ಕುಮಟಾ : ಸ್ವಾತಂತ್ರ್ಯ ದೊರೆತ ಮೇಲೆ ನಮ್ಮ ಯುವ ಸಮೂಹಗಳು ತಮ್ಮ ಧ್ಯೇಯ ಮರೆತಾಗ ಪ್ರಬುದ್ಧ ವ್ಯಕ್ತಿಗಳು ಯುವಕರಲ್ಲಿ ಸಾಮಾಜಿಕ ಕಳಕಳಿಯನ್ನು ತುಂಬುವ ಉದ್ದೇಶದಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತ ಹುಟ್ಟುಹಾಕಿದ್ರು ಎಂದು ಆರ್.ಎಸ್.ಎಸ್ ಜಿಲ್ಲಾ ಸಂಘ ಚಾಲಕರಾದ ಹನುಮಂತ ಶಾನಭಾಗ ಹೇಳಿದರು. ಅವರು ಕುಮಟಾದ ನಾದಶ್ರೀ ಕಲಾ ಕೇಂದ್ರದಲ್ಲಿ ಹಮ್ಮಿಕೊಳ್ಳಲಾದ ಎ.ಬಿ.ವಿ.ಪಿಯ ವಿದ್ಯಾರ್ಥಿಗಳಿಗೆ ಅಭ್ಯಾಸವರ್ಗ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಎ.ಬಿ.ವಿ.ಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಸಿದ್ದು ಮಧರಕಂಡಿ.ನಗರ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ, ತಾಲೂಕಾ ಸಂಘ ಸಂಚಾಲಕ ಸಂದೇಶ ನಾಯ್ಕ ಮತ್ತು ವಿದ್ಯಾರ್ಥಿನಿ ಪ್ರಮುಖರು ಉಪಸ್ಥಿತರಿದ್ದರು..