿ ಪಡೆದು ಕೊಂಡಿದ್ದರು. 

RELATED ARTICLES  "ಹಣತೆ ಬೆಳಗಿದ ನಮ್ಮೆಲ್ಲ ಆಲೋಚನೆ ಬೆಳಕಿನ ಸುತ್ತವೇ ಇದೆ’‘ಹಣತೆ ಬೆಳಕಿನಲ್ಲಿ ದೀಪಾವಳಿ ಕವಿಗೋಷ್ಠಿ’ ಉದ್ಘಾಟಿಸಿದ ಗೋವಿಂದ ಹೆಗಡೆ