1984 ರಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಹಿಂದಿನ ಸಿಂಡಿಕೇಟ್ ಬ್ಯಾಂಕ್ ಪ್ರವರ್ತಿತ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ನಲ್ಲಿ ಒಂದಾದ ವರದಾ ಗ್ರಾಮೀಣ ಬ್ಯಾಂಕು ಕುಮಟಾದಲ್ಲಿ ಪ್ರಧಾನ ಕಛೇರಿ ಹೊಂದಿ ಇಡೀ ಜಿಲ್ಲೆಯ ಗ್ರಾಮೀಣ ಅಭಿವೃದ್ಧಿಯಲ್ಲಿ ಇತರ ಬ್ಯಾಂಕು ಗಳೊಂದಿಗೆ ಹೆಜ್ಜೆ ಹಾಕಿ ಜಿಲ್ಲೆಯ ಜನರ ಒಡನಾಡಿ ಬ್ಯಾಂಕಾಗಿ ಮನೆ ಮಾತಾಯಿತು.
ಈ ಬ್ಯಾoಕಿನ ಸಿಬ್ಬಂದಿಗಳು ಜಿಲ್ಲೆಯ ಜನರ, ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಜನರ ಮನೆ ಮನಕ್ಕೆ ಹತ್ತಿರವಾಗಿದ್ದರು ಎಂದು ಹೇಳಿದರೆ ಅತಿಶಯೋಕ್ತಿ ಅಗಲಾರದು.


31 ಶಾಖೆಗಳ ಮೂಲಕ ಸಾವಿರಾರು ಗ್ರಾಮೀಣ ಕುಟುಂಬಗಳಿಗೆ ಬ್ಯಾಂಕ್ ಸೌಲಭ್ಯ ಒದಗಿಸುತ್ತಾ ಅವರ ಆರ್ಥಿಕಾಭಿವೃದ್ಧಿಗೆ ಸಹಕಾರಿಯಾಗಿ ಜಿಲ್ಲೆಯ ಸರ್ವತೋಮುಖ ಬೆಳವಣಿಗೆಗೆ ಉತ್ತಮ ಕೊಡುಗೆ ಕೊಡುತ್ತಾ ಬಂದಿರುತ್ತದೆ.


2005 ರ ತನಕ ವರದ ಬ್ಯಾಂಕ್ ನಮ್ಮ ಬ್ಯಾಂಕ್, ವರದ ಸಿಬ್ಬಂದಿ ನಮ್ಮವರು ಎಂದು ಜಿಲ್ಲೆಯ ಮಂದಿ ನಮ್ಮೆಲ್ಲರೊಂದಿಗೆ ಬೆಸೆದು ಕೊಂಡಿದ್ದರು. 2005 ರಲ್ಲಿ ಕೇಂದ್ರ ಸರಕಾರದ ಆದೇಶದಂತೆ ಸಿಂಡಿಕೇಟ್ ಬ್ಯಾಂಕ್ ನ ನಾಲ್ಕು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಾದ ಬಿಜಾಪುರ ಗ್ರಾಮೀಣ ಬ್ಯಾಂಕ್, ಮಲಪ್ರಭಾ ಗ್ರಾಮೀಣ ಬ್ಯಾಂಕ್, ವರದ ಗ್ರಾಮೀಣ ಬ್ಯಾಂಕ್ ಮತ್ತು ನೇತ್ರಾವತಿ ಗ್ರಾಮೀಣ ಬ್ಯಾಂಕ್ ಗಳು ವೀಲಿನ ಗೊಂಡು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಎಂಬ ಹೆಸರಿನಿಂದ ದಾರವಾಢದಲ್ಲಿ ಪ್ರಧಾನ ಕಛೇರಿ ಹೊಂದಿ ಕರ್ನಾಟಕದ 9 ಜಿಲ್ಲೆ ಗಳಲ್ಲಿ ಬ್ಯಾಂಕಿನ ಸೇವೆ ಒದಗಿಸುತ್ತ ಬಂದಿರುವುದು ಹೆಮ್ಮೆಯ ವಿಷಯ. ಈ ಹಿಂದಿನ ವರದಾ ಗ್ರಾಮೀಣ ಬ್ಯಾಂಕಿನ ಪ್ರದಾನ ಕಛೇರಿ ಈಗ ಕೆ ವಿ ಜಿ ಬ್ಯಾಂಕಿನ ಕುಮಟಾ ಪ್ರಾದೇಶಿಕ ಕಛೇರಿಯಾಗಿ ಮಾರ್ಪಟ್ಟಿರುತ್ತದೆ. ಕೆವಿಜಿ ಬ್ಯಾoಕಾಗಿ 18 ಕಳೆದರೂ ಜಿಲ್ಲೆಯ ಬ್ಯಾಂಕಿನ ಗ್ರಾಹಕರ ಬಾಯಲ್ಲಿ ಈಗಲೂ ವರದಾ ಬ್ಯಾಂಕ್ ಎಂದೇ ಉಳಿದಿರುವುದು ನಮ್ಮೆಲ್ಲರ ಸೌಭಾಗ್ಯ. 1985 ರಿಂದ 2005 ರ ತನಕ ಈ ನಮ್ಮ ವರದ ಬ್ಯಾಂಕಿನಲಿ ಸೇವೆ ಸಲ್ಲಿಸಿದ್ದ ಸುಮಾರು 100 ಕ್ಕೂ ಹೆಚ್ಚು ಸಿಬ್ಬಂದಿಗಳು ತಮ್ಮ ಕುಟುಂಬ ಸಮೇತ ಇದೆ ಏಪ್ರಿಲ್ 08 ಶನಿವಾರ 2023 ರಂದು ಮುರ್ಡೇಶ್ವರದ ಪುಷ್ಕರ ಬೀಚ್ ರೆಸಾರ್ಟ್ ನಲ್ಲಿ ಮೊದಲ ಬಾರಿ ಎಲ್ಲ ತಮ್ಮ ವರದಾ ಸಹೋದ್ಯೋಗಿ ಗೆಳೆಯರೊಂದಿಗೆ ಸೇರಿ ಹಳೆ ನೆನಪು, ಹೊಸ ಕನಸು ಹಂಚಿ ಕೊಂಡು, ಎಲ್ಲ ಬೆರೆತು ಆಟ-ಆಡಿ, ನಕ್ಕು-ನಲಿದು ಸಂಭ್ರಮಿಸಿ ತಮ್ಮ ನೆನಪಿನ ಬುತ್ತಿ ಬಿಚ್ಚಿ ಕೊಂಡರು. ಹೀಗೆ ಸೇರಿ ಆನಂದಿಸಿದ್ದು ಮರೆಯಲಾಗದ ಕ್ಷಣ ಎಂದು ಆದಿನ ಸೇರಿದ ಎಲ್ಲಾ ಸದಸ್ಯರು ಅಭಿಪ್ರಾಯ ಪಟ್ಟರು.

RELATED ARTICLES  ಕಳೆದುಹೋದ‌ ಎಳೆಯ ದಿನಗಳು ಭಾಗ ೧೪


ಕಾರ್ಯಕ್ರಮದ ಪ್ರಾರಂಭದಲ್ಲಿ, ಅಗಲಿದ ಬ್ಯಾಂಕಿನ ಅಧ್ಯಕ್ಷರಾದಿಯಾಗಿ ತಮ್ಮೊಂದಿಗೆ ಕೆಲಸಮಾಡಿ ಸಹದ್ಯೋಗಿಗಳನ್ನು ನೆನಪಿಸಿ ಎಲ್ಲರಿಗೂ ಶ್ರದ್ದಾಂಜಲಿ ಅರ್ಪಿಸಲಾಯ್ತು.


ನಂತರ ವಿಶೇಷ ಆಮಂತ್ರಿತರಾಗಿ ಆಗಮಿಸಿದ, ವಿಜಯ ಬ್ಯಾಂಕಿನ ನಿವೃತ್ತ ಎಕ್ಸಿಕ್ಯೂಟಿವ್ ಶ್ರೀ ಎಂ ಆರ್ ನಾಯ್ಕ್ ರವರು ವರದ ಕುಟುಂಬದ ಸದಸ್ಯರ ಜೊತೆಗೆ ತಮ್ಮ ಅನುಭವವನ್ನು ಹಂಚಿ ಕೊಂಡು ತಮ್ಮ ಎಂದಿನ ವಾಕ್ಚತುರ್ಯ ದಿಂದ ರಂಜಿಸಿದ್ದು ವಿಶೇಷ ವಾಗಿತ್ತು. ನಂತರ ವಿಶೇಷ ಮನರಂಜನಾ ಕಾರ್ಯಕ್ರಮದ ಮೂಲಕ ಕಾರ್ಯಕ್ರಮವನ್ನು ಮುಕ್ತಾಯ ಗೊಳಿಸಲಾಯ್ತು.

RELATED ARTICLES  ಶೂನ್ಯದಿಂದಲ್ಲ ಸೃಷ್ಟಿ


ಈ ಕಾರ್ಯಕ್ರಮ ನೆಡೆಸುವಲ್ಲಿ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಕಾರ್ಯಕ್ರಮ ಯಶಸ್ವಿ ಗೊಳಿಸಿದ ಶ್ರೀಕಾಂತ ಹೊಳ್ಳ ರವರನ್ನು ವರದ ಕುಟುಂಬದ ಸದಸ್ಯರು ಮತ್ತು ಶ್ರೀ ಎಂ ಆರ್ ನಾಯ್ಕ್ ರವರು ಸನ್ಮಾನಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವರದಾ ಬ್ಯಾಂಕಿನ ಉತ್ತಮ ಗ್ರಾಹಕರಾದ ಶ್ರೀ ತಿಲಕ್ ರಾವ್, ಶ್ರೀ ಎಂ ಡಿ ಮೇತ್ಯು, ಶ್ರೀ ಪಾಂಡುರಂಗ ಹಾವಳಿಮನೆ, ಸತೀಶ್ ನಾಯ್ಕ್, ಶ್ರೀ ಶಿವಾನಂದ ದೈಮನೆ ಮತ್ತು ಶ್ರೀ ಚಂದ್ರಕಾಂತ್ ನಾಯಕ್ ಇವರು ವರದಾ ಬ್ಯಾಂಕಿನ ನೌಕರರ ಸೇವೆ ಯನ್ನು ಸ್ಮರಿಸಿದರು ಹಾಗೂ ತಮ್ಮ ಆರ್ಥಿಕ ಉನ್ನತಿಗೆ ಬ್ಯಾಂಕು ನೀಡಿದ ಸಹಕಾರಕ್ಕೆ ಧನ್ಯವಾದ ಸಮರ್ಪಿಸಿದರು.
ವಿಶೇಷ ಆಹ್ವಾನಿತರನ್ನು ಶ್ರೀ ವಿಶ್ವೇಶ್ವರ ಯಾಜಿ ಹಾಗೂ ಶ್ರೀ ಎ. ಪ್ರಕಾಶ ಸನ್ಮಾನಿಸಿ ಸ್ಮರಣಿಕೆ ನೀಡಿ ಗೌರವಿಸಿದರು. ಹಿರಿಯ ಸಹದ್ಯೋಗಿಗಳಾದ ಮಲ್ಲಿನಾಥ್ ಮಾಪಾರಿ,ಶ್ರೀಕಾಂತ್ ಹೆಗ್ಡೆ, ನಾಗರಾಜ್ ಶಿರಸಿಕರ್, ಚಂದ್ರಕಾಂತ್ ಹೆಬ್ಬಾರ್, ಲಕ್ಷ್ಮೀನಾರಾಯಣ ಹೆಗ್ಡೆ,ಗಣಪತಿ ಬಾಗವತ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಶ್ರೀ ನಾರಾಯಣ ಯಾಜಿ ಯವರು ಪ್ರಸ್ತಾವನೆ ಮಾಡಿದರು ಹಾಗೂ ಕೊನೆಯಲ್ಲಿ ಶ್ರೀ ರಘುಪತಿ ಹೆಗ್ಡೆಯವರು ವಂದನಾರ್ಪಣೆ ಗೈದರು.