ಯಲ್ಲಾಪುರ : ಮನೆಯ ಮುಂದೆ ನಿಲ್ಲಿಸಿಟ್ಟ ಸ್ಕೂಟಿ ಕಳುವಾದ ಘಟನೆ ಯಲ್ಲಾಪುರ ಪಟ್ಟಣದ ಉದ್ಯಮನಗರದಲ್ಲಿ ನಡೆದಿದೆ. ಚಾಲಕ ವೃತ್ತಿಯಲ್ಲಿರುವ ಉದ್ಯಮನಗರದ ನಾಗರಾಜ ನಾರಾಯಣ ನಾಯ್ಕ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತಮ್ಮ ಮನೆಯ ಮುಂದಿನ ಕಿರಾಣಿ ಅಂಗಡಿಯ ಪಕ್ಕದಲ್ಲಿ ರಾತ್ರಿ ನಿಲ್ಲಿಸಿಟ್ಟ ಇವರ ಕಪ್ಪು-ಹಳದಿ ಬಣ್ಣದ, ೪೦ ಸಾವಿರ ರೂ ಮೌಲ್ಯದ ಟಿ.ವಿ.ಎಸ್.ಎನ್‌ಟಾರ್ಕ.ಸ್ಕೂಟಿ ಕಳುವು ಮಾಡಲಾಗಿದೆ ಎಂದು ದೂರು ದಾಖಲಾಗಿದೆ.

RELATED ARTICLES  ಗಣಪಂಗೇ ಪತ್ರ ಬರೆದ ಭೂಪ..! ಆತನ ನಿವೇದನೆಯ ರೀತಿ ಸಖತ್ ವೈರಲ್..!