ಶಿರಸಿ: ನಮ್ ನಾಣಿ ಮದ್ವ ಪ್ರಸಂಗ ಇದೆ ಏಪ್ರಿಲ್ 7 ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಚಿತ್ರ ಶುದ್ಧ ಹಳ್ಳಿಯ ಪ್ರತಿಭೆಗಳ ಅನಾವರಣ ಎನ್ನಲಾಗ್ತಿದೆ. ಬಹು ನಿರೀಕ್ಷಿತ ನಮ್ ನಾಣಿ ಮದ್ವ ಪ್ರಸಂಗ ಸಿನೆಮಾದ ತಂಗಿ ನಿಂಗೆ ಎಂಥಕ್ ಬ್ಯಾಡ ಹಳೀಲಿ ಇಪ್ಪಂವ ಹಾಡು ಪ್ರಪಂಚದಾದ್ಯಂತ ಹಿಟ್ ಆಗಿದೆ. ಶುದ್ಧ ಹವ್ಯಕ ಭಾಷೆಯಲ್ಲಿರುವ ಈ ಹಾಡು ದೇಶ ವಿದೇಶಗಳಲ್ಲಿ ಹವ್ಯಕೇತರರನ್ನೂ ಆಕರ್ಷಿಸುತ್ತಿರುವುದು ನಿಜಕ್ಕೂ ಆಶ್ಚರ್ಯಕರ ಸಂಗತಿ. ಈಗಾಗಲೇ ಇಂಗ್ಲೆಂಡ್ ಆಸ್ಟ್ರೇಲಿಯಾ ಬಲೇರಿಯಾ ಮುಂತಾದ ಕಡೆ ಬಿಳಿಯರು ಈ ಹಾಡಿಗೆ ಕುಣಿದು ವಿಡಿಯೋ ಬಿಡುತ್ತಿದ್ದಾರೆ. ಯೂಟ್ಯೂಬ್‌ನಲ್ಲಿ ಮಿಲಿಯನ್‌ಗಟ್ಟಲೆ ಜನ ವೀಕ್ಷಿಸಿರುವ
ಈ ಹಾಡಿನ ಯಶಸ್ಸು ನಿರ್ದೇಶಕ ಹೇಮಂತ್ ಹೆಗ್ಡೆ ಚಿತ್ರತಂಡಕ್ಕೆ ಖುಷಿ ತಂದಿದೆ.

RELATED ARTICLES  ಅಪ್ಪ ಸತ್ತ ಜಾಡು