ಕುಮಟಾ : ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ಜೆ.ಡಿ.ಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಕುಮಟಾ ಪಟ್ಟಣದಲ್ಲಿ ಪಾದಯಾತ್ರೆ ನಡೆಸಿ ಜನರ ಮತ ಯಾಚಿಸಿದರು.
ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಾ ಹೋರಾಟದ ಮೂಲಕ ರಾಜಕೀಯ ಪ್ರವೇಶಿಸಿರುವ ಸೋನಿ ಈ ವರ್ಷ ಅಪಾರ ಪ್ರಮಾಣದ ಜನ ಬೆಂಬಲ ನಿರೀಕ್ಷಿಸಿ ಚುನಾವಣಾ ಕಣದಲ್ಲಿದ್ದಾರೆ.
ಎರಡು ಬಾರಿ ಪ್ರಚಾರಕ್ಕಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕುಮಟಾ ಪಟ್ಟಣಕ್ಕೆ ಬಂದಿದ್ದು ಸೂರಜ್ ಸೋನಿಗೆ ಇನ್ನಷ್ಟು ಬಲ ಬಂದಿದೆ. ಇಂದು ತಾಲೂಕಿನ ಹೃದಯ ಭಾಗದಲ್ಲಿರುವ ಶ್ರೀಶಾಂತಿಕಾ ಪರಮೇಶ್ವರಿ ದೇವಾಲಯದಿಂದ ಹೊರಟು ಕುಮಟಾ ಪಟ್ಟಣ ಮಾರ್ಗವಾಗಿ ಹಳೆ ಬಸ್ ನಿಲ್ದಾಣದ ಮೂಲಕ ಮಾಸ್ತಿ ಕಟ್ಟಿಗೆ ಬಂದು ಪಾದಯಾತ್ರೆ ಸಂಪನ್ನಗೊಂಡಿತು.