ಕಾವ್ಯೇಶು ನಾಟಕಂ ರಮ್ಯಂ ಎಂಬ ಮಾತಿನಂತೆ ಎಲ್ಲಾ ಕಲಾಪ್ರಕಾರಗಳಲ್ಲಿ ನಾಟಕವು ಅತ್ಯಂತ ಸುಂದರವಾದದ್ದು.ಆದರೆ ಆಧುನಿಕ ಯುಗದಲ್ಲಿ ದೃಶ್ಯ ಮಾಧ್ತಮದ ಅಬ್ಬರದ ಮುಂದೆ ಮನೆಯಲ್ಲಿಯೇ ಕುಳಿತು ಟಿವಿಯನ್ಬೋ ಮೊಬೈಲ್ ನ್ನೋ ನೋಡುತ್ತ ಅದರಲ್ಲಿಯೇ ತಮಗೆ ಬೇಕಾದ ಮನರಂಜನೆಯನ್ನು ಪಡೆದುಕೊಳ್ಲುವ ಮಂದಿ ಮನೆ ಬಿಟ್ಟು ಹೊರಹೋಗದ ಕಾರಣ ಇಂದು ಯಕ್ಷಗಾನ ನಾಟಕ ಮೊದಲಾದ ಕಲಾ ಪ್ರಕಾರಗಳನ್ನು ಸಂಪೂರ್ಣವಾಗಿ ನೋಡಿ ಆನಂದಿಸುವವರ ಸಂಖ್ಯೆ ಅತ್ಯಲ್ಪ ಆಗಿದೆ.ಪರಿಣಾಮ ರಾತ್ರಿ ಇಡೀ ಪ್ರದರ್ಶನಗಳ ಬದಲು ಕಾಲಮಿತಿಯ ಪ್ರಯೋಗ ಪ್ರಾರಂಭ ಆಗಿದೆ.ಮೊದಲೆಲ್ಲ ಇವುಗಳನ್ನು ನೋಡಲು ಕುತೂಹಲ ಭರಿತರಾಗಿ ಕಿಕ್ಕಿರಿದು ನೆರೆಯುವ ಜನ ಸಂದೋಹ ಇತ್ತಂತೆ !
ಇಂಥಹ ಒಂದು ನೆನಪನ್ನು ಹಸಿಯಾಗಿಸಿದ್ದು ಇದೇ ಎಪ್ರಿಲ್ ಹದಿನೈದರ ಶನಿವಾರ.
ಕುಮಟಾದ ರಾಜೇಂದ್ರ ಪ್ರಸಾದ ಸಭಾಭವನದ ಬಳಿಯ ಬಯಲು ರಂಗ ಮಂದಿರದಲ್ಲಿ ಇತ್ತೀಚೆಗಷ್ಟೇ ಹೊಸದಾಗಿ ಸ್ಥಾಪಿತಬಾದ ಸಾಂಸ್ಕೃತಿಕ ಸಂಘಟನೆ ರಂಗ ಸಾರಸ್ವತದ ಮೊದಲ ಪ್ರಯೋಗ ಖ್ಯಾತ ನಟ ನಿದೇಶಕ ರಂಗ ಕರ್ಮಿ ಎನಿಸಿದ ಕಾಸರಗೋಡು ಚಿನ್ನಾ ಅವರ ರಂಗ ಚಿನ್ನಾರಿ ತಂಡ ಪ್ರದರ್ಶಿಸಿದ ಕೊಂಕಣಿಯ ನಾಟಕ ” ಗಾಂಟಿ’
ಕುಮಟಾದ ಪರಿಸರದಲ್ಲಿ ಗಾಂಟಿ ಒಂದು ಬಗೆಯ ವಿಶೇಷ ತಿಂಡಿ ,ಆದರೆ ಕೊಂಕಣಿಯಲ್ಲಿ ಇದರ ಅರ್ಥ ಗಂಟು’ ಅಥವಾ ಸಂಪತ್ತು
ಈ ನಾಟಕದ ಪ್ರಮುಖ ಪಾತ್ರ ಶಿನ್ನಾ ಎಂಬ ಹೆಡ್ಡ . ಮನೆಗೆಲಸದವನಾದ ಇವನ ಬಗ್ಗೆ ಎಲ್ಲರೂ ತಿರಸ್ಕಾರ ಹೊಂದಿದ್ದರೂ ಈತನಿಗೆ ಆಕಸ್ಮಿಕವಾಗಿ ದೊರೆತ ಲಾಟರಿಗೆ ಬೆರಗಾಗಿ ದೊರೆವ ರಾಜೋಪಚಾರ,ಅದರ ಬಳಿಕ ಅದು ಸುಳ್ಳೆಂದು ಗೊತ್ತಾಗಿ ಮತ್ತೆ ತಿರಸ್ಕಾರ ಬಳಿಕ ಅದು ಸತ್ಯ ಎಂದಾದಾಗ ಮತ್ತೆ ಮಮಕಾರ ಹೀಗೆ ತುಮುಲಗಳನ್ನೆಬ್ಬಿಸುತ್ತಾ ಈ ಜಗದಲ್ಲಿ ಹಣ ಇದ್ದವನಿಗೆ ಸಿಗುವ ಮರ್ಯಾದೆ ಹಣ ಇಲ್ಲದವನಿಗೆ ಆಗುವ ಅಪಮಾನಗಳ ಸಾರಸತ್ಯದ ದರ್ಶನವೇ ಈ ಗಾಂಟಿ.
ರಂಗಸಾರಸ್ವತ ಎಂಬ ಸಂಘಟನೆಯ ನೊಗ ಹೊತ್ತವರು ಹವ್ಯಾಸಿ ಕಲಾವಿದರು ,ಉತ್ತಮ ವಾಗ್ಮಿಗಳು ಎನಿಸಿದ ಕುಮಟಾದ ಕೊಂಕಣ ಎಜ್ಯುಕೇಶನ ಟ್ರಸ್ಟನ ಕನ್ನಡ ಶಿಕ್ಷಕ ಕಾಗಾಲ ಚಿದಾನಂದ ಭಂಡಾರಿಯವರು .ಸಮಾನ ಮನಸ್ಕ ಸ್ನೇಹಿತರೊಂದಿಗೆ ಕಾಸರಗೋಡು ಚಿನ್ನಾ ಅವರ ಅನುಗಾಲ ಮಾರ್ಗದರ್ಶನದಲ್ಲಿ ನಡೆವ ಅವರ ತಂಡದ ಪಾಲಿಗೆ ಈ ನಾಟಕ ಪ್ರದರ್ಶನ ಒಂದು ಕಠಿಣ ಸವಾಲಾಗಿತ್ತು.
ನೀತಿ ಸಂಹಿತೆ ,ಎಸ್,ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ಸಂದರ್ಭದಲ್ಲಿ ಪ್ರಚಾರ ಮಾಡುವುದು ಕಷ್ಟಕರ ಎನಿಸಿ ಇನ್ನೆಲ್ಲಿ ನಾಟಕಕ್ಕೆ ಪ್ರೇಕ್ಷಕರ ಕೊರತೆ ಕಾಡಬಹುದು ಮಬ ಅನುಮಾನ ಇತ್ತು.ಬರೀ ಮೊಬೈಲ್ ಕರೆಗಳ ಮೂಲಕ ವಾಟ್ಸಪ್ ಫೇಸ್‌ಬುಕ್ ಸಂದೇಶದ ಮೂಲ ನಡೆದ ಪ್ರಚಾರಕ್ಕೆ ಸ್ಪಂದಿಸಿ ನೆರೆದ ಜನ ಸಂದೋಹ ನಿಜಕ್ಕೂ ಬೆರಗುಂಟು ಮಾಡುವಂತಿತ್ತು.ಅಜಮಾಸು ಐನೂರಕ್ಕೂ ಅಧಿಕ ಮಂದಿ ಕದಲದೇ ನಾಟಕ ವೀಕ್ಷಣೆ ಮಾಡಿದ್ದು ಒಂದೇ ಒಂದು ಸದ್ದು ಗದ್ದಲ ಗೊಂದಲಗಳಾಗದೇ ಇದ್ದದ್ದು ನಿಜಕ್ಕೂ ಮೆಚ್ಚುವಂತಹ ಸಂಗತಿ ಆಗಿತ್ತು.ಆರಂಭದಿಂದ ಕೊನೆಯವರೆಗೂ ಪ್ರತೀ ಪಾತ್ರಧಾರಿಗಳು ಎಲ್ಲಿಯೂ ಎಡವದೇ ಮಾಡಿದ ಮನೋಜ್ಞ ಅಭಿನಯ ಆಗಮಿಸಿದ್ದ ಅನೇಕ ಗಣ್ಯಾತಿಗಣ್ಯರನ್ನೂ ಕಡೆಯವರೆಗೂ ಕಟ್ಟಿಹಾಕಿತ್ತು.ಕೆಲವರಮನತೂ ಕಾಸರಗೋಡು ಚಿನ್ನಾ ಎಂಬ ದೈತ್ಯ ಪ್ರತಿಭೆಯ ಅಮೋಘ ಅಭಿನಯಕ್ಕೆ ಶರಣಾದರು ,ಕೆಲವರ ಕಣ್ಣಾಲೆಗಳು ಜಿನುಗಿದವು ಅಷ್ಟರ ಮಟ್ಟಿಗೆ ಗಾಂಟಿ ಯಶಸ್ವಿಯಾಯಿತು
.
ಈ ಕಾರ್ಯಕ್ರಮದ ಇನ್ನೊಂದು ಐತಿಹಾಸಿಕ ಘಟ್ಟ ಎಂಬಂತೆ ಆರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೊಂಕಣಿ ಭಾಷಿಕ ಹಲವಾರು ಸಮುದಾಯದ ಪ್ರಮುಖರು ವೇದಿಕೆಯನ್ನು ಹಂಚಿಕೊಂಡಿದ್ದು.ಇದರಲ್ಲಿ ಎಲ್ಲಾ ಸ್ತರದ ಸಮುದಾಯಗಳು ಇದ್ದದ್ದು ವಿಶೇಷ ಎನಿಸಿತ್ತು.ಉದ್ಘಾಟಕರಾದ ಕೊಂಕಣಿ ಪರಿಷದ್ ಕುಮಟಾದ ಉಪಾಧ್ಯಕ್ಷ ಶಿಕ್ಷಣ ಪ್ರೇಮಿ ಮುರಳೀಧರ ಪ್ರಭು ಅವರು ಈ ಬಗ್ಗೆ ಸಂತೋಷವ್ಯಕ್ತ ಪಡಿಸಿ ಕೊಂಕಣಿ ಭಾಷೆಯ ಕುರಿತಾದ ಕಳಕಳಿಯನ್ನು ವ್ಯಕ್ತಪಡಿಸಿದರೆ ತಮ್ಮ ಎಂದಿನ ಹಾಸ್ಯಭರಿತ ಶೈಲಿಯಲ್ಲಿಯೇ ದಿಕ್ಸೂಚಿ ನುಡಿಗಳನ್ನಾಡಿದ ಚಿನ್ನಾ ಅವರು ಉತ್ತರಕನ್ನಡದ ಜಿಲ್ಲೆಯ ಕುಮಟಾವನ್ನು ಕೇಂದ್ರವಾಗಿಸಿಕೊಂಡು ಬರುವ ದಿನಗಳಲ್ಲಿ ರಂಗ ಸಾರಸ್ವತದ ಮೂಲಕ ಮೌಲ್ಯಯುತವಾದ ಹಲವಾರು ಕಾರ್ಯಕ್ರಮಗಳನ್ನು ನೀಡುವುದಾಗಿ ತಿಳಿಸಿ ಕೊಂಕಣಿಯ ಸಾಂಸ್ಥಿಕ ಕೇಂದ್ರವಾಗಿ ಕುಮಟಾ ಬೆಳಗಲಿದೆ ಎಂಬ ಆಶಯ ವ್ಯಕ್ತ ಪಡಿಸಿದರು.
ಒಟ್ಟಾರೆಯಾಗಿ ಆರಂಭದಿಂದ ಅಂತ್ಯದವರೆಗೆ ಭಾಷೆಯ ಬೇಧ ಇಲ್ಲದೇ ಎಲ್ಲರನ್ನೂ ಗಂಟು ಹಾಕಿ ಬೆಸೆದ ಗಾಂಟಿ ನಾಟಕ ಬಹುಕಾಲ ಕುಮಟಾದ ಸಹೃದಯಿಗಳ ಮನದಲ್ಲಿ ಶಾಶ್ವತ ಮನೆಮಾಡುವಲ್ಲಿ ಯಶಕಂಡಿತು.