ಶಿರಸಿ : ಬಿಜೆಪಿಯ 2ನೇ ಅಭ್ಯರ್ಥಿಗಳ ಲಿಸ್ಟ್‌ ಬಿಡುಗಡೆ ಮಾಡುತ್ತಿದ್ದಂತೆ ಪಕ್ಷಕ್ಕೆ ಮತ್ತೊಂದು ಶಾಕ್‌ ಎದುರಾಗಿದೆ. ಬಿಜೆಪಿಯ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಜೆಪಿಗೆ ರಾಜೀನಾಮೆ ನೀಡಿ ಅವರು ಜೆಡಿಎಸ್‌ಗೆ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂದೂ ತಿಳಿದುಬಂದಿದೆ. ಹಾಗೆ, ಪಕ್ಷಕ್ಕೆ ಗುಡ್‌ಬೈ ಹೇಳುತ್ತಿದ್ದಂತೆ ಬಿಜೆಪಿ ವಿರುದ್ಧ ಸಮರವನ್ನೂ ಸಾರಿದ್ದಾರೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ವಿರುದ್ಧ ಮೂಡಿಗೆರೆ ಮೀಸಲು ಕ್ಷೇತ್ರದ ಶಾಸಕ ಎಂ.ಪಿ. ಕುಮಾರಸ್ವಾಮಿ ಬಿಜೆಪಿಗೆ ಬಾಗಿಲು ಹಾಕಿಸುವವರೆಗೂ ಸಿ.ಟಿ. ರವಿ ಬಿಡಲ್ಲ ಎಂದಿದ್ದಾರೆ. ಅಲ್ಲದೆ, ತನಗೆ ಟಿಕೆಟ್‌ ಸಿಗದಿರಲು ಸಹ ಅವರೇ ಕಾರಣ ಎಂದೂ ಆಕ್ರೋಶ ಹೊರಹಾಕಿದ್ದಾರೆ.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ರಾಜ್ಯದಲ್ಲಿ ಲೀಡರ್ ರೇ ಇಲ್ಲ. ಪ್ರಧಾನಿ ಮೋದಿ, ಅಮಿತ್ ಶಾ ಅವರೇ ಬಂದು ಗೊಂದಲ ಬಗೆ ಹರಿಸುವ ಸ್ಥಿತಿ ಬಂದಿದೆ. ಇಲ್ಲಿ ನಾಯಕರೇ ಇಲ್ಲ ಎಂದು ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ,ಒಳ್ಳೆತನಕ್ಕೆ ಜಯನೂ ಆಗುತ್ತದೆ. ಬಿಜೆಪಿಯಲ್ಲಿ ನನಗಿಷ್ಟು ಹಂಚಿಕೊಂಡಾಗ ಮಾನದಂಡ ಎಲ್ಲಿ ಬರುತ್ತದೆ. ಯಡಿಯೂರಪ್ಪ ಅವರು ಮೊಬೈಲ್​ ಸ್ವಿಚ್​ ಆಫ್ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 50-70 ಸ್ಥಾನ ಬಿಜೆಪಿದು ದಾಟಲ್ಲ ಎಂದರು.

RELATED ARTICLES  ಶ್ರೀ ಶ್ರೀಧರ ಗುರುಗಳ ಪುಣ್ಯ ಕ್ಷೇತ್ರ ವರದಪುರದ ಮಹಿಮೆ.

ನನಗೆ ಟಿಕೆಟ್ ತಪ್ಪಲು ಸಿ.ಟಿ.ರವಿ ಅವರು ಕಾರಣ. ಹುಚ್ಚನಾಯಿ ತರ ಸೀಟಿ ಹೊಡೆಸಿ ಓಡಿಸಿದಂತೆ ಅಟ್ಟಿಸಿಕೊಂಡು ಓಡಿಸಿದರು‌ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷೇತರ ಸ್ಪರ್ಧೆ ಮಾಡುವುದಿಲ್ಲ. ಮೂಡಿಗೆರೆಯಲ್ಲಿ ನನ್ನದೇ ಗೆಲುವು, ನಾನೆ ಎಂಎಲ್ ಎ ಎಂದ ಅವರು, ಸೆಕ್ಯುಲರ್ ಕ್ಷೇತ್ರ . ನಾನಿಲ್ಲದೇ ಇದ್ದರೆ ಜೆಡಿಎಸ್ ಕಾಂಗ್ರೆಸ್ ಗೆಲ್ಲಬೇಕಿತ್ತು.ನಾನು ಸಚಿವರಿಗಿಂತ ಹೆಚ್ಚು ಕೆಲಸ ಮಾಡಿದ ತೃಪ್ತಿ ಇದೆ ಎಂದರು.