ಮುಂಡಗೋಡ: ಗಾಂಜಾವನ್ನು ಸ್ಕೂಟಿಯಲ್ಲಿ ಸಾಗಿಸುತ್ತಿದ್ದಾಗ ಮುಂಡಗೋಡ ಪೋಲಿಸರು ದಾಳಿ ನಡೆಸಿ, ಗಾಂಜಾ ಸಮೇತ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹರಮನಕೇರಿ ನಿವಾಸಿ, ಮಹ್ಮದ ಫಾರೂಕ್ ನಜೀರ ಅಹಮದ ಬಂಧಿತ ಆರೋಪಿಯಾಗಿದ್ದಾನೆ ಎನ್ನಲಾಗಿದೆ.
ಮುಂಡಗೋಡ ತಾಲೂಕಿನ ಮಳಗಿ ಸಮೀಪ ಆರೋಪಿಯನ್ನು ಬಂಧಿಸಲಾಗಿದ್ದು ಬಂಧಿತ ಆರೋಪಿಯಿಂದ ಸುಮಾರು 40 ಸಾವಿರ ರೂಪಾಯಿ ಮೌಲ್ಯದ 500 ಗ್ರಾಂ.ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಸಾಗರದಿಂದ ದಾಸನಕೊಪ್ಪ ಮಾರ್ಗವಾಗಿ ತಾಲೂಕಿನ ಮಳಗಿಯತ್ತ ಬರುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಈ ದಾಳಿ ನಡೆಸಲಾಗಿದೆ. ಗಾಂಜಾ ಸಾಗಿಸಲು ಬಳಸಿದ್ದ ಬೈಕ್ ಹಾಗೂ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ದಾಳಿಯಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ ಮಾರ್ಗದರ್ಶನ ದಲ್ಲಿ ಪಿಎಸ್‌ಐ ಯಲ್ಲಾಲಿಂಗ ಕುನ್ನೂರ ಹಾಗೂ ಪಿಎಸ್‌ಐ ಎನ್. ಡಿ. ಜಕ್ಕಣ್ಣವರ ಮತ್ತು ಸಿಬ್ಬಂದಿಗಳಾದ ಕೋಟೇಶ, ಅಣ್ಣಪ್ಪ ಪಾಲ್ಗೊಂಡಿದ್ದರು ಎಂದು ವರದಿಯಾಗಿದೆ.