ಕುಮಟಾ : ಹಿಂದಿನ ವರ್ಷ 32 ಸಾವಿರ ಅಂತರದಲ್ಲಿ ಜಯಗಳಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಅದಕ್ಕೂ ಹೆಚ್ಚಿನ ಮತಗಳೊಂದಿಗೆ ಆಯ್ಕೆಯಾಗುವುದಾಗಿ ದಿನಕರ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಬಹಿರಂಗ ಪ್ರಚಾರದ ಕೊನೆಯ ದಿನವಾದ ಸೋಮವಾರ ಪಟ್ಟಣದಲ್ಲಿ ಅಪಾರ ಬೆಂಬಲಿಗರೊಂದಿಗೆ ಪಾದಯಾತ್ರೆ ನಡೆಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

ನಮ್ಮ ಕ್ಷೇತ್ರಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಅನುದಾನವನ್ನು ಬಿಜೆಪಿ ಸರಕಾರ ನೀಡಿದೆ. ಮೋದಿಯವರ ಆಡಳಿತ ವೈಕರಿಗೆ ಜನತೆ ಸಂತೋಷದಿಂದ ಇದ್ದಾರೆ. ಈಗ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಸೆಮಿಫೈನಲ್ ರೀತಿಯಲ್ಲಿದ್ದು, ಮುಂದಿನ ಲೋಕಸಭೆ ಚುನಾವಣೆ ಫೈನಲ್ ಆಗಲಿದೆ. ಸೆಮಿಫೈನಲ್ ನಲ್ಲಿ ವಿಜೇತರಾಗಿ ನಂತರ ಫೈನಲ್ ಮ್ಯಾಚ್ ಆಡಿ ಜಯಗಳಿಸಲಿದ್ದೇವೆ. ಸುಭದ್ರ ದೇಶಕ್ಕಾಗಿ ಮೋದಿಯವರನ್ನು ಮನಸ್ಸಿನಲ್ಲಿಟ್ಟುಕೊಂಡು ಜನತೆ ಮತ ಚಲಾಯಿಸುತ್ತಾರೆ. ಹೀಗಾಗಿ ಈ ಬಾರಿಯ ಗೆಲುವು ನಿಶ್ಚಿತವಾಗಿದ್ದು, ಹಿಂದೆ ಪಡೆದ ಜನಬೆಂಬಲಕ್ಕಿಂತ ಹೆಚ್ಚಿನ ಸ್ಪಂದನೆ ಇದೀಗ ಲಭ್ಯವಾಗುತ್ತಿದೆ. ಹೀಗಾಗಿ ಬಹುಹೆಚ್ಚು ಅಂತರದಲ್ಲಿ ಗೆಲವು ಸಾಧಿಸುವ ವಿಶ್ವಾಸ ನನಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದರು.

RELATED ARTICLES  ಸನ್ಮಾರ್ಗವೇ ಜೀವನದ ಹರುಷ ಲೇಖನ ಮಾಲಿಕೆ

ಹೆಗಡೆ ಕ್ರಾಸ್ ಸಮೀಪದ ಬಿಜೆಪಿ ಕಚೇರಿಯಿಂದ ಹೊರಟಪಾದಯಾತ್ರೆ, ನೆಲ್ಲಿಕೇರಿ, ಗಿಬ್ ಸರ್ಕಲ್ ಮಾರ್ಗವಾಗಿ ಪಟ್ಟಣದ ಒಳಹೊಕ್ಕು ಹಳೆ ಬಸ್ ನಿಲ್ದಾಣದ ಮಾರ್ಗವಾಗಿ ಬಂದು ಪುನಃ ಬಿಜೆಪಿ ಕಚೇರಿಯಲ್ಲಿ ಸಮಾಪ್ತಿಗೊಂಡಿತು.

RELATED ARTICLES  ಮದುವೆ ಮನೆಯಲ್ಲಿ ವಧು ವರರು ಗನ್ ಹಿಡಿದರು : ಮುಂದೆ ನಡೆದಿದ್ದು ಅನಾಹುತ.

ಗೋವಾದ ವಾಸ್ಕೋದ ಶಾಸಕ ಕೃಷ್ಣ ಸಾಲ್ಕರ್, ಸುಬ್ರಾಯ ವಾಳ್ಕೆ, ಎನ್.ಎಸ್ ಹೆಗಡೆ, ಗಜಾನನ ಪೈ, ಹೇಮಂತ ಗಾಂವ್ಕರ್ ಹಾಗೂ ಅಪಾರ ಅಭಿಮಾನಿಗಳು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.