ಹಣೆಗೆ ಕುಂಕುಮ ಹಚ್ಚುವುದು, ಗಂಡಸರು ತಿಲಕ ಇಡುವುದು ಸಂಪ್ರದಾಯ ಮಾತ್ರವಲ್ಲ. ಅದೊಂದು ನಮ್ಮ ಪೂರ್ವಿಕರ ಸೈನ್ಸ್ ಕೂಡ.
ಕುಂಕುಮವನ್ನು ಒಣಗಿದ ಅರಿಶಿನದಿಂದ ಮಾಡಲಾಗುತ್ತದೆ. ಇದಕ್ಕೆ ಹೆಚ್ಚು ಕೆಂಪು ಬಣ್ಣ ನೀಡುವುದು ನಿಂಬೆ ಹಣ್ಣು. (ಸಿಟ್ರಿಕ್ ಆಸಿಡ್ ಹಳದಿ ಬಣ್ಣದ ಮೇಲೆ ಬಿದ್ದಾಗ ಅದು ಕೆಂಪು ಬಣ್ಣಕ್ಕೆ ತಿರುಗುತ್ತದೆ)
ಹಣೆ ಮೇಲೆ ಕುಂಕುಮ ಧರಿಸಿದರೆ ಅದರಿಂದ ದೇಹದ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎಂಬುದು ನಮ್ಮ ಪೂರ್ವಿಕರ ವಿಜ್ಞಾನ.
ಕುಂಕುಮವನ್ನು ಹಚ್ಚಿಕೊಳ್ಳಲು ಹುಬ್ಬುಗಳ ನಡುವಿನ ಜಾಗವನ್ನು ಒತ್ಕೊಳೋದ್ರಿಂದ ದೇಹದಲ್ಲಿ ಉಂಟಾಗುವ ಅನೇಕ ಸಕಾರಾತ್ಮಕ ಪರಿಣಾಮಗಳನ್ನು ಪೂರ್ವಿಕರು ಕಂಡುಕೊಂಡಿದ್ದರು. ಈಗ ಇದನ್ನೇ ಮಸಾಜ್ ಪಾರ್ಲರ್ ಗಳಲ್ಲಿ ಮಾಡೋದು.
೧.ಕೆಂಪು ಬಣ್ಣ ಉತ್ತೇಜಕ ಗುಣವನ್ನು ಹೊಂದಿದೆ. ಇದನ್ನು ಹಣೆ ಮೇಲೆ ಇರಿಸುವುದರಿಂದ ಪಿಟ್ಯುಟರಿ ಗ್ರಂಥಿಯನ್ನು ಉತ್ತೇಜಿಸಿ ಅದರ ಹಾರ್ಮೋನ್ ನಿಯಮಿತವಾಗಿ ಸ್ರವಿಸುವಂತೆ ಮಾಡುತ್ತದೆ.
೨.ಇಲ್ಲಿಗೆ ಕುಂಕುಮ ಹಚ್ಚುವುದರಿಂದ ಗ್ರಹಿಕೆ ಹೆಚ್ಚಾಗುತ್ತದೆ.
೩.ಕುಂಕುಮ ಹಚ್ಚುವುದರಿಂದ ಫೇಶಿಯಲ್ ಮಸಲ್ಸ್ ಸ್ಟ್ರಾಂಗ್ ಆಗುತ್ತದೆ. ಹಾಗೂ ಬೇಗನೆ ವ್ರಿಂಕಲ್ (ಸುಕ್ಕು) ಉಂಟಾಗುವುದನ್ನು ತಡೆಯುತ್ತದೆ.
೪.ತಲೆನೋವು ಕಡಿಮೆ ಮಾಡಲು ಸಹ ಕುಂಕುಮ ಸಹಾಯ ಮಾಡುತ್ತದೆ.
೫.ಮೆದುಳಲ್ಲಿರುವ ಲಿಂಫಾಟಿಕ್ ವ್ಯವಸ್ಥೆಯ ಮೇಲೆ ಪ್ರಭಾವ ಬೀರುವ ಅಮಿಗ್ದಲ ಅನ್ನುವ ಭಾಗಕ್ಕೆ ಈ ಅಭ್ಯಾಸದಿಂದ ಚೇತನ ಶಕ್ತಿ ಬರುತ್ತೆ. ಅದ್ದರಿಂದ ನರಮಂಡಲದಲ್ಲಿ ಆಗುವ ಒತ್ತಡದ ಏರುಪೇರುಗಳು ಕಡಿಮೆಯಾಗುತ್ತೆ.
ನೆನಪಿರಲಿ ನಮ್ಮ ಪೂರ್ವಿಕರು ಯಾವುದೇ ಅಭ್ಯಾಸವನ್ನು ಅರ್ಥವಿರದೇ ರೂಢಿಸಿಕೊಂಡಿಲ್ಲ. ಅದರಲ್ಲೊಂದು ಸೈನ್ಸ್ ಇದೆ. ಇದೇ ಕಾರಣಕ್ಕೆ ನಮ್ಮ ಹಿರಿಯರು ಬಹಳ ವಯಸ್ಸಾದರೂ ಮುಖ ಸುಕ್ಕು ಬಾರದಂತೆ ಕಾಪಾಡಿಕೊಂಡು, ಕಾಂತಿಯುತವಾಗಿ ಕಂಗೊಳಿಸುತ್ತಿದ್ದರು. ಬೇಕಿದ್ದರೆ ಮನೆಯ ಹಿರಿಯ ಅಜ್ಜಿಯರನ್ನು ನೋಡಿ ಈಗಲೂ ಅವರ ಮುಖ ಎಷ್ಟು ಕಾಂತಿಯುತವಾಗಿದೆ ಎಂದು.
ನಮ್ ಕರ್ಮಕ್ಕೆ ಈಗಿನ ಹೆಣ್ಣುಮಕ್ಕಳು ಸ್ಟಿಕ್ಕರ್ ಚುಕ್ಕಿಗಳನ್ನು ಅಂಟಿಸಿಕೊಂಡಿದ್ದಾರೆ. ೪೦ ವಯಸ್ಸಿಗೆ ಮುಖ ಸುಕ್ಕಾಗಿ ವಯಸ್ಸಾದವರಂತೆ ಕಾಣಲು ಶುರುವಾಗಿದೆ. ಬಿಡಿ ಸ್ಟಿಕ್ಕರ್ ಚುಕ್ಕಿ, ಬಳಸಿ ಕುಂಕುಮ.