ಅಪಾಯಕಾರಿ, ಬಳಕೆದಾರರನ್ನು ವಂಚಿಸುವ, ಮೋಸದ ಬಲೆಗೆ ಬೀಳಿಸುವ ಆಪ್‌ಗಳ ಮೇಲೆ ಗೂಗಲ್ ಪ್ರತಿ ಬಾರಿ ಸವಾರಿ ಮಾಡಿ ಬ್ಯಾನ್ ಮಾಡುತ್ತದೆ. ಇದೀಗ ಇದೇ ರೀತಿ ಬಳಕೆದಾರರಿಗೆ ಅಪಾಯ ತಂದೊಡ್ಡಲ್ಲ ಬಲ 12 ಜನಪ್ರಿಯ ಆಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಗೂಗಲ್ ನಿಷೇಧಿಸಿದೆ. ಈ ಆಪ್‌ಗಳು ಮಿಲಿಯನ್ ಬಳಕೆದಾರರು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಆದರೆ ಈ ಜನಪ್ರಿಯ ಆಪ್‌ಗಳು ಹಲವು ಭರವಸೆ ನೀಡಿ ಬಳಕೆದಾರರನ್ನು ಮೋಸದ ಜಾಲಕ್ಕೆ ಬೀಳಿಸುತ್ತಿದೆ. ಈ ಆಪ್‌ಗಳಲ್ಲಿನ ಲೋಪ ಪತ್ತೆ ಹಚ್ಚಿದ ಗೂಗಲ್ 12 ಆಪ್‌ಗಳನ್ನು ಪ್ಲೋ ಸ್ಟೋರ್‌ನಿಂದ ತೆಗೆದು ಹಾಕಿದೆ. ಬಹುತೇಕ ಗೇಮಿಂಗ್ ಹಾಗೂ ಫಿಟ್ನೆಸ್ ಆಯಪ್‌ಗಳಾಗಿದೆ.
ಗೋಲ್ಡನ್ ಹಂಟ್, ರಿಫ್ಲೆಕ್ಟರ್, ಸೆವೆನ್ ಗೋಲ್ಡನ್ ವೂಲ್ಫ್ ಬ್ಲಾಕ್‌ಜಾಕ್, ಅನ್‌ಲಿಮಿಟೆಡ್ ಸ್ಕೋರ್, ಬಿಗ್ ಡಿಸಿಶನ್, ಜೆವೆಲ್ ಸೀ, ಲಕ್ಸ್ ಫ್ರೂಟ್ಸ್ ಗೇಮ್, ಲಕ್ಕಿ ಕ್ಲವರ್, ಕಿಂಗ್ ಬ್ಲಿಡ್ಜ್, ಲಕ್ಕಿ ಸ್ಟೆಪ್ಸ್ ಹಾಗೂ ವಾಕಿಂಗ್ ಜಾಯ್ ಆಯಪ್‌ಗಳನ್ನು ಗೂಗಲ್ ನಿಷೇಧಿಸಿದೆ. ಈಗಾಗಲೇ ಈ ಆಯಪ್‌ಗಳನ್ನು ಪ್ಲೇ ಸ್ಟೋರ್‌ನಿಂದ ಗೂಗಲ್ ತೆಗೆದುಹಾಕಿದೆ.
ಬಳಕೆದಾರರು ಫಿಟ್ನೆಸ್ ಕುರಿತು ಆಪ್‌ಗಳನ್ನು ಬಳಸುವಾಗ ಹಲವು ಭರವಸೆಗಳನ್ನು ನೀಡಿದೆ. ಇದರ ಜೊತೆಗೆ ಬಳಕೆದಾರರಿಗೆ ಹಲವು ಚಟುವಟಿಕೆಗಳನ್ನು ನೀಡಿ ಕ್ಯಾಶ್ ರಿವಾರ್ಡ್, ರಿವಾರ್ಡ್ ಪಾಯಿಂಟ್ಸ್ ಹೆಸರಿನಲ್ಲಿ ಬಳಕೆದಾರರಿಗೆ ವಂಚಿಸಲಾಗಿದೆ. ರಿವಾರ್ಡ್ ಬಳಕೆ ಮಾಡುವ ವೇಳೆ ಬಳಕೆದಾರರನ್ನು ಬ್ಲಾಕ್ ಮಾಡುವ ಅಥವಾ ಇತರ ವೆಬ್‌ಸೈಟ್‌ಗೆ ಕೊಂಡೊಯ್ಯವ ಆಯಪ್‌ಗಳು ಬಳಕೆದಾರರಿಗೆ ಅಪಾಯ ತಂದೊಡ್ಡಲಿದೆ ಎಂದು ಗೂಗಲ್ ಎಚ್ಚರಿಸಿದೆ. ಹೀಗಾಗಿ ಈಗಾಗಲೇ ಡೌನ್ಲೋಡ್ ಮಾಡಿಕೊಂಡಿರುವ ಬಳಕೆದಾರರು ತಕ್ಷಣೇ ಈ ಆಯಪ್ ಡಿಲೀಟ್ ಮಾಡಲು ಸೂಚನೆ ನೀಡಿದೆ.
ಈ ಆಯಪ್ ಪೈಕಿ ಕೆಲ ಆಯಪ್‌ಗಳು ಬಳಕೆದಾರರನ್ನು ಇತರ ವೆಬ್‌ಸೈಟ್, ಇತರ ಮಾಲ್‌ವೇರ್ ಡೌನ್ಲೋಡ್ ಮಾಡಿಸುತ್ತಿದೆ. ಇದರಿಂದ ವಂಚಕ ಆಪ್‌ಗಳು ಬಳಕೆದಾರರ ಫೋನ್ ಮೂಲಕ ವೈಯುಕ್ತಿಕ ಮಾಹಿತಿ ಕದಿಯಲಿದೆ. ಇಷ್ಟೇ ಅಲ್ಲ ಬಳಕೆದಾರಿಗೆ ಅತೀವ ಅಪಾಯ ತಂದೊಡ್ಡಲಿದೆ. ಹೀಗಾಗಿ ನಿಷೇಧಿಸಿರುವ ಆಪ್‌ಗಳ ಬಳಕೆ ನಿಲ್ಲಿಸಿ ಡಿಲೀಟ್ ಮಾಡಿ ಎಂದು ಗೂಗಲ್ ಸೂಚಿಸಿದೆ.
ಆ ಯಂಡ್ರಾಯ್ಡ್ ಮೊಬೈಲ್‌ಗಳಲ್ಲಿ ಬೇರೆ ಸಚ್‌ರ್ ಇಂಜಿನ್‌ಗೆ ಅವಕಾಶ: ಗೂಗಲ್
ಭಾರತದಲ್ಲಿ ಆಯಂಡ್ರಾಯ್ಡ್ ಆಧರಿತ ಸ್ಮಾರ್ಚ್‌ಫೋನ್ ಪೈಕಿ ಶೇ.97ರಷ್ಟುಮೊಬೈಲ್‌ಗಳಲ್ಲಿ ತನ್ನದೇ ಸಚ್‌ರ್ ಎಂಜಿನ್ ಕಡ್ಡಾಯವಾಗಿ ಅಳವಡಿಸುವ ಮೂಲಕ ಪಾರಮ್ಯ ಮೆರೆಯುತ್ತಿದ್ದ ಗೂಗಲ್, ಕೊನೆಗೂ ಈ ಪದ್ಧತಿ ಕೈಬಿಡಲು ನಿರ್ಧರಿಸಿದೆ. ಸ್ಮಾರ್ಚ್‌ಫೋನ್‌ಗಳಲ್ಲಿ ತನ್ನದೇ ಸಚ್‌ರ್ ಎಂಜಿನ್ ಮತ್ತು ಕಡ್ಡಾಯ ಆಯಪ್‌ಗಳ ಬಳಕೆ ಮೂಲಕ ಗೂಗಲ್ ಸಂಸ್ಥೆ ತನ್ನ ಪಾರಮ್ಯವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಭಾರತೀಯ ಸ್ಪರ್ಧಾತ್ಮಕ ಆಯೋಗ ಗೂಗಲ್‌ಗೆ 2000 ಕೋಟಿ ರು.ಗೂ ಹೆಚ್ಚಿನ ದಂಡ ವಿಧಿಸಿತ್ತು. ಇದಕ್ಕೆ ತಡೆ ನೀಡಲು ಸುಪ್ರೀಂಕೋರ್ಚ್ ನಿರಾಕರಿಸಿದ ಬೆನ್ನಲ್ಲೇ ಗೂಗಲ್ ಈ ನಿರ್ಧಾರ ಪ್ರಕಟಿಸಿದೆ.